ಅಪ್ಪು ನಿಧನ ಕರುನಾಡಿಗೆ ತುಂಬಲಾರದ ನಷ್ಟ – ರಾಘು ಕುದರಿ

ಮುದಗಲ್.ನ.೧-ಚಲನಚಿತ್ರ ನಟನೆ ಮಾಡುವದ ಜೊತೆಗೆ ಆನಾಥಾಶ್ರಮ ಉಚಿತ ಶಾಲೆಗಳು ವೃದ್ಧಾಶ್ರಮ ಗೋಶಾಲೆ ಸೇರದಂತೆ ಬೇರೆ ಬೇರೆ ಸಮಾಜ ಸೇವೆಗಳು ಮಾಡುತ್ತಾ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿದ್ದರು.
ಪುನೀತ್ ರಾಜಕುಮಾರ ನಿಧನದಿಂದ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಕರುನಾಡ ವಿಜಯಸೇನೆ ಲಿಂಗಸುಗೂರು ತಾಲೂಕ ಪ್ರಧಾನಕಾರ್ಯದರ್ಶಿ ರಾಘವೇಂದ್ರ ಕುದರಿ ಹೇಳಿದರು.
ಪಟ್ಟಣದ ಆಟೋ ನಿಲ್ದಾಣದ ಹತ್ತಿರ ಕರುನಾಡ ವಿಜಯಸೇನೆ ಸಂಘಟನೆ ವತಿಯಿಂದ ಕನ್ನಡ ಚಲನಚಿತ್ರ ಖ್ಯಾತ ನಟ ಅಪ್ಪು ಪುನೀತ್ ರಾಜಕುಮಾರ ಅಕಾಲಿಕ ನಿಧಾನವಾಗಿದ್ದು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೇಣದ ಬತ್ತಿ ಹಚ್ಚಿ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿ ನಂತರ ಮಾತನಾಡಿದರು
ಇದೆ ಸಂದರ್ಭದಲ್ಲಿ ಕರುನಾಡ ವಿಜಯಸೇನೆ ಮುದಗಲ್, ಘಟಕದ ಅಧ್ಯಕ್ಷ ಮೌನೇಶ ಚಲುವಾದಿ, ಸಂಗಮೇಶ ಸರಗುಣಾಚಾರಿ, ಬಸವರಾಜ ದೊಡ್ಡಮನಿ, ಸುಭಾಸ ಪಾಟೀಲ್ , ವಿಶ್ವನಾಥ ತೋಟಿ, ಮೋಹನ ಭಂಡಾರಿ, ಪುರಸಭೆ ಸದಸ್ಯರು ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಇದ್ದರು .