ಅಪ್ಪಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ

ಕಲಬುರಗಿ:ಫೆ.10: ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಲಬುರಗಿ ಜಿಲ್ಲೆಯನ್ನು ಪ್ರತಿನಿಧಿಸಿದ ಅಪ್ಪಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಕುಮಾರಿ ಕ್ಷಿತಿ ಪಾಟೀಲ್ ಭಾಷಣ (ಇಂಗ್ಲಿಷ್) ಸ್ಪರ್ಧೆಯಲ್ಲಿ ತಮ್ಮ ವಾಕ್ಚಾತುರ್ಯ ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಮತ್ತು ಶಾಲೆಗೆ ಕೀರ್ತಿ ತಂದು ಕೊಟ್ಟಿದ್ದಾರೆ.

ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಹತ್ತನೇಯ ತರಗತಿಯಲ್ಲಿ ಓದುತ್ತಿರುವ ಕುಮಾರಿ ಕ್ಷಿತಿ ಪಾಟೀಲ್ “ಬಾಹ್ಯಾಕಾಶದಲ್ಲಿ ಭಾರತದ ಸಾಧನೆ” ಎಂಬ ವಿಷಯವನ್ನು ಮಂಡಿಸುತ್ತಾ ತಮ್ಮ ವಾಕ್ಚಾತುರ್ಯ ಕೌಶಲ್ಯವನ್ನು ಪ್ರದರ್ಶಿಸಿದರು. ಕಲಬುರಗಿ ಜಿಲ್ಲೆಯನ್ನು ಪ್ರತಿನಿಧಿಸಲು ಹೋಬಳಿ, ತಾಲೂಕ ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ, ಈ ಎಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ್ದಿದ್ದು ಗಮನಾರ್ಹವಾಗಿದೆ.

ಸತತ ಪ್ರಯತ್ನ, ಶಾಲೆಯ ತರಬೇತುದಾರರ ಮಾರ್ಗದರ್ಶನದಲ್ಲಿ ಬೇಸರವಿಲ್ಲದ ಪೂರ್ವಭ್ಯಾಸ ಮತ್ತು ಪೆÇೀಷಕರ ಪೆÇ್ರೀತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು. ಮುಂದೆ ಮಾತನಾಡುತ್ತ ಶಾಲೆಯ ಕೀರ್ತಿಗೆ ಪಾತ್ರರಾಗಿದ್ದಕ್ಕೆ ಹೆಮ್ಮೆ ಮತ್ತು ಸಂತೋಷವಾಗಿದೆ ಎಂದು ಮುಗುಳ್ನಗಯ ಮಾತು ಹೇಳಿದರು.

ಈ ಸಾಧನೆಯನ್ನು ಮೆಚ್ಚಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಶರಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಮತ್ತು ಚೇರ್ ಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪಾ ಅವರು ಕುಮಾರಿ ಕ್ಷಿತಿ ಪಾಟೀಲ್ ಇವರನ್ನು ಅಭಿನಂದಿಸಿ ಆಶಿರ್ವಾದಿಸಿದರು. ಶಾಲೆಯ ಮಾರ್ಗದರ್ಶಕರಾದ ಶ್ರೀ ಏನ್.ಎಸ್. ದೇವರ್ಕಲ್, ಪ್ರಾಚಾರ್ಯರು, ಶಿಕ್ಷಕ ಮತ್ತು ವಿದ್ಯಾರ್ಥಿವೃಂದದವರು ಕೂಡ ಅಭಿನಂದನೆ ತಿಳಿಸಿ ಹರ್ಷ ವ್ಯಕ್ತಪಡಿಸಿದರು.