ಅಪ್ಪು ಗೌಡರು ಕಲಬುರಗಿಯ ಕಲ್ಪವೃಕ್ಷ :ಬಡಿಗೇರ

ಕಲಬುರಗಿ.ಫೆ,20- ಕಲಬುರಗಿಯ ಸಮಗ್ರ ಅಭಿವೃದ್ಧಿಗಾಗಿ ಹಗಲಿರಳು ದುಡಿಯುತ್ತ ಈ ಭಾಗಕ್ಕೆ ಕರ್ನಾಟಕ ಸರಕಾರದಿಂದ 5000 ಕೋ.ರೂ ಬಜೆಟ್ ನಲ್ಲಿ ಮಿಸಲಿರಿಸಿರುವ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಕಲಬುರಗಿ ಕಲ್ಪವೃಕ್ಷ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಹೇಳಿದರು.
ಕಿರಣ್ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ನಗರದ ಕಲಾ ಮಂಡಲದಲ್ಲಿ ಆಯೋಜಿಸಿದ “ಕಲ್ಯಾಣ ಕಿರಣ್” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ವತಿಯಿಂದ ಅನೇಕ ಕಾಮಗಾರಿಗಳನ್ನು ಪೂರೈಸಿದ ಶಾಸಕ ರೇವೂರ ಅವರು, ಮೃದು ಭಾಷೆಯಿಂದ ಮತ್ತು ವಿನಯಶೀಲತೆಯಿಂದ ಸರ್ವರ ಮನೆ ಮಾತಾಗಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ದ್ವಿದಳ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ವಿದ್ಯಾಸಾಗರ ಶಾಬಾದಿ ಮಾತನಾಡಿ, ದತ್ತಾತ್ರೇಯ ಪಾಟೀಲ ಇನ್ನೊಮ್ಮೆ ಶಾಸಕರಾಗಿ ಮುಂದೆ ಮಂತ್ರಿ ಆಗಬೇಕು ಎಂದು ಹೇಳಿದರು.
ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀನಿವಾಸ್ ಸರಡಗಿಯ ಡಾ. ರೇವಣಸಿದ್ದ ಶಿವಾಚಾರ್ಯರು, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು ತಮ್ಮ ಸಣ್ಣ ವಯಸ್ಸಿನಲ್ಲಿಯೇ ಬಹಳ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿದ್ದರೆ ಜೊತೆಗೆ ತಮ್ಮ ಒಳ್ಳೆಯ ಸಂಸ್ಕಾರದಿಂದ ಸರ್ವರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಿರಣ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ ನಾಲ್ವಾರಕರ, ರೇವೂರ ಅವರು ಯುವಕರ ಕಣ್ಮಣಿ ಆಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರಿಗೆ ಬೆಂಬಲವಾಗಿ ನಿಂತು ಅವರನ್ನು ಗೆಲ್ಲಿಸಬೇಕೆಂದು ಹೇಳಿದರು.
ಇದೆ ಸಂದರ್ಭದಲ್ಲಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ “ಕಲ್ಯಾಣ್ ಕಿರಣ್” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಹೋರಾಟಗಾರಿಗೆ ಮತ್ತು ದಲಿತ ಸಮುದಾಯದ ಮುಖಂಡರಿಗೆ ಗೌರವ ಸತ್ಕಾರ ಮಾಡಲಾಯಿತು,