ಅಪ್ಪುಸೇವಾ ಸಮಿತಿಯಿಂದ ಬಡ ಕಟುಂಬಗಳಿಗೆ ದಿನಸಿ ಕಿಟ್

ಬಳ್ಳಾರಿ, ಜೂ.01: ನಗರದ ಅಖಿಲ ಕರ್ನಾಟಕ ಅಪ್ಪು ಸೇವಾ ಸಮಿತಿ ಹಾಗೂ ವರಶೈವ ವಿದ್ಯಾವರ್ಧಕ ಸಂಘದ ಖಜಾಂಚಿ ಗೋನಾಳ ರಾಜಶೇಖರಗೌಡ ಅವರಿಂದ ಅರ್ಹ ಬಡ ಕುಟುಂಬಗಳಿಗೆ ನಿನ್ನೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.
ಕಿಟ್ ವಿತರಿಸಿ ಮಾತನಾಡಿದ ಗೋನಾಳ ರಾಜಶೇಖರಗೌಡ ಅವರು. ಕರೋನ ಸಂಕಷ್ಟದಲ್ಲಿ ಕೂಲಿ ಕೆಲಸ ಇಲ್ಲದೆ ಇರುವ ಬಡ ಕುಟುಂಬವನ್ನು ಗುರುತಿಸಿ ಅಂತವರಿಗೆ ಅಪ್ಪು ಸೇವಾ ಸಮಿತಿಯು 12 ಸಾಮಗ್ರಿ ಉಳ್ಳ ಕಿಟ್ಟು ನೀಡುವ ಕಾರ್ಯ ಶ್ಲಾಘನೀಯ.
ಡಾಕ್ಟರ್ ರಾಜ್ ಆದರ್ಶಗಳು ಇವರಿಗೆ ದಾರಿ ದೀಪವಾಗಿವೇ. ಈ ನಿಟ್ಟಿನಲ್ಲಿ ಪುನೀತ್ ರಾಜಕುಮಾರ್ ಈ ಸಂಸ್ಥೆಗೆ ಬೆನ್ನೆಲುಬಾಗಿ ನಿಂತಿರುವುದು ವಿಶೇಷವಾಗಿದೆ ಇದು ದೊಡ್ಮನೆ ಅವರ ದೊಡ್ಡ ಗುಣ ಹಾಗೆ
ಸಂಘ-ಸಂಸ್ಥೆಗಳನ್ನು ಹುಟ್ಟು ಹಾಕುವುದು ದೊಡ್ಡ ಮಾತು ಅಲ್ಲ. ಆದರೆ, ನಿರಂತರ ಸಮಾಜಸೇವೆ ಮಾಡುವುದು ದೊಡ್ಡ ಮಾತು ಎಂದರು.
ಸಂಚಾರಿ ಠಾಣೆಯ ಸಿಪಿಐ ಎಂ. ನಾಗರಾಜ್ ಮಾಡಳ್ಳಿ ಮಾತನಾಡಿ, ಕರಫನಾದ ಒಂದನೇ ಅಲೆ ಗಿಂತ ಎರಡನೇ ಅಲೆ ಸಾಕಷ್ಟು ಸಾವು-ನೋವುಗಳನ್ನು ಉಂಟುಮಾಡಿದೆ ಹಾಗಾಗಿ ಜನರು ಕಾನೂನು ಪಾಲನೆ ಮಾಡಿ ಇನ್ನೂ ಮೂರನೇ ಅಲೆ ಕೂಡ ಬರುವ ಸಂಭವ ಇದೆ ಜನರು ಜಾಗೃತಿಯಾಗಿ ಇರಬೇಕು ಎಸ್‍ಎಂಎಸ್ ಪಾಲನೆ ಮಾಡಬೇಕು ಈ ಕರೋನ ಕಾರ್ಯದಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಕರೋನ ವಾರಿಯರ್ಸ್‍ಗಳ ಸಂಘ ಸಂಸ್ಥೆಗಳ ಸೇವೆ ಅವಿಸ್ಮರಣೀಯ ಎಂದರು.
ಈ ಸಂದರ್ಭದಲ್ಲಿ ವೀ.ವಿ.ಸಂಗದ ಮಾಜಿ ಸಹ ಕಾರ್ಯದರ್ಶಿ ವೀರೇಶ್‍ಗೌಡ, ಅಭಯ್ ಫೌಂಡೇಶನ್ ಅಧ್ಯಕ್ಷ ರಾಮಕೃಷ್ಣ, ಹಲಕುಂದಿ ಸತೀಶ್, ಸಿದ್ಮಲ ಮಂಜುನಾಥ್, ಕಪ್ಪಗಲ್ ಚಂದ್ರಶೇಖರ ಆಚಾರ್, ಅಪ್ಪು ಸೇವಾ ಸಮಿತಿಯ ಜಿಲ್ಲಾ ಉಸ್ತುವಾರಿ ಜೆ.ಪಿ.ಮಂಜುನಾಥ್, ಹಾಗೂ ಅಧ್ಯಕ್ಷ ರವಿ ಕುಮಾರ್, ಉಪಾಧ್ಯಕ್ಷ ರಾಜೇಶ್ ಹುಂಡೇಕಾರ್, ನಾಗರಾಜ್ ಕನ್ನಡಿಗ, ಕುಮಾರ್ ಸ್ವಾಮಿ, ಸೂರಜ್ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.