
* ಚಿ.ಗೋ ರಮೇಶ್
” ಮಗಳು ಐಎಎಸ್ ಅಥವಾ ಐಪಿಎಸ್ ಅಧಿಕಾರಿ ಮಾಡಬೇಕು ಎನ್ನುವುದು ಅಪ್ಪನ ಕನಸಾಗಿತ್ತು. ಆದರೆ ನಾನು ನಾಯಕಿಯಾದೆ. ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಧಿರಿಸಿನ ಭಾವಚಿತ್ರವನ್ನು ಅಪ್ಪ ತಮ್ಮ ಮೊಬೈಲ್ ಡಿಸ್ ಪ್ಲೇ ನಲ್ಲಿ ಹಾಕಿಕೊಂಡು ಸಂಭ್ರಮಿಸಿದ್ದಾರೆ…”
“ಶಿವಾಜಿ ಸೂರತ್ಕಲ್ – 2 ” ಚಿತ್ರದಲ್ಲಿ ಡಿಸಿಪಿ ದೀಪಾ ಕಾಮತ್ ಪಾತ್ರ ನಿಭಾಯಿಸಿರುವ ಕನ್ನಡದ ಪ್ರತಿಭಾನ್ವಿತ ನಟಿ ಮೇಘನಾ ಗಾಂವಕರ್ ಅವರು ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ತಂದೆ ಮಾರುತಿ ಗಾಂವಕರ್ ಖುಷಿ ಪಟ್ಟ ಕ್ಷಣದ ಬಗ್ಗೆ ಮಾಹಿತಿ ಹಂಚಿಕೊಂಡದ್ದು ಹೀಗೆ..
ನಿಜ ಜೀವನದಲ್ಲಿ ಪೊಲೀಸ್ ಅಧಿಕಾರಿಯಾಗಲು ಸಾದ್ಯವಾಗಲಿಲ್ಲ. ಆದರೆ ಶಿವಾಜಿ ಸೂರತ್ಕಲ್ – 2 ಚಿತ್ರದಲ್ಲಿ ತೆರೆಯ ಮೇಲೆ ಕನಸು ನನಸಾಗಿದೆ. ಹೀಗಾಗಿ ಒಂದು ರೀತಿ ಅಪ್ಪನ ಕನಸು ಕೂಡ ಈಡೇರಿದೆ ಎಂದರು.
ನಟಿ ರಾಧಿಕಾ ಚೇತನ್ ನಟನೆ ಮನಮುಟ್ಟಲಿದೆ. ಇನ್ನೂ ಹಾಡೊಂದರಲ್ಲಿ ನಟಿ ಸಂಗೀತ ಕಾಣಿಸಿಕೊಂಡಿದ್ದರೂ ಗಮನ ಸೆಳೆದಿದ್ದಾರೆ. ಶಿವಾಜಿ ಸೂರತ್ಕಲ್ -2 , ರಮೇಶ್ ಅರವಿಂದ್ ಅವರ ಚಿತ್ರ. ಆ ಕಾರಣಕ್ಕಾಗಿ ಚಿತ್ರಮಂದಿರಕ್ಕಾಗಿ ಬಂದು ಚಿತ್ರ ನೋಡಬೇಕು. ಜೊತೆಗೆ ಶಿವಾಜಿ ಸೂರತ್ಕಲ್ ಮೊದಲ ಭಾಗ ಯಶಸ್ವಿಯಾಗಿತ್ತು. ಈಗ ಮತ್ತಷ್ಟು ಕುತೂಹಲ ಹೆಚ್ಚಿಸಿದೆ ಎಂದರು.
ಸೈಕಲಾಜಿಕಲ್ , ಥ್ರಿಲ್ಲರ್, ಡಾರ್ಕ್ ಕಂಟೆಂಟ್ ಕಥೆಯ ಚಿತ್ರವನ್ನು ಜನರು ಚಿತ್ರಮಂದಿರಕ್ಕೆ ಬಂದು ಮ್ಯಾಜಿಕಲ್ ಅನುಭವ ವನ್ನು ಆನಂದಿಸಬೇಕು .ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿವರಣೆ ಅವರದು. ಚಿತ್ರದಲ್ಲಿ ಮಾಯಾವಿ ಯಾರು ಎನ್ನುವುದು ಕುತೂಹಲ,ನಾನೇ ಇರಬೆಹುದು ,ಯಾರಿಗೆ ಗೊತ್ತು.ಚಿತ್ರಮಂದರಿಕ್ಕೆ ಬಂದಾಗ ಮಾತ್ರ ಮಾಯಾವಿ ಯಾರು ಎನ್ನುವುದು ತಿಳಿಯಲಿದೆ ಎಂದರು
ರಮೇಶ್ ಸರ್ ಮೊದಲ ಕ್ರಷ್
ಎವರ್ ಗ್ರೀನ್ ಚಿತ್ರಗಳಲ್ಲಿ ಒಂದಾದ ಅಮೃತ ವರ್ಷಿಣಿ ಚಿತ್ರ ನೋಡಿ ನಟ ರಮೇಶ್ ಅರವಿಂದ್ ಅವರ ಮೇಲೆ ಮೊದಲ ಬಾರಿಗೆ ಕ್ರಷ್ ಆಗಿತ್ತು ಎಂದು ತಮ್ಮ ಕ್ರಷ್ ಬಗ್ಗೆ ಮಾಹಿತಿ ಹಂಚಿಕೊಂಡರು ನಟಿ ಮೇಘನಾ ಗಾಂವಕರ್.
ಆ ಬಳಿಕ ಅವರ ಅಭಿನಯದ ನೂರು ಜನ್ಮಕ್ಕೂ ಹಾಡು ಕೇಳಿದ ಮೇಲಂತೂ ಅವರ ಮೇಲೆ ಮತ್ತಷ್ಟು ಅಭಿಮಾನ ಹೆಚ್ಚಾಯಿತು. ಈಗ ಅವರ ಜೊತೆ ಕೆಲಸ ಮಾಡುವ ಅವಕಾಶ ಜೊತೆಗೆ ಅವರ ಬಾಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಖುಷಿಯಾಗಿದೆ ಎನ್ನುತ್ತಾರೆ ಅವರು.