ಅಪ್ಪಾಜಿ ಭಾವನಾತ್ಮಕ ಕೃತಿ: ಸಾಹಿತಿ ಡಾ.ಗವಿಸಿದ್ಧಪ್ಪ

ಹುಮನಾಬಾದ:ಅ.1: ಸಾಮಾಜಿಕ ಸಮಸ್ಯೆ-ತಲ್ಲಣಗಳಿಗೆ ಕವಿ ಲೇಖಕರು ಸ್ಪಂದಿಸಿ ಬದ್ದತೆಯಿಂದ ಸಾಹಿತ್ಯ ರಚಿಸಲು ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಕರೆ ನೀಡಿ ದರು. ಇವತ್ತಿನ ಸಾಹಿತ್ಯ ರಾಜಕೀಯ,ಜಾತಿಯು ಗುಂ ಪುಗಾರಿಕೆ ಒಳ ಹೊಕ್ಕು ಪ್ರತಿಭೆಗಳಿಗೆ ಅವಕಾಶ ಸಿಗದಂತಾಗಿದೆ ಕನ್ನಡ ಕಟ್ಟುವಲ್ಲಿ,ಸಾಹಿತ್ಯ ಬಂದಾಗ ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ಸಲಹೆ ನೀಡಿದರು. ಸೂಪರ್ ಫಂಕ್ಷನ್ ಹಾಲ್ ದಲ್ಲಿ ತಾಲ್ಲೂಕು ದಲಿತ ಸಾಹಿತ್ಯ ಪರಿಷತ್ತು ಮತ್ತು ಕರುನಾಡು ಸಾಂಸ್ಕøತಿಕ ವೇದಿಕೆ ಹಮ್ಮಿಕೊಂಡ ಶಿಕ್ಷಕಿ ಉಮಾದೇವಿ ಹಲಬರ್ಗೆ ಅವರು ರಚಿಸಿದ ನನ್ನ ಅಂತರಂಗದ ಅಪ್ಪಾಜಿ ಪುಸ್ತಕ ಲೋಕಾರ್ಪಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಪುಸ್ತಕ ಕುರಿತು ಮಾತನಾಡುತ್ತಾ ಲೇಖಕಿ ಅಪ್ಪನನ್ನು ಕುರಿತು ಭಾವನಾತ್ಮಕವಾಗಿ ರಚಿಸಿದ್ದಾರೆ.ಅಪ್ಪನ ಜೊತೆ ಕುಟುಂಬ, ಪರಿಸರ,ಶಿಕ್ಷಣ,ಸಾಂಸ್ಕೃತಿಕ ಪರಿಸರ ಚಿತ್ರ ಣ ನೀಡಿ ಅಪ್ಪ ಕಠಿಣತೆ,ಅವ್ವ ಮೃದು;ಆದರೂ ಅಪ್ಪನ ತಾಳ್ಮೆ,ಹೃದಯ ಅಂತಃಕರಣ ಮೃದು ಎಂಬುದನ್ನು ಸಾ ಬೀತು ಪಡಿಸಿದ್ದಾರೆ ಅಪ್ಪಾಜಿ ಮನಸ್ಸು ಸೆರೆ ಹಿಡಿಯುತ್ತದೆಂದರು
ಪುಸ್ತಕ ಲೋಕಾರ್ಪಣೆ ಮಾಡಿದ ಕ್ಷೇತ್ರ ಶಿಕ್ಷಣಾಧಿ ಕಾರಿ ವೆಂಕಟೇಶ ಗುಡಾಳರು ಶಿಕ್ಷಕಿಯಾಗಿ ಸಾಹಿತ್ಯ ಕ್ಷೇ ತ್ರ ಪ್ರವೇಶಿಸಿ ಅಪ್ಪನ ಕುರಿತು ಬರೆದ ಪುಸ್ತಕ ಅವರ ತಂದೆ ಕೋರೆಯವರು ಶೈಕ್ಷಣಿಕ ವಿವರಗಳಿವೆ ಮುಂದೆ ಹೀಗೆ ಕೃತಿ ರಚಿಸಲು ಹಾರೈಸಿದರು.
ಸಾನಿಧ್ಯವಹಿಸಿದ ಬೇಲೂರು ಉರಿಲಿಂಗಪೆದ್ದಿ ಮಠದ
ಪಂಚಾಕ್ಷರಿ ಸ್ವಾಮೀಜಿಯವರು ಅವ್ವನನ್ನು ಕುರಿತು ಬರೆಯವವರೇ ಹೆಚ್ಚು ಅಪ್ಪ ನನ್ನು ಕುರಿತು ಬರೆದು ದಾಖಲೆ ಮಾಡಿದ್ದಾರೆ ಅವರಿನ್ನು ಸಾಹಿತ್ಯ ಸೇವೆ ಮಾಡ ಲಿ ಎಂದರು ಕಂಬಳಿಮಠದ ಸಿದ್ಧಯ್ಯ ಆಧುನಕ ಒಡಯರು ಆಶೀರ್ವಚನ ನೀಡಿದರು.ಅಧ್ಯಕ್ಷತೆಯನ್ನು ಮುಖ್ಯ ಗುರು ಕಂಠೆಪ್ಪ ಹಲಬರ್ಗೆವಹಿಸಿದ್ದರು.
ಲೇಖಕಿ ಉಮಾದೇವಿ,ಸಾಹಿತಿ ಪಾಂಡುರಂಗ ಕೋ ರೆ,ಡಾ.ಗಜಾನನ,ಕ.ರಾ.ಪ್ರಾ.ಶಾ.ಶಿ.ಸಂ.ಜಿಲ್ಲಾಧ್ಯಕ್ಷ ರವೀಂದ್ರ ರೆಡ್ಡಿ ಮಾಲಿ ಪಾಟೀಲ,ಸರಕಾರಿ ನೌಕರಸಂ ಘ ಅಧ್ಯಕ್ಷ ಶರದಕುಮಾರ ನಾರಾಯಣಪೇಟ್ಕರ್,ಸಾ. ಫು.ಶಿ.ಸಂಘದ ಜಿಲ್ಲಾಧ್ಯಕ್ಷೆ ಸಾರಿಕಾ ಗಂಗಾ,ನಿವೃತ್ತ ಮುಖ್ಯ ಗುರು ಮಾಷಿಕಪ್ಪ ಬಕ್ಕನ್,ಕಸಾಪ ಅಧ್ಯಕ್ಷ ಸಿದ್ದಲಿಂಗ ನಿರ್ಣಾ, ಕ.ರಾ.ಪ್ರಾ.ಶಿ.ಸಂಘದ ಅಧ್ಯಕ್ಷ ಮುರುಗೇಂದ್ರ ಸಜ್ಜನಶೆಟ್ಟಿ,ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರದ ಸಾಧನೆ ಪರಿಗಣಿಸಿ ಹಲವರಿಗೆ ಸನ್ಮಾ ನಿಸಲಾಯಿತು.ಸಂಗೀತ ಶಿಕ್ಷಕ ಜಗನ್ನಾಥ ಬೇಂದ್ರೆ ಪ್ರಾರ್ಥನೆ ಸ್ವಾಗತಗೀತೆ ಹಾಡಿದರು.ದಸಾಪ ತಾಲೂಕಾಧ್ಯಕ್ಷ ಶಿವರಾಜ ಡಿ.ಮೇತ್ರೆ ಸ್ವಾಗತಿಸಿದರು.ಲೇಖಕ ಐ. ಎಸ್.ಶಕೀಲ್ ನಿರೂಪಿಸಿ ದರು,ಸುಭಾಷ್ ಪಾಟೀಲ ವಂದಿಸಿದರು.ಡಾ.ಬಸವರಾ ಜ ದಯಾಸಾಗರ,ಸಿದ್ದಾರ್ಥಮಿತ್ರಾ,ಮಾರುತಿ ಪೂಜಾರ ಎಂ.ಆರ್.ಬಂಕಲಗಿ,ವಿಜಯಕುಮಾರ ಚೆಟ್ಟಿ,,ಶಿಕ್ಷಕರು, ಸಾಹಿತ್ಯಾಸಕ್ತರು ಇನ್ನಿತರ ಇದ್ದರು.