ಅಪ್ಪು ನೆನಪಿನ ಗೀತೆ ಅನಾವರಣ

ಅಪ್ಪು ನೆನಪಿನ ” ಪುನೀತನಾದೆ …’ ಹಾಗೂ ’ತೆರೆಯಲಿ ಮೆರಗು ನಿನ್ನದೇ …’ಎಂಬ ಗೀತೆಗಳು ಬಿಡುಗಡೆಯಾಗಿವೆ.
ಪುನೀತನಾದೆ… ಗೀತೆಗೆ ಸಾಹಿತ್ಯ ಬರೆದಿರುವ ಸಾಹಿತಿ ದೊಡ್ಡರಂಗೇಗೌಡ ಅವರು ’ಪುನೀತ್ ಸಂಸ್ಮರಣೆ ನಿಮಿತ್ಯ ನನಗೆ ಹೊಸ ಅನುಭವ . ಉದಯಶಂಕರ್, ರಾಜನ್ ನಾಗೇಂದ್ರ, ವ್ಯಾಸರಾವ್ ಮುಂತಾದ ದಿಗ್ಗಜರೊಂದಿಗೆ ಪುನೀತ್ ಅವರನ್ನು ಮಗುವಾಗಿದ್ದಾಗಿನಿಂದ ಎತ್ತಿಮುದ್ದಾಡಿಸಿದ್ದೇನೆ. ಈಗ ಅವರ ಸಂಸ್ಮರಣೆ ಗೀತ ರಚನೆ ನನಗೆ ತುಂಬಾ ಗೌರವದೊಂದಿಗೆ ನೋವನ್ನು ತಂದು ಕೊಟ್ಟ ಸಂಗತಿಯಾಗಿದೆ.
ಪುನೀತ್ ಸಮಾಜ ಸೇವೆ, ಪ್ರಾಣಿ ದಯೆ, ಗೋರಕ್ಷಣೆಯಂತಹ ಸೇವೆಗಳಿಂದ ಪ್ರಭಾವಿತನಾಗಿದ್ದೇನೆ’ ಎಂದರು.
ಸಂಗೀತ ನಿರ್ದೇಶಕ ವಿ. ಮನೋಹರ್, ಅಣ್ಣಾವರ ಫ್ಯಾಮಿಲಿಯೊಂದಿಗೆ ’ಜನ್ಮದ ಜೋಡಿ’ಯಿಂದ ನಂಟು ಹೊಂದಿದ್ದೇನೆ. ದೊಡ್ಡರಂಗೇಗೌಡರೊಂದಿಗೆ ಪುನೀತ್ ಬಗ್ಗೆ ಈ ಗೀತೆಯನ್ನು ಕನ್ನಡನಾಡಿಗೆ ಅರ್ಪಿಸಿದ್ದು, ಪುನೀತ್ ಬಗ್ಗೆ ವಿಶೇಷ ಗೌರವ ನಮನ ಸಲ್ಲಿಸಿರುವ ಭಾಗ್ಯ ನನ್ನದಾಗಿದೆ’ ಎಂದರು. ಅಜಯ್ ವಾರಿಯರ್ ಗಾಯನವಿದೆ.
“’ತೆರೆಯಲಿ ಮೆರಗು ನಿನ್ನದೇ …’ ಗೀತೆಗೆ ಕೊಗುಂಡಿ ಪೆನ್ನಯ್ಯ ಸಾಹಿತ್ಯ, ರಮೇಶ್ ಕೃಷ್ಣ ಸಂಗೀತ ಹಾಗೂ ಕಾರ್ತಿಕ್ ನಾಗಲಪುರ ಧ್ವನಿ ಇದೆ.
ಮ್ಯೂಸಿಕ್ ಬಾಕ್ಸ್ ದಿಲೀಪ್ ಕುಮಾರ್ ಮಾತನಾಡಿ ಎರಡು ಗೀತೆಗಳು ಈಗಾಗಲೇ ಮ್ಯೂಸಿಕ್ ಬಾಕ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಕಂಡಿವೆ ಎಂದರು .