ಅಪೌಷ್ಟಿಕತೆ ಸರಿದೂಗಿಸಿ, ಮಕ್ಕಳ ಮರಣ ತಪ್ಪಿಸಿಚಿತ್ರದುರ್ಗ.ನ.;ಮಕ್ಕಳ ಅಪೌಷ್ಟಿಕತೆ ಸರಿದೂಗಿಸಿ ಸರಿಯಾದ ಆರೈಕೆಯೊಂದಿಗೆ ಮಕ್ಕಳ ಮರಣ ತಪ್ಪಿಸಿ ಎಂದು ಜಿಲ್ಲಾ ತಾಯಿ ಮಕ್ಕಳ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ರೇಣುಪ್ರಸಾದ್ ಹೇಳಿದರು.ನಗರದ ಬಾಲಭವನದಲ್ಲಿ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ಬೆಟ್ಟದ ಹೂ ಸೇವಾ ಸಂಸ್ಥೆ ಸಹಯೋಗದೊಂದಿಗೆ ಅಪೌಷ್ಟಿಕ, ತೀವ್ರ ಅಪೌಷ್ಟಿಕತೆಯ ಮಕ್ಕಳ ಆರೋಗ್ಯ ತಪಾಸಣೆ, ಚಿಕಿತ್ಸೆ ಮಾಹಿತಿ ಶಿಕ್ಷಣಾ ತಾಯಂದಿರಿಗೆ ಪೌಷ್ಟಿಕಾಹಾರ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಾಧಾರಣ ಅಪೌಷ್ಟಿಕತೆ ಮಕ್ಕಳು 6861 ಮಕ್ಕಳು, ತೀವ್ರ ಅಪೌಷ್ಟಿಕತೆ ಮಕ್ಕಳು 224 ಮಕ್ಕಳಿರುತ್ತಾರೆ. ಈ ಮಕ್ಕಳ ಸರಿಯಾದ ಆರೈಕೆ ಇಲ್ಲವಾದಲ್ಲಿ ಬೆಳವಣಿಗೆ ಕುಂಠಿತವಾಗುತ್ತದೆ. ಪದೇ ಪದೇ ರೋಗಗಳಿಗೆ ತುತ್ತಾಗುತ್ತವೆ. ಮಕ್ಕಳ  ಅಪೌಷ್ಟಿಕತೆ ಸರಿದೂಗಿಸಿ ಸರಿಯಾದ ಆರೈಕೆಯೊಂದಿಗೆ ಮಕ್ಕಳ ಮರಣ ತಪ್ಪಿಸಿ. ಭಾಗವಹಿಸಿರುವ ಎಲ್ಲಾ ತಾಯಂದಿರು ಮಕ್ಕಳ ಪೆÇೀಷಣೆಯ ಬಗ್ಗೆ ನೀಡುವ ತರಬೇತಿ ಪ್ರಯೋಜನ ಪಡೆದು ಮಕ್ಕಳ ಲಾಲನೆ ಪಾಲನೆ ಮಾಡಿ ಎಂದರು.
ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಮಾತನಾಡಿ,  ಮಕ್ಕಳಲ್ಲಿ, ತಾಯಂದಿರಲ್ಲಿ ಕಂಡು ಬರುವ ಅಪೌಷ್ಟಿಕತೆಗೆ ಮುಖ್ಯ ಕಾರಣ ಒಂದು ಹೆರಿಗೆಯಿಂದ ಮತ್ತೊಂದು ಹೆರಿಗೆಯ ಮದ್ಯದ ಅಂತರ ಕಾಯ್ದುಕೊಳ್ಳದೇ ಇರುವುದು. ಬಾಲ್ಯ ವಿವಾಹ ಮಾಡಿಕೊಳ್ಳುವುದು ಮುಖ್ಯವಾಗಿದೆ. ಅಂತರದ ಹೆರಿಗೆ ವಿಧಾನವನ್ನು ತಪ್ಪದೇ ಪಾಲಿಸುವುದು. ಬಾಲ್ಯ ವಿವಾಹ ತಡೆಗಟ್ಟುವುದು ಮಕ್ಕಳ ಆರೈಕಯಲ್ಲಿ ಪೌಷ್ಟಿಕಾಹಾರ ಜ್ಞಾನ ಅವಶ್ಯವಿದೆ ಎಂದರು
ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ.ತಿಮ್ಮೇಗೌಡ, ಎದೆಹಾಲಿನ ಮಹತ್ವ ಪೂರಕ ಪೌಷ್ಟಿಕಾಹಾರದ ಬಗ್ಗೆ ಮಗುವಿನ ಬೆಳವಣಿಗೆ ಹಂತದಲ್ಲಿ ಪೆÇೀಷಕರು ನಿರ್ವಹಿಸುವ ಜವಾಬ್ದಾರಿಯ ಬಗ್ಗೆ ತಿಳಿಸಿದರು.