ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಶರಣೋತ್ಸವ ಆಚರಣೆ

ಕಲಬುರಗಿ:ಜ.1: ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಪ್ರಿಪರೇಟರಿ ಸೆಕ್ಷನ್ (3 ರಿಂದ 5 ನೆಯ ತರಗತಿ) ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ವಾರ್ಷಿಕೋತ್ಸವಕ್ಕೆ ಮುಖ್ಯಅತಿಥಿಯಾಗಿ ಕುಮಾರಿ ಶ್ರೇಯಾಂಕಾ ಧನಶ್ರೀ (ಅಸಿಸ್ಟೆಂಟ್ ಕಮಿಷನರ್, ಮಹಾನಗರ ಪಾಲಿಕೆ ಕಲಬುರಗಿ ವಿಭಾಗ – 3) ಹಾಗೂ ಡಿಡಿಪಿಐ ಸಕ್ರೆಪ್ಪಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಚಾಲನೆ ನೀಡಿದರು. ಪ್ರಾಚಾರ್ಯರಾದ ಶ್ರೀ ಶಂಕರಗೌಡ ಹೊಸಮನಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ತರಗತಿಗಳಲ್ಲಿನ ನಡೆಯುವ ವಿವಿಧ ಚಟುವಟಿಕೆಗಳನ್ನೂ ವಿಸ್ತಾರವಾಗಿ ವಿವರಿಸಿ, ತಂದೆ ತಾಯೆಂದಿರು ಮತ್ತು ಪೆÇೀಷಕರು ತೋರಿಸಿದ ವಿಶ್ವಾಸ ಹಾಗೂ ಪೆÇ್ರೀತ್ಸಾಹಕ್ಕೆ ತಮ್ಮ ಕೃತಜ್ಞತೆ ತಿಳಿಸಿದರು. ಪ್ರಿಪರೇಟರಿ ಸೆಕ್ಷನ್ ಸಂಯೋಜಕರಾದ ಶ್ರೀಮತಿ ಶಕುಂತಲಾ ಖಜೂರಿ ವಾರ್ಷಿಕ ವರದಿಯನ್ನು ಮಂಡಿಸಿದರು.

ಈ ಶೈಕ್ಷಣಿಕ ವರ್ಷದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ಪ್ರಶಂಶೆ ಪತ್ರ ನೀಡಿ ಸನ್ಮಾನಿಸಲಾಯಿತು.

ಮುಖ್ಯಅತಿಥಿಯಾದ ಕುಮಾರಿ ಶ್ರೇಯಾಂಕಾ ಧನಶ್ರೀ ಅವರು ವಿದ್ಯಾರ್ಥಿಗಳಲ್ಲಿ ಅಭ್ಯಸಿಸುವ ಶೈಲಿಗಳನ್ನು ಮಾರ್ಪಾಡು ಮಾಡುವುದು, 21 ನೆಯ ಶತಮಾನದಲ್ಲಿನ ವಿವಿಧ ಆಸಕ್ತ ವಿಷಯಗಳನ್ನ ಆರಿಸುವುದು ಹಾಗೂ 371ರ ವಿಧಿಯ ಬಳಕೆಯನ್ನು ಮೀರಿ ವಿದ್ಯಾರ್ಥಿಗಳು ಮೇಲಿನ ಸ್ತರಗಳಲ್ಲಿ ತಲುಪಬೇಕೆಂದು ಸಲಹೆ ನೀಡಿದರು. ವಿದ್ಯಾರ್ಥಿಗಳನ್ನು ಬೆಳೆಸಲು ತಾಯಿಯ ಶ್ರಮವು ಬಹು ಮುಖ್ಯವಾದುದು. ಅದಕ್ಕಾಗಿ ಜೀವನದಲ್ಲಿ ತಾಯಿಗೆ ಮೊದಲ ಸ್ಥಾನವಿರಬೇಕೆಂದು ಆಶಿಸಿದರು.

ಕುಮಾರಿ ವೈಷ್ಣವಿ ಸೋಪಾನರಾವ್ ಮತ್ತು ಕುಮಾರ ಶರಣ್ ಮೋತಿ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಅಕ್ಕಮಹಾದೇವಿ ಮಲ್ಲೇದ್ ಸ್ವಾಗತ ಕೋರಿದರು. ಶ್ರೀಮತಿ ನಿರಹಂಕಾರಿ ಎಂ. ಅತಿಥಿಯನ್ನು ಪರಿಚಯಿಸಿದರು. ಅನಿಲ್ ಸೂರ್ಯವಂಶಿ ವಂದನಾರ್ಪಣೆ ಮಾಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯೆಕ್ರಮವನ್ನು ಮುಕ್ತಾಯಗೊಳಿಸಲಾಯಿತು.