
ಕಲಬುರಗಿ:ಏ.6: ನಗರದ ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಯು.ಕೆ.ಜಿ. ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಮಾತೋಶ್ರೀ ಡಾ. ದಾಕ್ಷಾಯಣಿ ಎಸ್. ಅಪ್ಪಾ (ಚೇರ್ ಪರ್ಸನ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ & ಬೋರ್ಡ್ ಆಫ್ ಗವರ್ನರ್, ಶರಣಬಸವ ವಿಶ್ವವಿದ್ಯಾಲಯ, ಕಲಬುರಗಿ) ಇವರ ದಿವ್ಯ ಸಾನಿಧ್ಯದಲ್ಲಿ ಅತಿಥಿಯಾಗಿ ಡಾ. ಅರುಂಧತಿ ಪಾಟೀಲ್ (ಮಕ್ಕಳ ನರವಿಜ್ನ್ಯಾನ ತಜ್ಞರು, ಕಲಬುರಗಿ) & ಶ್ರೀ ಬಸವರಾಜ್ ದೇಶಮುಖ (ಕಾರ್ಯದರ್ಶಿಗಳು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ) ಇವರು ಉಪಸ್ಥಿತರಿದ್ದರು.
ಮರೆವಣಿಗೆಯೊಂದಿಗೆ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಸಭೆಯೊಳಗೆ ಬರಮಾಡಿಕೊಳ್ಳಲಾಯಿತು. ಸಂತೋಷ ಮತ್ತು ಉತ್ಸಾಹಭರಿತ ತಂದೆ ತಾಯಂದಿರು ಹಾಗು ಪೋಷಕರು ಸಭೆಯಲ್ಲಿ ನೆರೆದಿದ್ದರು. ಘಟಿಕೋತ್ಸವಕ್ಕೆ ಆಗಮಿಸಿದ ಗಣ್ಯರಿಂದ ಜ್ಯೋತಿ ಬೆಳೆಗಿಸಿವುದರ ಮೂಲಕ ಘಟಿಕೋತ್ಸವ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ವಿದ್ಯಾರ್ಥಿಗಳ ಸಮೂಹ ನೃತ್ಯ ಮತ್ತು ಭಾಷಣಗಳು ಎಲ್ಲರ ಮನಸೆಳೆಯಿತು. ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕುತ್ತ ವಿದ್ಯಾರ್ಥಿಗಳು ತಮ್ಮ ಹರ್ಷವನ್ನು ಮನರಂಜಿಸುವ ನೃತ್ಯದಲ್ಲಿ ಪ್ರದರ್ಶಿಸಿದರೆ ಪುಟಾಣಿ ಭಾಷಣಕಾರರು ತಮ್ಮ ಕಲಿಕೆಯ ತೃಪ್ತಿ, ಗುರುಗಳ ಪ್ರತಿ ಇರುವ ಭಕ್ತಿ & ಕೃತಜ್ಞತೆ, ತಂದೆ ತಾಯಂದಿರ ಪ್ರತಿ ಇರುವ ಪ್ರೀತಿ ಮತ್ತು ಮಮತೆಯನ್ನು ಮನಮಿಡಿಯುವಂತೆ ಮಾತನಾಡಿದರು. ಸಂಯೋಜಕರಾದ ಶ್ರೀಮತಿ ಕಾಮಾಕ್ಷಿ ಕಟ್ಟಿ ಇವರು ಕೆ.ಜಿ. ವಿಭಾಗವನ್ನು ವರದಿಯ ಮೂಲಕ ಪರಿಚಯಿಸಿದರು.
ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜಿ ಅವರು ಆಶೀರ್ವಚನ ನೀಡುತ್ತಾ ಶರಣರ ಅಡಿಯಲ್ಲಿ ಅಭ್ಯಾಸ ಮಾಡಿದಂಥ ಎಲ್ಲ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಮ್ಮ ದೃಡ ವಿಶ್ವಾಸವನ್ನು ವ್ಯಕ್ತಪಡಿಸಿದರು. ಶರಣರ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ಸ್ಥಳೀಯ, ರಾಷ್ಟೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆಯೆಂದು ಹೆಮ್ಮೆ ವ್ಯಕ್ತ ಪಡಿಸಿದರು. ಎಲ್ಲಾ ತಾಯಂದಿರ ಹಾಗೆ ತಮಗೂ ತಮ್ಮ ಪುತ್ರ ಚಿ. ದೊಡ್ಡಪ್ಪ ಎಸ್. ಅಪ್ಪಾ ಅವರ ಸ್ವಾಗತ ಭಾಷಣ ಮತ್ತು ನೃತ್ಯದಲ್ಲಿ ಪಾಲ್ಗೊಂಡಿದ್ದನ್ನು ನೋಡಲು ತುಂಬಾ ಖುಷಿಯಾಗಿದೆಯೆಂದು ಹರ್ಷ ವ್ಯಕ್ತಪಡಿಸಿದರು. ಶಿಕ್ಷಕರ ಶ್ರಮ ಮತ್ತು ಮಾರ್ಗದರ್ಶನ, ವಿದ್ಯಾರ್ಥಿಗಳ ಶಿಸ್ತು ಮತ್ತು ಭಕ್ತಿಯ ವಿದ್ಯಾರ್ಜನೆ ಈ ಯಶಸ್ಸಿಗೆ ಕಾರಣವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅವರು ಬೆಳೆಸಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಪ್ಪಾ ಪಬ್ಲಿಕ್ ಶಾಲೆ ಉಜ್ವಲ ಭವಿಷ್ಯದತ್ತ ಮುನ್ನೆಡೆಯುತಿದೆಯೆಂದು ಹೆಮ್ಮೆಯ ಮಾತುಗಳನ್ನಾಡುತ್ತಾ ಎಲ್ಲಾ ಶಿಕ್ಷಕ ವೃಂದದವರಿಗೆ ಮತ್ತು ತಂದೆ ತಾಯಂದಿರು ಅಭಿನಂದಿಸಿದರು.
ಮುಖ್ಯ ಅತಿಥಿಗಳಾದ ಡಾ. ಅರುಂಧತಿ ಪಾಟೀಲ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪುಟಾಣಿ ಮಕ್ಕಳ ಪ್ರದರ್ಶನ ವೀಕ್ಷಿಸಿದ ಅತಿಥಿಗಳು ಮಕ್ಕಳನ್ನು ಅಭಿನಂದಿಸಿ ಪ್ರಶಂಶಯ ಮಾತುಗಳನ್ನಾಡಿದರು. ಚಿಕ್ಕ ಮಕ್ಕಳಿಗೆ ಹಿರಿಯರು ಮಾದರಿಯಾಗಬೇಕು. ನುಡಿದಂತೆ ನಡೆಯದಿದ್ದರೆ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆಯಂದು ಎಚ್ಚರಿಸಿದರು. ಒಳ್ಳೆಯ ಆಹಾರ ಮತ್ತು ಒಳ್ಳೆಯ ವಿಚಾರಗಳು ಒಳ್ಳೆಯ ನಡೆ ನುಡಿಗೆ ಪೂರಕವಾಗಿವೆಯೆಂದು ಅಭಿಪ್ರಾಯಪಟ್ಟರು. ಮಕ್ಕಳನ್ನು ಹೆಚ್ಚಾಗಿ ಚಟುವಟಿಕೆಯಲ್ಲಿ ತೊಡಗಿಸಿದರೆ ಸರ್ವತೋನ್ಮುಖ ಬೆಳವಣಿಗೆ ಕಾಣಲು ಸಾಧ್ಯವೆಂದು ತಮ್ಮ ವಿದ್ಯಾರ್ಥಿ ಜೀವನದ ಘಟನೆಗಳನ್ನು ನೆನೆಸುತ್ತ ದೃಢೀಕರಿಸಿದರು. ಜಾಗತೀಕರಣದಲ್ಲಿ ನಮ್ಮ ರಾಷ್ಟ್ರೀಯತೆ ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೆಂದು ಕರೆ ನೀಡಿದರು.
ಶ್ರೀ ಬಸವರಾಜ ದೇಶಮುಖ ಇವರು ಕೂಡ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಉತ್ತಮ ಪ್ರದರ್ಶನ, ಶಿಕ್ಷಕರು ನೀಡಿದ ತರಬೇತಿಗೆ ಕನ್ನಡಿಯಾಗಿದೆ ಎಂದು ಹೇಳುತ್ತಾ ಈ ಗುರು ಶಿಷ್ಯರ ಪರಂಪರೆ ಹೀಗೆ ಮುಂದುವರಿಯಲೆಂದು ಆಶಿಸಿದರು.
ಘಟಿಕೋತ್ಸವದ ಸಮವಸ್ತ್ರವನ್ನು ಧರಿಸಿ, ಸಾಲು ಸಾಲಾಗಿ ವೇದಿಕೆಯ ಮೇಲೆ ಗಣ್ಯರೊಂದಿಗೆ ಕೈಕುಲುಕಿಸಿ, ಅವರಿಂದ ಪ್ರಶಂಶೆಯ ಪತ್ರ ಸ್ವೀಕರಿಸಿದ ನೋಟ ಎಲ್ಲರ ಮನಸೆಳೆಯಿತು. ವಿಶೇಷವಾಗಿ ತಂದೆ ತಾಯಂದಿರಿಗೆ ಎಲ್ಲಿಲ್ಲದ ಸಂತೋಷದ ಅನುಭವವಾಯಿತು. ಮಕ್ಕಳೊಂದಿಗೆ ಓಡಾಡುತ್ತ ಫೋಟೋ ತೆಗೆಸಿಕೊಳ್ಳುವ ಉತ್ಸಾಹ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತು.
ಪ್ರಾಚಾರ್ಯರಾದ ಶಂಕರಗೌಡ ಹೊಸಮನಿ ಅವರು ಶಾಲೆಯ ಪರವಾಗಿ ಎಲ್ಲರಿಗೆ ಧನ್ಯವಾದಗಳನ್ನು ತಿಳಿಸಿದರು. ಪೂಜ್ಯ ಅಪ್ಪಾಜಿ ಮತ್ತು ಮಾತೋಶ್ರೀ ಅವ್ವಾಜಿ ಅವರ ಆಶೀರ್ವಾದ ಮತ್ತು ಶ್ರೀ ಏನ್. ಎಸ್. ದೇವರ್ಕಲ್ ಅವರ ಮಾರ್ಗದರ್ಶನ ಅಪ್ಪ ಪಬ್ಲಿಕ್ ಶಾಲೆಯ ಕಿಂಡರಗಾರ್ಟನ್ (ಕೆ.ಜಿ.) ವಿಭಾಗದ ಪ್ರಗತಿಗೆ ನಾಂದಿಯಾಗಿದೆ ಎಂದು ಹೇಳಿದರು. ಹಾಗೆಯೇ ತಂದೆ ತಾಯಂದಿರ ಬೆಂಬಲ ಮತ್ತು ಪ್ರೋತ್ಸಾಹ ಮುಂದುವರಿಯಲೆಂದು ವಿನಂತಿಸಿಕೊಳ್ಳುತ್ತ ಇನ್ನು ಹೆಚ್ಚಿನ ಪ್ರಗತಿ ಸಾಧಿಸುವ ಭರವಸೆಯ ಮಾತುಗಳನ್ನಾಡಿದರು.
ಶಿಕ್ಷಕಿಯರಾದ ಕುಮಾರಿ ಆಶ್ರಿತಾ ಮತ್ತು ಶ್ರೀಮತಿ ಮೆಹನಾಜ್ ವಿದ್ಯಾರ್ಥಿಗಳಾದ ಕುಮಾರ ವಿಹಾನ್, ಕುಮಾರ ಸುತೀರ್ಥ್, ಕುಮಾರಿ ಧೃತಿ, ಕುಮಾರ ಸುಮೇದ್ ಇವರು ಜೊತೆಯಾಗಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಚಿ. ದೊಡ್ಡಪ್ಪ ಎಸ್. ಅಪ್ಪಾ ಸ್ವಾಗತ ಕೋರಿದರು ಹಾಗು ಕುಮಾರಿ ಶಿವಾನಿ ಎಸ್. ಅಪ್ಪಾ, ಕುಮಾರಿ ಭವಾನಿ ಎಸ್. ಅಪ್ಪಾ & ಕುಮಾರಿ ಮಹೇಶ್ವರಿ ಎಸ್. ಅಪ್ಪಾ ಪ್ರಾರ್ಥನೆ ಗೀತೆಯನ್ನು ಹಾಡಿದರು. ಶ್ರೀಮತಿ ಮತ್ತು ಶ್ರೀ ಡಾ. ನಿಧೀಶ್ ನಿಷ್ಠಿ ಮತ್ತು ಡಾ. ಶ್ವೇತಾ ಅಲ್ಲಮಪ್ರಭು ದೇಶಮುಖ ಮತ್ತು ಕುಟುಂಬದ ಇತರ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಪ ಪ್ರಾಚಾರ್ಯರಾದ ಶ್ರೀ ವಿಜು ಕೆ. ಜೊಸ್ ಮತ್ತು ಶಾಲೆಯ ಎಲ್ಲಾ ಶಿಕ್ಷಕ ಹಾಗು ಶಿಕ್ಷಕೇತರ ವೃಂದದವರು ಕೆ.ಜಿ. ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರ ಗೀತೆಯನ್ನು ಹಾಡುವುದರೊಂದಿಗೆ ಘಟಿಕೋತ್ಸವ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.