ಕಲಬುರಗಿ,ಜೂ.25:ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಶೈಕ್ಷಣಿಕ ವರ್ಷಕ್ಕೆ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಸಂಭ್ರಮದ ಸಮಾರಂಭದಲ್ಲಿ ಪ್ರಮಾಣ ವಚನ ಭೋಧಿಸಲಾಯಿತು. ಈ ಸಮಾರಂಭವನ್ನು ಶ್ರೀ ದೀಪನ್ ಎಂ.ಏನ್. (ಐಪಿಎಸ್) ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ, ಕಲಬುರಗಿ ಇವರ ಉಪಸ್ಥಿತಿಯಲ್ಲಿ ನಡೆಸಲಾಯಿತು.
ವಿದ್ಯಾರ್ಥಿ ನಾಯಕರ ಆಯ್ಕೆಗೆ ಅರ್ಜಿಯನ್ನು ಆವ್ಹಾನಿಸಲಾಗಿತ್ತು. ಈ ಅರ್ಜುಗಳನ್ನು ಪರಿಶೀಲಿಸಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹಾಗು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದನ್ನು ಪರಿಗಣಿಸಿ, ನಾಯಕರನ್ನು ಆಯ್ಕೆ ಮಾಡಲಾಗಿತ್ತು. ಆಯ್ಕೆಯಾದ ನಾಯಕರಿಗೆ ಪ್ರಮಾಣ ವಚನ ಸಮಾರಂಭವನ್ನು ಆಯೋಜಿಸಲಾಗಿತ್ತು. ಶಾಲೆಯ ಚಟುವಟಿಕೆಗಳಿಗೆ ಸಂಬಂಧಪಡುವಂಥ ವಿವಿಧ ಕ್ಲಬ್ಗಳಿಗೆ ನಾಯಕರು ಮತ್ತು ಉಪನಾಯಕರನ್ನು ನೇಮಿಸಿ ಕರ್ತವ್ಯ ನಿರತರಾಗಲು ಪ್ರಮಾಣ ವಚನ ಭೋದಿಹಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದಂಥ ಶ್ರೀ ದೀಪನ್ ಎಂ. ಏನ್. (ಐಪಿಎಸ್) ವಿದ್ಯಾರ್ಥಿಗಳಿಗೆ ಪದವಿ ಬ್ಯಾಡ್ಜ್ಗಳನ್ನು ನೀಡಿ ಅಭಿನಂದಿಸಿದರು. ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅತಿಥಿಗಳು, ಎಲ್ಲಾ ವಿದ್ಯಾರ್ಥಿಗಳು ಪ್ರತಿಭಾವಂತರಾಗಿರುತ್ತಾರೆ. ಸಿಕ್ಕಂಥ ಅವಕಾಶಗಳನ್ನು ಸದುಯುಪಯೋಗ ಪಡಿಸಿಕೊಂಡು ಸಾಧಕರಾಗಬೇಕೆಂದು ತಿಳಿಹೇಳಿದರು. ವಿದ್ಯಾರ್ಥಿಗಳೊಂದಿಗೆ ಸಂವಾದಿಸುತ್ತ ತಮ್ಮ ಜೀವನ ಅನುಭವಗಳನ್ನು ಹಂಚಿಕೊಳ್ಳುತ್ತಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಕೂಡ ಅಷ್ಟೇ ಉತ್ಸಾಹದಿಂದ ಉತ್ತರಿಸಿದರು. ಭವಿಷ್ಯದ ಜೀವನದಲ್ಲಿ ತಮ್ಮ ವ್ರಿತ್ತಿಯೊಂದಿಗೆ ದೇಶಸೇವೆಯನ್ನು ಮಾಡಬೆಂಕೆಂದು ಕರೆ ನೀಡಿದರು.
ಶಾಲೆಯ ಪ್ರಾಚಾರ್ಯರಾದ ಶ್ರೀ ಶಂಕರಗೌಡ ಹೊಸಮನಿ ಇವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾಜಿ ವಿದ್ಯಾರ್ಥಿಗಳ (ಸ್ಪರ್ಶಾ ನಿಲಂಗಿ – ಐಪಿಎಸ್) ಉದಾಹರಣೆಯನ್ನು ನೀಡುತ್ತಾ, ಶ್ರಮ ಮತ್ತು ಶಿಷ್ಟಿನಿಂದ ತಮ್ಮ ಕನಸುಗಳನ್ನು ಸಾಕಾರಗೊಳಿಸಬಹುದೆಂದು ವಿಶ್ವಾಸ ವ್ಯಕ್ತಪಡಿಸಿದರು. ಶಾಲೆಯ ನಾಯಕರ ಅನುಭವ ಮುಂಬರುವ ಜೀವನದಲ್ಲಿ ಸಹಾಯಕವಾಗಲೆಂದು ಎಲ್ಲರನ್ನು ಶುಭಹಾರೈಸಿದರು.
ಈ ಮಧ್ಯೆ ಸಮಾರಂಭದಲ್ಲಿ ಉಪಸ್ಥಿತರಾದ ತಂದೆ ತಾಯೆಂದಿರು ಮತ್ತು ಪೋಷಕರು ತಮ್ಮ ಮಕ್ಕಳು ವೇದಿಕೆಯ ಮೇಲೆ ವಿದ್ಯಾರ್ಥಿ-ನಾಯಕರಾಗಿ ಶಪಥ ಮಾಡುವದನ್ನು ಹೆಮ್ಮೆಯ ಮುಗುಳ್ನಗೆ ಬೀರುತ್ತಾ ಆನಂದಿಸಿದರು.
ಕಾರ್ಯಕ್ರಮವನ್ನು, ಕುಮಾರಿ ವರ್ಷಿಣಿ ಶೀಲವಂತ (೧೦ನೇ ತರಗತಿ) ಮತ್ತು ಕುಮಾರಿ ಹರ್ಷ ಸಿದ್ದರೆಡ್ಡಿ (೮ನೇ ತರಗತಿ) ನಿರ್ವಹಿಸಿದರು. ಕುಮಾರಿ ಕ್ಷಿತಿ (೧೦ನೇ ತರಗತಿ) ಎಲ್ಲರನ್ನು ಕಾರ್ಯಕರಮಕ್ಕೆ ಸ್ವಾಗಿತಿಸಿದಳು ಹಾಗು ಕುಮಾರಿ ಭವಾನಿ ಯಸ್. ಅಪ್ಪಾ (೭ನೇ ತರಗತಿ) ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಶಾಲೆಯ ನಾಯಕರಾಗಿ ಅಧಿಕಾರ ಸ್ವೀಕರಿಸಿದ ಕುಮಾರ ಅನಿಶ್ಚಂದ್ರ ತೋರನ್ (೧೦ನೇ ತರಗತಿ) ಮತ್ತು ಕುಮಾರಿ ಶೃಸ್ಟಿ ಮುದೋಳ್ (೧೦ನೇ ತರಗತಿ) ತಮಗೆ ಕೊಟ್ಟ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸಿ ಶಾಲೆಯ ಗೌರವಕ್ಕೆ ಪಾತ್ರರಾಗುವೆವು ಎಂದು ಸಂಕಲ್ಪ ಮಾಡಿದರು. ಕುಮಾರಿ ಶಿವಾನಿ ಯಸ್. ಅಪ್ಪಾ (೭ನೇ ತರಗತಿ) ವಂದನಾರ್ಪಣೆಯನ್ನು ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭವನ್ನು ಮುಕ್ತಾಯಗೊಳಿಸಲಾಯಿತು.