ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ

ಚಿತ್ತಾಪುರ:ನ.7: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲಬುರ್ಗಿ, ಶಿಶು ಅಭಿವೃದ್ಧಿ ಯೋಜನೆ ನೇತೃತ್ವಲ್ಲಿ ಪಟ್ಟಣದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಶುಕ್ರವಾರ ನಡೆಯಿತು.

ಸಸಿಗೆ ನೀರು ಎರೆಯುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲೂಕ ವೈದ್ಯಾಧಿಕಾರಿ ಸುರೇಶ್ ಮೆಕಿನ್ ಮಾತನಾಡಿ ಅಂಗನವಾಡಿ ಕೇಂದ್ರಗಳಿಗೆ ಪ್ರತಿದಿನ ಮಕ್ಕಳನ್ನು ಕಳುಹಿಸುವುದರ ಜೊತೆಗೆ ಮಗುವಿನ ಆರೋಗ್ಯದಲ್ಲಿ ನೂನ್ಯತೆ ಕಂಡುಬಂದಲ್ಲಿ ಪಾಲಕರು ತಪ್ಪದೇ ವೈದ್ಯರ ಸಲಹೆಗಳನ್ನು ಪಾಲಿಸಬೇಕು. ಮಕ್ಕಳಿಗೆ ಸರಿಯಾದ ಪ್ರಮಾಣದಲ್ಲಿ ಪೌಷ್ಠಿಕ ಹಾಗೂ ಸತ್ವಯುತ ಆಹಾರವನ್ನು ನೀಡುವುದರಿಂದ ಚಿಕ್ಕ ಮಕ್ಕಳಲ್ಲಿ ತೂಕ ಕಡಿಮೆ ಆಗುವುದನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.

ತಾಲೂಕಿನ 263 ಅಂಗನವಾಡಿ ಕೇಂದ್ರಗಳಲ್ಲಿನ ತೀವ್ರ ಅಪೌಷ್ಠಿಕ ಮಕ್ಕಳು-99, ಸಾಮಾನ್ಯ ಮಕ್ಕಳು-3,625. ಸಾಧಾರಣ ಮಕ್ಕಳು-12,714.

ಒಟ್ಟು 21,181.

ಅಂಗನವಾಡಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ವೈದ್ಯಾಧಿಕಾರಿಗಳ ತಪಾಸಣೆ ಮಾಡಲಾಗುತ್ತಿದೆ ಎಂದು ಸಿಡಿಪಿಓ ರಾಜಕುಮಾರ್ ರಾಠೋಡ್ ತಿಳಿಸಿದರು.

ಈ ವೇಳೆಯಲ್ಲಿ ಡಾ, ಶಾಂತಯ್ಯ ಸ್ವಾಮಿ. ಡಾ, ವಿವೇಕಾನಂದ, ಸೇರಿದಂತೆ ಅಂಗನವಾಡಿ ಮೇಲ್ವಿಚಾರಕಿಯರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಕ್ಕಳ ತಾಯಂದಿರು ಸೇರಿದಂತೆ ಇತರರಿದ್ದರು.