ಅಪೌಷ್ಠಿಕತೆಯಿಂದ ಮಕ್ಕಳ ಬೆಳವಣಿಗೆ ಕುಂಠಿತ

ಆಳಂದ ; ನ.24:ತಾಲೂಕಿನ ನಿಂಬಾಳ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಜಂತು ಹುಳು ದಿನಾಚರಣೆಯ ಈ ಪ್ರಯುಕ್ತ ನಿಂಬಾಳ ಆರೋಗ್ಯ ಉಪಕೇಂದ್ರದ ಸಿಬ್ಬಂದಿ ಇಲ್ಲಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೌಢ ಶಾಲೆ ಅಂಗನವಾಡಿ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನುಂಗಿಸಿದರು.
ನಂತರ ಮಾತನಾಡಿದ ಉಪಕೇಂದ್ರದ ಆರೋಗ್ಯ ಸಹಾಯಕಿ ರೋಹಿಣಿ ಹಿರೇಮಠ ಮಕ್ಕಳಿಗೆ ಇಂದು ಸದೃಡ ಆರೋಗ್ಯ ಹೊಂದುವುದು ಬಹಳ ಅವಶ್ಯಕವಾಗಿ ಸರಿಯಾದ ಸಮಯದಲ್ಲಿ ಊಟ ಪೌಷ್ಠಿಕ ಆಹರ ಸೇವನೆಯಿಂದ ಉತ್ತಮ ಆರೋಗ್ಯ ಹೊಂದ ಬಹುದಾಗಿ ಅಪೌಷ್ಠಿಕ ಆಹಾರ ಸೇವೆನಯಿಂದ ಮಕ್ಕಳ ಬೆಳವಣಿಗೆ ಕುಟಿಂತವಾಗಿತ್ತದೆ ಅದಕ್ಕಾಗಿ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಆರೋಗ್ಯ ಇಲಾಖೆ ಅನುಷ್ಠಾನಕ್ಕೆ ತರುತ್ತಿರುವ ಯೋಜನೆಗಳು ಸಾರ್ಥಕವಾಗಬೇಕಾದರೆ ಜನರು ಸಹಕರಿಸಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು ಶಿಕ್ಷಕರಾದ ಪರಮೇಶ್ವರ ಮಾತನಾಡಿ ಜಂತು ಹುಳು ಇಂದು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ . ಹೊರಗಿನ ಕರಿದ ಪದಾರ್ಥಗಳ ಸೇವನೆಯಿಂದ ಜಂತು ಹುಳು ಬೆಳೆದು ಮಕ್ಕಳನ್ನು ಕಾಡುತ್ತದೆ ಅದಕ್ಕಾಗಿ ಎಲ್ಲರೂ ಜಂತು ಹುಳು ನಿವಾರಣೆ ಮಾತ್ರೆ ಸೇವನೆ ಮಾಡಬೇಕು ಎಂದರು. ನಂತರ ಉಪಕೇಂದ್ರದ ಎಂ.ಎಲ್.ಎಚ್.ಪಿ ಶಿವಲೀಲಾ ಮಾತನಾಡಿ ಜಂತು ಹುಳುವಿನ ತೊಂದರೆಯಿಂದ ಮಕ್ಕಳ ಶಾರೀಕ ಬೌದ್ಧಿಕ ಬೆಳವಣಿಗೆ ಕುಂಠಿತಗೊಂಡು ಶೈಕ್ಷಣಿಕ ಪ್ರಗತಿ ಇಳಿಮುಖವಾಗಲಿದೆ ಆದ್ದರಿಂದ ಸರಕಾರವು ಆರೋಗ್ಯ ಇಲಾಖೆ ವತಿಯಿಂದ 1 ರಿಂದ 19 ವರ್ಷದ ಮಕ್ಕಳಿಗೆ ಜಂತು ನಿವಾರಣೆ ಮಾತ್ರೆ ನೀಡುತ್ತಿದೆ ಇದರ ಸೇವನೆಯಿಂದ ಮಕ್ಕಳ ಬೌದ್ಧಿಕ ದೈಹಿಕ ಬೆಳವಣಿಗೆಗೆ ಪೂರಕವಾಗಲಿದೆ ಎಂದರು ಆಶಾ ಕಾರ್ಯಕರ್ತರು , ಶಿಕ್ಷಕರು ಇದ್ದರು .