ಅಪ್ಪು ಅಗಲಿಕೆ ನಾಡಿಗೆ, ಚಿತ್ರರಂಗಕ್ಕೆ ತುಂಬಲಾರದ ನಷ್ಟ ; ದರ್ಶನಾಪುರ

ಶಹಾಪುರ:ಅ.31:ಯುವಕರಿಗೆ ಅಭಿನಯದ ಮೂಲಕ ವ್ಯಕ್ತಿತ್ವ, ಮಾನವಿಯ ಮೌಲ್ಯಗಳನ್ನು ಸಾರಿ ಹಲವರ ಜೀವನ ಬದಲಿಸಿ ಅಭಿಮಾನಿಗಳ ಮನಗೆದ್ದ ವೀರ ಕನ್ನಡಿಗನ ನಿಧನ ನಾಡಿಗೆ ಮತ್ತು ಚಿತ್ರರಂಗಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ನಗರದ ಶಾಸಕರ ಕಚೇರಿಯಲ್ಲಿ ಅಪ್ಪು ಅಭಿಮಾನಿಗಳು ಎರ್ಪಡಿಸಿದ್ದ ಪುನೀತ್ ರಾಜಕುಮಾರವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಿ ಅವರು ಮಾತನಾಡಿದರು.

ನಟನೆಗೆ ಹೆಸರಾಗಿ, ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದ ಅಪ್ಪು ಅಗಲಿಕೆ ನೆನೆದರೆ ನೋವುಂಟಾಗುತ್ತದೆ. ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ನುಡಿದರು.

ಇದೇ ಸಂಧರ್ಭದಲ್ಲಿ ಶಾಸಕರ ಆಪ್ತ ಸಹಾಯಕರಾದ ಶಿವಶರಣ ಇಟಗಿ, ಮೌನೇಶ ನಾಟೇಕರ್, ನಿಜಗುಣ ದೊರನಹಳ್ಳಿ, ಮಲ್ಲಯ್ಯ ಸ್ವಾಮಿ ಇಟಗಿ, ರಾಮಣ್ಣ ಸಾದ್ಯಾಪುರ, ಭೀಮರಾಯ ಜುನ್ನಾ, ಸಂಗಣ್ಣ ಸೈದಾಪುರ, ರಾಜು ಚಂದಾಪುರ ಕಾಂಗೇಸ್ ಕಾರ್ಯಕರ್ತರು, ಅಪ್ಪು ಅಭಿಮಾನಿಗಳು ಸೇರಿದಂತೆ ಇತರರು ಇದ್ದರು.