ಅಪ್ಪು ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಣೆ

ಮಾನ್ವಿ,ಮಾ.೧೭ – ತಾಲೂಕಿನ ತಾಯಿ ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಕಟ್ಟಡ ಕಾರ್ಮಿಕ ಅಧ್ಯಕ್ಷ ಕಾಮೇಶ ಮಂದಕಲ್ ಹಾಗೂ ಇತರೆ ಕಾರ್ಮಿಕರ ಅಪ್ಪು ದೊಡ್ಡಮನೆ ಅಭಿಮಾನಿ ಬಳಗದಿಂದ ಇಂದು ಪುನೀತ್ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಡಾ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಸಂಪತ್ತು ಕುಮಾರ್ ಪೂಜೆ ಸಲ್ಲಿಸಿದ ರಾಜಾ ವಸಂತ ನಾಯಕ ಮಾತಾನಾಡಿ ಪುನೀತ್ ರಾಜ್‌ಕುಮಾರ್ ಅವರು ಕೇವಲ ಚಿತ್ರನಟರಲ್ಲ ಅವರೊಬ್ಬ ಆದರ್ಶ ವ್ಯಕ್ತಿಯಾಗಿ ರಾಜ್ಯದ ಬಡ ಜನರಿಗೆ ಸಹಾಯ ಮಾಡುವುದರ ಮೂಲಕ ಮಾನವೀಯತೆಯ ಮೆರೆದ ಆದರ್ಶ ವ್ಯಕ್ತಿಯಾಗಿದ್ದಾರೆ ಅಂತರವನ್ನು ಕಳೆದುಕೊಂಡ ನಮ್ಮ ರಾಜ್ಯ ಸೇರಿದಂತೆ ಚಿತ್ರರಂಗದ ಒಬ್ಬ ಒಳ್ಳೆಯ ನಟ ಹಾಗೂ ಮನುಷ್ಯತ್ವದ ಮಾನವನನ್ನು ಕಳೆದುಕೊಂಡಿದ್ದು ನಮ್ಮ ರಾಜ್ಯದ ದುರದೃಷ್ಟಕರ ವಿಷಯವಾಗಿದೆ ಅವರ ಆದರ್ಶತವನ್ನು ಜನರು ಸದಾಕಾಲವೂ ಮರೆದಂತೆ ಕಾಪಾಡಲು ಉದ್ದೇಶದಿಂದ ಅವರ ಹುಟ್ಟು ಹಬ್ಬವನ್ನು ಕಾರ್ಮಿಕರ ಸಹಯೋಗದೊಂದಿಗೆ ಆಚರಣೆ ಮಾಡಲಾಗುತ್ತದೆ ಹಾಗೂ ಆಸ್ಪತ್ರೆಯ ಒಳ ರೋಗಿಗಳಿಗೆ ಹಾಗೂ ತಾಯಿ ಮಕ್ಕಳಿಗೆ ಉಚಿತ ಉಪಾಹಾರವನ್ನು ನೀಡಲಾಗುತ್ತದೆ ಎಂದರು.
ಪಟ್ಟಣದ ತಾಯಿ ಮಕ್ಕಳ ಆಸ್ಪತ್ರೆ,ನೀರಮಾನವಿ, ಮದ್ಲಾಪೂರ, ಪತ್ರಿಕಾ ಭವನದ ಮುಂಭಾಗದಲ್ಲಿ ಸೇರಿದಂತೆ ತಾಲೂಕಿನ ಅನೇಕ ಗ್ರಾಮದಲ್ಲಿ ಹಾಗೂ ಪಟ್ಟಣದ ವಿವಿಧ ಭಾಗದಲ್ಲಿ ಪ್ರಮುಖವಾಗಿ ಯಾವುದೇ ಅಪ್ಪು ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಕಾಮೇಶ್ ಮಂದಕಲ್ , ಡಾ ಅರವಿಂದ, ಪುರಸಭೆ ಸದಸ್ಯ ಶಾಬೀರ್ ಪಾಷ, ಸೈಯಾದ್ ಖಾಲಿದ್ ಗುರು, ಅರುಣ್ ಚಂದಾ,ಹಿದಿಯತ್ ನಾಯ್ಕ್, ರೇಹಮತ್, ವಿಶಾಂತ, ಆದಂಬೇಗಂ, ಅನೀಫ್ ಮೇಸ್ತ್ರಿ,ವಿರೂಪಾಕ್ಷಿ, ಶಿವಯ್ಯ,ಸತ್ತಾರ್, ಹುಸೇನಿ,ವಿರೇಶ,ಯಲ್ಲಪ್ಪ,ರಾಮು,ನಾಗೇಶ,ಸಂದೀಪ್, ಏಜಜ್ ಸೇಠ್,ಕ್ರಾಂತಿ ಯಾದವ್,ಸೇರಿದಂತೆ ಅನೇಕರು ಇದ್ದರು..