ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮದಲ್ಲಿ ಯೋಗ ಸಾಧಕ ಶಿಕ್ಷಕರಿಗೆ ಸತ್ಕಾರ

ಕಲಬುರಗಿ:ಮೇ.17:ಪತಂಜಲಿ ಯೋಗ ಸಮಿತಿ ಭಾರತ ಸ್ವಾಭಿಮಾನ ಟ್ರಸ್ಟ್ ರಾಜಮಾರ್ಗ ನವೋದಯ ತರಬೇತಿ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಉದನೂರು ರಸ್ತೆಯ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದು ವಾರಗಳ ಕಾಲ ನಡೆದ ಯೋಗ ತರಬೇತಿ ಸಭೆಯ ಸಮಾರೋಪ ಸಮಾರಂಭದಲ್ಲಿ ಯೋಗ ಸಾಧಕ ಶಿಕ್ಷಕರಾದ. ಶಿವಾನಂದ್ ಸಾಲಿಮಠ. ಸುಭಾಷ್ ಚಂದ್ರಕಾಂತ್ ಗುಂಡಗೋಟಿ ಮಂಜುಳಾ ತಡಿಬಿಡಿ ಕೆ ಆರ್ ಕುಲಕರ್ಣಿ ಏನ್ ಜಿ ವಿಕೋಪ ಮಧುಕರ್ . ಮಾಶಾಳಕರ್ ಅವರಿಗೆ ಸತ್ಕರಿಸಿ ಗೌರವಿಸಲಾಯಿತು

ಇಂದಿನ ವಿದ್ಯಾರ್ಥಿಗಳಿಗೆ ಯೋಗ ಮತ್ತು ಸಂಸ್ಕಾರ ನೀಡುವುದು ಬಾಳ ಅಗತ್ಯವಾಗಿದೆ.

ಯೋಗ ತರಬೇತಿ ಸಮಾರೋಪದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಹಾನಗರ ಪಾಲಿಕೆ ಸದಸ್ಯರಾದ ಬಸವರಾಜ್ ಬಿರಾಳ ಅವರು. ಮಾತನಾಡಿ ವಿದ್ಯಾರ್ಥಿಗಳಿಗೆ ಆಟ ಪಾಠದ ಜೊತೆಗೆ ಯೋಗ ಮತ್ತು ಸಂಸ್ಕಾರ ನೀಡುವುದು ಬಹಳ ಅಗತ್ಯವಾಗಿದೆ ಎಂದರು

ಶಿಕ್ಷಣ ಬಾಳ ಅಗತ್ಯವಾಗಿದೆ ಅದೇ ರೀತಿ ಆರೋಗ್ಯ ಕೊಡುವ ಬಹಳ ಮುಖ್ಯವಾಗಿದೆ ಎಂದರು

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುರುನಾಥ್ ಸರ್ ಅವರು ಮಾತನಾಡಿ. ಇಂಥ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಮಾನಸಿಕ ನೆಮ್ಮದಿ ಇರಬೇಕಾದರೆ ಯೋಗ ಬಹಳ ಮುಖ್ಯ ಎಂದರು

ಗುರು ಸಾಲಿಮಠ ಅವರು ನಿರೂಪಿಸಿದರು ಕುಮಾರಿ ರಕ್ಷಿತ್ ಅವರು ವಂದಿಸಿದರು

ಈ ಸಮಾರಂಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ರಾಜಕುಮಾರ್ ಉದನೂರು. ಮಲೆನಾಥ್ ಬಿರಾದಾರ್ ಬಲಬಿಮ್ ಬಿರಾದಾರ್
ವಿದ್ಯಾರ್ಥಿ ವಿದ್ಯಾರ್ಥಿನಿಯರು ಯೋಗ ತರಬೇತಿದಾರರು ಭಾಗವಹಿಸಿದರು