ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಅಬ್ಬರದ ವಾರ್ಷಿಕ ಕ್ರೀಡಾಕೂಟ

ಕಲಬುರಗಿ:ಡಿ.3:ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಪುಟಾಣಿಗಳ 13ನೇ ವಾರ್ಷಿಕ ಕ್ರೀಡಾಕೂಟವನ್ನು ಶರಣಬಸವೇಶ್ವರ ಸಂಸ್ಥಾನದ 9ನೇಯ ಪೀಠಾಧಿಪತಿಗಳಾದ ಚಿರಂಜೀವಿ ದೊಡ್ಡಪ್ಪಾ ಅಪ್ಪಾ ಇವರು ಕ್ರೀಡಾಜ್ಯೋತಿ ಬೆಳುಗುವುದರ ಮೂಲಕ ಉದ್ಘಾಟಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ್ ದೇಶಮುಖ್, ಅತಿಥಿಗಳಾದ ಶರಣಬಸವೇಶ್ವರ ವಸತಿ ಶಾಲೆಯ ಹಿರಿಯ ಸಂಯೋಜಕರಾದ ಶ್ರೀಮತಿ ಶಾರದಾ ರಾಂಪುರೆ, ಅಪ್ಪಾ ಪಬ್ಲಿಕ್ ಶಾಲೆಯ ಪ್ರಾಚಾರ್ಯರು, ಉಪಪ್ರಾಚಾರ್ಯರು ಮತ್ತು ಫೌಂಡೇಶನ್ ವಿಭಾಗದ ಸಂಯೋಜಕರಾದ ಶ್ರೀಮತಿ ಕೆ.ವಿ.ಏನ್. ಸರಸ್ವತಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಚಿರಂಜೀವಿ ದೊಡ್ಡಪ್ಪಾ ಅಪ್ಪಾ ಮತ್ತು ಉಪಸ್ಥಿತರಿದ್ದ ಗಣ್ಯರು ಬಲೂನ್ ಹಾಗು ಪಾರಿವಾಳಗಳನ್ನು ಆಕಾಶದಡೆ ಹಾರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಫೌಂಡೇಶನ್ ವಿಭಾಗದ (ಕೆಜಿ ಇಂದ & 2ನೇಯ ತರಗತಿ) ಕ್ರೀಡಾಕೂಟವನ್ನು ವಿದ್ಯಾರ್ಥಿಗಳು ಧ್ವಜಾರೋಹಣದ ನಂತರ ಪಥಸಂಚಲನ ಮತ್ತು ಕ್ರೀಡಾ ಪ್ರತಿಜ್ನ್ಯದೊಂದಿಗೆ ಆರಂಭಿಸಿದರು.
ಮುಖ್ಯ ಅತಿಥಿಗಳಾದ ಶ್ರೀಮತಿ ಶಾರದಾ ರಾಂಪುರೆ ಇವರು ಕ್ರೀಡಾ ಕೂಟವನ್ನುದ್ದೇಶಿಸಿ ಮಾತನಾಡುತ್ತ ಪುಟಾಣಿ ಮಕ್ಕಳು ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದನ್ನು ಕಂಡು ಹರ್ಷ ವ್ಯಕ್ತಪಡಿಸಿದರು. ಬಾಲ್ಯಾವಸ್ಥೆಯಲ್ಲಿ ಕ್ರೀಡೆಗಳ ಪ್ರತಿ ಆಸಕ್ತಿ ಬೆಳೆಸುವುದು ಇಂದಿನ ದಿನಗಳಲ್ಲಿ ಪ್ರತಿಯೊಂದು ಶಾಲೆಯ ಮುಖ್ಯ ಜವಾಬ್ದಾರಿಯಾಗಿದೆಯೊಂದು ಅಭಿಪ್ರಾಯಪಟ್ಟರು. ಪುಟಾಣಿ ಕ್ರೀಡಾ ಪಟುಗಳಿಗೆ ಅಭಿನಂದಂಡಿಸಿದರು.
ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ್ ದೇಶಮುಖ ಅವರು ಮಕ್ಕಳ ಕಾರ್ಯಕ್ರಮ ನಿರ್ವಹಣೆ ಮತ್ತು ಪಥಸಂಚಲನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಮಕ್ಕಳು ಬೌದ್ಧಿಕವಾಗಿ ಹಾಗು ಶಾರೀರಿಕವಾಗಿ ಸಮರ್ಥ ಮತ್ತು ಸದೃಢರಾಗುತ್ತಾರೆ ಎಂದು ಹೇಳುತ್ತಾ ಶಿಕ್ಷರಿಗೆ ಮತ್ತು ಮಕ್ಕಳ ಸ್ಪರ್ಧೆಗಳನ್ನು ವೀಕ್ಷಿಸಲು ಆಗಮಿಸಿದ ಪಾಲಕರಿಗೆ ಕರೆ ನೀಡಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪುಟಾಣಿಗಳಿಗೆ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಈ ಮಧ್ಯೆ ಮಕ್ಕಳು ಸಾಮೂಹಿಕ ಕವಾಯತು ನೋಡುಗರ ಕನಸೆಳೆಯಿತು. ಪ್ರಾಚಾರ್ಯರಾದ ಶ್ರೀ ಶಂಕರಗೌಡ ಹೊಸಮನಿ ವಿದ್ಯಾರ್ಥಿಗಳಿಗೆ ಶುಭ ಕೋರಿ ಪಾಲಕರಿಗೆ ಶಾಲೆಯ ಪರವಾಗಿ ವಂದನೆಗಳನ್ನು ಸಲ್ಲಿಸಿದರು.