ಅಪ್ಪಟ ಕನ್ನಡ ಸಿನಿಮಾ ಮಾತ್ರ ಮಾಡೋದು- ನಟ ದರ್ಶನ್

•             ಚಿ.ಗೋ ರಮೇಶ್

“ಚಿತ್ರರಂಗದಲ್ಲಿ ಅಲ್ಲ ಯಾರೇ ಏನೇ ಹೇಳಿದರೂ ಕೋಪ, ಬೇಜಾರು ಮಾಡಿಕೊಳ್ಳಲ್ಲ ಜೊತೆಗೆ ನೊಂದುಕೊಳ್ಳಲ್ಲ, ಸಿನಿಮಾ ಅಷ್ಟೇ ಮಾಡ್ತೀವಿ, ಯಾವ್ ಪ್ಯಾನ್ ಇಂಡಿಯಾನೂ ಇಲ್ಲ.ಅಪ್ಪಟ ಕನ್ನಡ ಸಿನಿಮಾ ಮಾತ್ರ ಮಾಡೋದು..”

ಹೀಗಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಮನದಾಳದ ಮಾತನ್ನು ಯಾರಿಗೆ ತಲುಪಿಸಬೇಕೋ ಯಾರಿಗೆ ಅರ್ಥ ಮಾಡಿಸಬೇಕೋ ಅವರಿಗೆ ಶಾಂತವಾಗಿ ಪ್ರತಿಕ್ರಿಯೆ ನೀಡಿದ್ದು ಹೀಗೆ..

ಮಂಡ್ಯದಲ್ಲಿ ಕಾಟೇರ ಚಿತ್ರದ ಹಾಡು ಬಿಡುಗಡೆಯಲ್ಲಿ ಮಾತನಾಡಿದ ಅವರು ಲೂನಾದಲ್ಲಿ ಓಡಾಡುತ್ತಿದ್ದವನನ್ನು ಲಾಂಬೋರ್ಗಿಯನಿಲ್ಲಿ ಕೂರಿಸಿದ್ದೀರಿ, ಇದಕ್ಕಿಂತ ಯಾರಿಗಣ್ಣ ಬೇಕು, ಸಾಕು, ಖುಷಿಯಾಗಿದ್ದೇನೆ. ಹೊರಗಡೆ ಹೋದರೆ ಚಾಪರ್ ಕೊಡ್ತಾರಾ ಅಲ್ಲಿಯೂ ಕೊಡೋದು ಅದೆ.

ಎಲ್ಲಿಯವರೆಗೆ ಮನರಂಜನೆ ಮಾಡಲು ಆಗುತ್ತೋ ಅಲ್ಲಿಯವರೆಗೆ ಸಿನಿಮಾ ಮಾಡ್ತೇನೆ.. ಕರ್ನಾಟಕದಲ್ಲಿ ಒಳ್ಳೊಳ್ಳೆ ಕಲಾವಿದರಿದ್ದಾರೆ. ಅವರನ್ನೆಲ್ಲಾ ಹಾಕಿಕೊಂಡು ಸಿನಿಮಾ ಮಾಡ್ತೇವೆ. ಮಾಲಾಶ್ರೀ ಮಗಳು ಆರಾಧನಾ ಮೊದಲ ಬಾರಿಗೆ ನಟಿಸಿದ್ದಾರೆ. ಮಾಲಾಶ್ರೀ ಅವರಿಗೆ ಕೊಟ್ಟ ಪ್ರೀತಿಯನ್ನು ಆರಾಧನಾ ಅವರಿಗೂ ಕೊಡಿ, ಜೊತೆಗೆ ಎಲ್ಲಾ ಹಿರೋಗೂ ಬೆಂಬಲವಿರಲಿ

ಸುಮಲತಾ ಹೆತ್ತ ತಾಯಿಯಲ್ಲ, ಆದರೆ ತಾಯಿಗಿಂತ ಹೆಚ್ಚು, ಕಾಟೇರ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ. ಸುಮಮ್ಮನಿಗೆ ಪ್ರೀತಿ ಬೆಂಬಲ ಸದಾ ಇರಲಿ, ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರ ಶ್ರಮವಿದೆ.ಸಿನಿಮಾ ಆಡಂಬರದ ಸಿನಿಮಾ ಅಲ್ಲ,ರೈತರ ಕಥೆಹೊಂದಿರುವ ಸಿನಿಮಾ, ಎಲ್ಲರ ಸಹಕಾರ ನೀಡಿ ಎಂದರು

ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದು ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ಧಾರೆ. ಚಿತ್ರದಲ್ಲಿ ಹಿರಿಯ ಕಿರಿಯ ಕಲಾವಿದರ ದೊಡ್ಡ ದಂಡು ಇದೆ.

ಗೆಡ್ಡೆ ಗೆಣಸು ಬೆಳಲು ಜಾಗಸಿಗಲ್ಲ

“ರೈತರಿಗೆ ಸಿಂಪಥಿ ಬೇಡ, ನ್ಯಾಯವಾದ ಬೆಲೆ ಕೊಡಿ,ರೈತರಿಗೆ ಬೆಲೆ ಕೊಡಿ, ಆಗ ಪ್ರತಿಯೊಬ್ಬರು ಹೆಲಿಕ್ಯಾಪ್ಟರ್ನಲ್ಲಿ ಓಡಾಡ್ತಾರೆ. ರೈತರು ತಮ್ಮ ಬಳಿ ಇರುವ ಜಾಗ ಮಾರಿಕೊಳ್ಳಬೇಡಿ, ಜಾಗ ಮಾರಿದ್ರೆ ಅಕ್ಕಿ ಬೆಳೆಯುವುದು ಇರಲಿ, ಗೆಡ್ಡೆ ಗೆಣಸು ಬೆಳೆಯಲು ಸಿಗಲ್ಲ. 56 ಸಿನಿಮಾ ಮಾಡಿದ್ದೇನೆ. 47 ವರ್ಷ ಆಗಿದೆ. ದೊಡ್ಡ ದೊಡ್ಡ ಹೀರೋಗಳಾದ ವಿನೋದ್ ಪ್ರಭಾಕರ್, ಸೂರ್ಯ, ಜೈದ್, ಧನ್ವೀರ್, ಚಿಕ್ಕಣ್ಣ ಸೇರಿದಂತೆ ಅನೇಕರು ಕಾಟೇರ ಚಿತ್ರಕ್ಕೆ ಬೆಂಬಲ ನೀಡಿರುವುದಕ್ಕೆ ಚಿರಋಣಿ..” – ನಟ ದರ್ಶನ್

ಚಿತ್ರಮಂದಿರದಲ್ಲಿ ಅಬ್ಬರ

ಮಂಡ್ಯದಲ್ಲಿ ಕಾಟೇರ ಚಿತ್ರದ ರೈತ ಗೀತೆ ಬಿಡುಗಡೆಯಾಗಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ಮಾಲಾಶ್ರೀ ಅವರ ಪುತ್ರಿ ಆರಾಧಾನಾ ನಾಯಕಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಅವಿನಾಶ್, ಶೃತಿ, ಬಿರಾದಾರ್,ಪದ್ಮಾ ವಾಸಂತಿ , ರವಿ ಚೇತನ್, ಕುಮಾರ್ ಗೋವಿಂದು ಸೇರಿದಂತೆ ಹಿರಿ ಕಿರಿಯ ಕಲಾವಿದರ ದೊಡ್ಡ ದಂಡೇ ಚಿತ್ರದಲ್ಲಿದೆ. ಮಂಡದಲ್ಲಿ ಅಬ್ಬರಿಸಿದ ಬಳಿಕ ಚಿತ್ರಮಂದಿರದಲ್ಲಿಯೂ ಅಬ್ಬರಿಸಿದೆ.