ಅಪ್ಪು ವೈಭವ ಅಪ್ಪು ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮ

ದಾವಣಗೆರೆ.ಮಾ.೨೦: ಮನುಷ್ಯ ಜೀವನದಲ್ಲಿ ಬದುಕಿದ್ದಾಗ ಏನೆಲ್ಲಾ ಸಂಪಾದಿಸುತ್ತಾನೆ. ಆದರೆ ಸತ್ತ ನಂತರ ಅವೆಲ್ಲವನ್ನೂ  ಕೊಂಡೊಯ್ಯುವುದಿಲ್ಲ ಎನ್ನುವುದು ಸತ್ಯ. ಆದರೆ ಪುನೀತ್ ರಾಜ್‍ಕುಮಾರ್ ತಾವು ಸತ್ತ ನಂತರವೂ ಅವರ ಆದರ್ಶ ಮತ್ತು ತತ್ವಗಳನ್ನು ನಮ್ಮೆಲ್ಲರಿಗೂ ಬಿಟ್ಟು ಹೋಗಿದ್ದಾರೆ. ಅವರಂತೆ ನಾವುಗಳು ಶೇಕಡಾ 1ರಷ್ಟು ಕೆಲಸ ಮಾಡಿದರೆ ದೇಶದಲ್ಲಿ ಬಡವರು ಯಾರೂ ಇರುವುದಿಲ್ಲ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸದಾಸ ಕರಿಯಪ್ಪ ತಿಳಿಸಿದರು‌.ನಗರದ ಜಯದೇವ ವೃತ್ತದ ಬಳಿ ಇರುವ ಶಿವಯೋಗ ಮಂದಿರದಲ್ಲಿ ಹರ ಮ್ಯೂಸಿಕಲ್ ವರ್ಲ್ಡ್  ಹಾಗೂ ಶ್ರೀನಿವಾಸ್ ದಾಸ ಕರಿಯಪ್ಪ ಇವರ ಆಯೋಗದಲ್ಲಿ ಆಯೋಜಿಸಲಾಗಿದ್ದ ಅಪ್ಪು ವೈಭವ ಅಪ್ಪು ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪುನೀತ್ ರಾಜ್‍ಕುಮಾರ್ ಬದುಕಿದ್ದಾಗ ತಾವು ಮಾಡಿದ್ದ ಯಾವುದೇ ಕೆಲಸಗಳನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳಲಿಲ್ಲ. ಅವರ ಮರಣ ನಂತರ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ವಿವಿದೆಢೆ ಅವರು ಮಾಡಿರುವ ಸತ್ಕಾರ್ಯಗಳು ಬೆಳಕಿಗೆ ಬಂದವು. ಅಂತಹ ಮಹಾನ್ ವ್ಯಕ್ತಿಯಿಂದ ನಾವು ಕಲಿಯಬೇಕಾದ ಮುಖ್ಯ ಅಂಶವೇನೆಂದರೆ ನಾವು ಬದುಕುದ್ದಾಗ ಕಷ್ಟದಲ್ಲಿ ಇರುವವರಿಗೆ ಏನಾದರೂ ಸಹಾಯ ಮಾಡಬೇಕೆಂದು ಅನ್ನಿಸುತ್ತದೆ. ಪುನೀತ್ ಅವರು ಮಾಡಿರುವ ಸಾಧನೆ, ಪರೋಪಕಾರದ ಕೆಲಸಗಳಿಗಾಗಿ ರಾಜ್ಯ ಸರ್ಕಾರ ದಾವಣಗೆರೆಯಲ್ಲಿ ಮಾತ್ರವಲ್ಲದೆ ರಾಜ್ಯದ ಪ್ರತಿ ತಾಲೂಕುಗಳಲ್ಲಿ ಅಪ್ಪು ಅವರ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.