ಅಪೌಷ್ಠಿಕ ಮಕ್ಕಳ ಆರೈಕೆ ಬಾಲಚೈತನ್ಯ ಕೇಂದ್ರ ಪ್ರಾರಂಭ

ಸಿರುಗುಪ್ಪ ಜೂ 10 : ಕೊರೊನಾ ಮಾಹಾಮಾರಿ ಎರಡನೇ ಅಲೆ ನಿಧಾನಗತಿಯಲ್ಲಿ ಇಳಿಮುಖವಾಗುತ್ತಿರುವ ಬೆನ್ನಲೇ ಈಗ ಕೊರೊನಾ ಮೂರನೇ ಅಲೆ ಭೀತಿ ಶುರುವಾಗಿದೆ. ಅದರಲ್ಲೂ ಕೊರೊನಾ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಅಪಾಯ ಎನ್ನುವುದನ್ನು ತಜ್ಞರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡರೆ ತುಂಬಾ ಅಪಾಯ ಎನ್ನುವ ಮಾಹಿತಿಯು ಲಭ್ಯವಾಗಿದೆ. ಈ ಕಾರಣಕ್ಕಾಗಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ ಮಕ್ಕಳ ಪೋಷಕರು ಈ ಆರೈಕೆ ಕೇಂದ್ರಕ್ಕೆ ಕರೆತಂದು ಮೂರನೇ ಅಲೆಯ ಅಪಾಯವನ್ನು ತಡೆಯುವಂತೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.
ನಗರದ ಕೃಷ್ಣ ನಗರದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಯಲಯದಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ಜಿಲ್ಲಾ ಮತ್ತು ತಾಲೂಕು ಮಹಿಳ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮತ್ತು ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹೋಗದಲ್ಲಿ ಅಪೌಷ್ಠಿಕ ಮಕ್ಕಳ ಆರೈಕೆ ಬಾಲಚೈತನ್ಯ ಕೇಂದ್ರವು ಉದ್ಘಾಟಿಸಿ ನಂತರ ಮಾತನಾಡಿದ ಅವರು ಕೊರೊನಾ ಮೂರನೇ ಅಲೆಯ ಆತಂಕದಿಂದ ದೂರವಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ಬಳ್ಳಾರಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಯೋಜನೆಯೊಂದನ್ನು ಜಾರಿಗೊಳಿಸಿ ಸಿರುಗುಪ್ಪದಲ್ಲಿ ಆರೈಕೆ ಕೇಂದ್ರ ಪ್ರಾರಂಭಿಸಿವುದು ಆರೋಗ್ಯ ದೃಷ್ಠಿಯಿಂದ ಒಳ್ಳೆಯದೆ ಆಗಿದೆ, ಇದಕ್ಕೆ ಸಾರ್ವಜನಿಕರು ಸಹಕಾರದಿಂದ ಕೊರೊನಾ ಮೂರನೇ ಅಲೆಯ ಅಪಾಯವನ್ನು ತಡೆಲು ಸಾಧ್ಯವಾಗುತ್ತದೆ. ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ಕಾಳಜಿಗಾಗಿ ಮಕ್ಕಳಿಗಾಗಿ ಬಾಲ್ಯ ಚೈತನ್ಯ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ವಸತಿ ನಿಲಯದಲ್ಲಿ ಈ ಆರೈಕೆ ಕೇಂದ್ರವನ್ನು ಆರಂಭಿಸಿದ್ದು, ತಾಲೂಕಿಗೆ ಎರಡರಂತೆ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದೆ. ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಗು ಹಾಗೂ ಮಗುವಿನ ತಾಯಿ ಈ ಆರೈಕೆ ಕೇಂದ್ರದಲ್ಲಿ 14 ದಿನಗಳ ಕಾಲ ಇರಬೇಕು. ಈ ಆರೈಕೆ ಕೇಂದ್ರದಲ್ಲಿ ವೈದ್ಯಕೀಯ ಚಿಕಿತ್ಸೆ ಜತೆಗೆ ಮಕ್ಕಳಿಗೆ ಪೌಷ್ಠಿಕತೆ ಹೆಚ್ಚಿಸುವ ಆಹಾರವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರಭಾರಿ ತಾಲೂಕು ಆರೋಗ್ಯ ಅಧಿಕಾರಿಣಿ ಡಾ.ವಿದ್ಯಾಶ್ರೀ ಮಾತನಾಡಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೈಕೆಯ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಹಕಾರದಿಂದ 0-6 ವರ್ಷದೊಳಗಿನ ಮಕ್ಕಳ ಗುರುತಿಸಿದ್ದು, ಇಂತಹ ಮಕ್ಕಳ ಮೇಲೆ ಆರೋಗ್ಯದ ತೀವ್ರ ನಿಗಾ ವಹಿಸಲು ಮುಂದಾಗಿದೆ. ತಾಲೂಕಿನ 84ಗ್ರಾಮಗಳಿಂದ ಅಪೌಷ್ಠಿಕತೆಯಿಂದ ನರಳುವ 84 ಮಕ್ಕಳನ್ನು ಗುರುತಿಸಲಾಗಿದೆ. ಈ ಮಕ್ಕಳನ್ನು ಎರಡು ಹಂತದಲ್ಲಿ ಆಯ್ಕೆ ಮಾಡಿ ಆರೈಕೆ ಮಾಡಲಾಗುತ್ತದೆ, ಮಗುವಿನ ಜತೆಯಲ್ಲಿ ತಾಯಿಯನ್ನು ಕರೆತಂದು ತಾಯಿಗೆ ಕೊರೊನ ಪರೀಕ್ಷೆಯನ್ನು ಮಾಡಿ ಮಕ್ಕಳೊಂದಿಗೆ ಇರುಲು ಬಿಡುವುದು, ತಾಯಿಗೆ ಕೊರೊನಾ ಪಾಜಿಟಿವ್ ಕಂಡು ಬಂದಲ್ಲಿ ಅಂತವರನ್ನು ಕೊರೊನಾ ಚಿಕಿತ್ಸೆ ನೀಡಿ ಎರಡನೇ ಅವಧಿಗೆ ಆಯ್ಕೆ ಮಾಡಲಾಗುತ್ತದೆ.
ಆರೈಕೆ ಕೇಂದ್ರಕ್ಕೆ ಮಗುವನ್ನು ಕರೆತಂದಾಗ ಮೊದಲನೇ ದಿನವು ಮಕ್ಕಳನ್ನು ಮತ್ತ ತಾಯಿಯನ್ನು ಎಲ್ಲಾ ಪರಿಕ್ಷೆಗಳನ್ನು ನಡೆಸಿ,ಅವರಿಗೆ ಸೂಕ್ತವಾದ ಚಿಕಿತ್ಸೆ ಮತ್ತು ಯಾವ ಪೌಷ್ಠಿಕ ಆಹಾರ ಸೂಕ್ತ ಅದನ್ನು ನೀಡಲಾಗುತ್ತದೆ, ಈ ಕೇಂದ್ರದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದೇ ಅತಿ ಮುಖ್ಯವಾಗಿದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ತಹಶೀಲ್ದಾರ್ ಸತೀಶ್ ಬಿ.ಕೂಡಲಗಿ, ನಗರಸಭೆ ಅಧ್ಯಕ್ಷ ಡಿ.ನಾಗರಾಜ, ತಾಲೂಕು ಪಂಚಾಯಿತಿ ಕಾರ್ಯಾನಿರ್ವಹಕಾಧಿಕಾರಿ ಶಿವಪ್ಪ ಸುಬೇದರ್, ತೋಟಗಾರಿಕೆ ಸಹಾಯಕ ನಿದೇರ್ಶಕ ವಿಶ್ವನಾಥ, ಕೃಷಿ ಸಹಾಯಕ ನಿದೇರ್ಶಕ ನಜೀರ್ ಅಹ್ಮದ್, ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ದೇವರಾಜ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಎ.ಜಲಾಲಪ್ಪ ಇದ್ದರು.