ಅಪ್ಪು ಅಭಿಮಾನದ ಪರಾಕಾಷ್ಟೇ: ಮಾಲಾ ಧಾರಣೆಯೊಂದಿಗೆ ವೃತಾಚರಣೆ


ಸಂಜೆವಾಣಿ ವಾರ್ತೆ
ಹೊಸಪೇಟೆ : ಹೊಸಪೇಟೆಯಲ್ಲಿ ಅಪ್ಪು ಅಭಿಮಾನಿಗಳು ಅಭಿಮಾನ ಪರಾಕಾಷ್ಟೇ ತಲುಪಿದ್ದು, ಮಾಲಾಧಾರಣೆಯೊಂದಿಗೆ ವೃತಾಚರಣೆಗೆ ಮುಂದಾಗಿದ್ದಾರೆ.
ಹೊಸಪೇಟೆಯಲ್ಲಿ ಪುನೀತ್ ರಾಜಕುಮಾರ ಅಭಿಮಾನಿಗಳು ರಾಜ್ಯದಲ್ಲಿಯೇ ಮೊದಲ ಬಾರಿ ಕಂಚಿನ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ವೃತ್ತ ನಿಮಾಣವನ್ನು ಮಾಡಿ ನಿತ್ಯ ಪೂಜೆ ಮಾಡುವ ಮೂಲಕ ಒಂದು ಹಂತದಲ್ಲಿ ಅಭಿಮಾನ ಮೆರೆದಿದ್ದರು, ಈ ಕೆಲಸ ನಿತ್ಯವೂ ನಡೆಯುವುದರಿಂದ ಅನೇಕ ಸೆಲ್ಪಿ ಕೇಂದ್ರವಾಗಿ ಪುನೀತ್‍ರಾಜಕುಮಾರ ವೃತ್ತ ಕಾರ್ಯನಿರ್ವಹಿಸುತ್ತದೆ. ದಿನದ ಯಾವುದೆ ಸಮಯ ಈ ಸ್ಥಳಕ್ಕೆ ಹೋದರು ಜನ ಸೆಲ್ಪಿ ಪಡೆಯುತ್ತಿರುವುದು ಕಾಣುತ್ತದೆ. ನಿತ್ಯವೂ ಮೂರುಬಾರಿ ಹಾರವನ್ನು ಬದಲಿಸುವ ಮೂಲಕ ನಿರಂತವಾಗಿ ಅಪ್ಪು ಅಭಿಮಾನಿಗಳು ನೂತವವಾಗಿರುವಂತೆ ಮಾಡುತ್ತಿದ್ದಾರೆ.
ಇದೀಗ 18 ದಿನಗಳ ಮಾಲಾಧಾರಣೆಯೊಂದಿಗೆ ಅಪ್ಪು ಅಭಿಮಾನಿಗಳು ಅಯ್ಯಪ್ಪಸ್ವಾಮಿ ಹಾಗೂ ಆಂಜನೇಯಸ್ವಾಮಿ ಮಾಲಾಧಾರಿಗಳಂತೆ ವೃತಾಚರಣೆಗೂ ಮುಂದಾಗುವ ಮೂಲಕ ಹೊಸ ಆಯಾಮ ಸೃಷ್ಟಿಗೆ ಮುಂದಾಗುತ್ತಿದ್ದಾರೆ. ಈ 18 ದಿನ ನಿತ್ಯವೂ ಬೆಳಿಗ್ಗೆ ಸೂರ್ಯೋದಯದ ಪೂರ್ವ ಹಾಗೂ ಸೂರ್ಯಾಸ್ಥದ ನಂತರ ಸ್ನಾನ ಮಾಡುವುದು, ಬೆಳಿಗ್ಗೆ ಹಾಗೂ ರಾತ್ರಿ ಕೇವಲ ಉಪಹಾರ ಸೇವನೆ, ಮಧ್ಯಾಹ್ನ ಮಾತ್ರ ಊಟ ಮಾಡುವುದು ಕೇಸರಿ ವಸ್ತ್ರ, ಕೇಸರಿ ಷರ್ಟ್ ಹಾಗೂ ಕೇಸರಿ ಶ್ಯಾಲ್ ಧಾರಣೆ ಮಾಡಲಿದ್ದು ಮಾರ್ಚ್ 18 ರಂದು ಪುನೀತ್‍ರಾಜಕುಮಾರ ಪುಣ್ಯಸ್ಥಳಕ್ಕೆ ಭೇಟಿ ನೀಡಿ ವೃತಾಚರಣೆ ಮುಕ್ತಾಯಗೊಳಿಸಲಿದ್ದು ಅಲ್ಲಿಂದ ನೇರವಾಗಿ ಹಂಪಿಯಲ್ಲಿ ಸ್ಥಾನ ಮಾಡಿ ವೃತಾಚರಣೆಯ ಮಾಲೆ ವಿಸರ್ಜಿಸಲಿದ್ದಾರೆ ಇಂದು ಸಾಂಕೇತಿಕವಾಗಿ 4ಜನ ಮಾಲೆಧಾರಣೆಯೊಂದಿಗೆ ಆರಂಭವಾಗಿದ್ದು ಬೆಂಗಳೂರಿಗೆ ಹೋಗುವ ದಿನ ನಿಖರವಾಗಿ ಸಂಖ್ಯೆಎಷ್ಟು ಎಂಬುದು ತಿಳಿಯಲಿದೆ ಎನ್ನುತ್ತಾರೆ ಅಭಿಮಾನಿ ಬಳಗದ ಮುಖ್ಯಸ್ಥ ಕಿಚಡಿ ವಿಶ್ವ.