ಅಪ್ಪು ಹುಟ್ಟುಹಬ್ಬದಂದೇ ಗೃಹಪ್ರವೇಶ ಮಾಡಿದ  ಅಪ್ಪು ಅಭಿಮಾನಿ ಕುಪ್ಪನಕೆರೆ  ಪುಟ್ನಂಜ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.19 :-  ಅಪ್ಪುವಿನ ಅಪ್ಪಟ ಅಭಿಮಾನಿಯೊಬ್ಬ ಇದೇ ಮಾರ್ಚ್ 17ರಂದು ಕುಪ್ಪಿನಕೆರೆ ಗ್ರಾಮದ  ತನ್ನ ಮನೆಯ ‘ಕಸ್ತೂರಿ ನಿವಾಸ’ವನ್ನು  ಅಪ್ಪು ಹುಟ್ಟಿದ ದಿನದಂದು ಗೃಹಪ್ರವೇಶ ಮಾಡಿ ಅಭಿಮಾನ ಮೆರೆದಿದ್ದಾನೆ.
ಹೌದು ಅಪ್ಪುವಿನ ಅಪ್ಪಟ ಅಭಿಮಾನಿ ಕುಪ್ಪಿನಕೆರೆ ಪುಟ್ನಂಜ ಈತನು  ಗ್ರಾಮದ ದಲಿತ ಕಾಲೋನಿಯಲ್ಲಿರುವ ತನ್ನ ಹಳೇ ಮನೆಯನ್ನು ಕೆಡವಿ ತಂದೆ ಹಾಗೂ ಚಿಕ್ಕಪ್ಪಂದಿರು ಮೂರ್ನಾಕು  ಜನ ಕುಟುಂಬದ ಸದಸ್ಯರೇ ಸೇರಿ ಕಾಲೋನಿಯಲ್ಲಿ ಸುಂದರ ಮನೆ ನಿರ್ಮಿಸಿ ಅದಕ್ಕೆ ಕಸ್ತೂರಿ ನಿವಾಸ ಎಂದು ನಾಮಕರಣ ಮಾಡಿದ್ದಾರೆ ಅಲ್ಲದೆ ಅಪ್ಪು ಅಭಿಮಾನಿ ಪುಟ್ನoಜ ತಾನೊಂದು ಕಾರು ಮಾಡಿಕೊಂಡು ಅದರಿಂದ ದುಡಿಮೆ ಕಂಡುಕೊಂಡಿದ್ದು ಆ ಕಾರಿನ ಹಿಂಭಾಗ ದೊಡ್ಮನೆ ಎಂದು ಬರೆಸಿದ್ದಾನೆ. ಅಪ್ಪು ಹುಟ್ಟಿದ ದಿನದಂದೆ ಮನೆಯ ಬಣ್ಣದ ಕೆಲಸ ಬಾಕಿ ಇದ್ದರೂ ಗೃಹಪ್ರವೇಶವನ್ನು ಮಾರ್ಚ್ 17ರಂದು ಗೃಹಪ್ರವೇಶದ ಪೂಜಾಕಾರ್ಯ ಸಂದರ್ಭದಲ್ಲಿ ಅಪ್ಪುವಿನ ಫೋಟೋ ಇಟ್ಟು ಅದಕ್ಕೂ ಪೂಜೆ ನೆರವೇರಿಸಿದ ಅಭಿಮಾನಿ ಅಪ್ಪುವಿನ ಹುಟ್ಟುಹಬ್ಬದ ನಿಮಿತ್ತ ಗೃಹಪ್ರವೇಶದ ಹೆಸರಿನಲ್ಲಿ ನೂರಾರು ಅತಿಥಿಗಳನ್ನು ಕರೆದು ಭೋಜನ ವ್ಯವಸ್ಥೆ ಮಾಡಿ ಅಪ್ಪುವಿನ ಮೇಲಿನ  ಅಭಿಮಾನ ಮೆರೆಸಿದ್ದಾನೆಂದು  ಹೇಳಬಹುದಾಗಿದೆ.

One attachment • Scanned by Gmail