ಅಪೌಷ್ಟಿಕತೆಯಿಂದ ಏಕಾಗ್ರತೆಯ ಕೊರತೆ

 ಚಿತ್ರದುರ್ಗ.೨೪;  ತಾಲೂಕಿನ ಕಳ್ಳಿರೋಪ ಗ್ರಾಮದಲ್ಲಿ  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ .ಶಿಶು ಅಭಿವೃದ್ಧಿ ಯೋಜನೆ  ವತಿಯಿಂದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರಂಭ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ  ಬಿ.ಕೆ ಗಿರೀಶ್ ರವರು ಮಾತನಾಡುತ್ತಾ ಅಪೌಷ್ಟಿಕತೆಯಿಂದ ಏಕಾಗ್ರತೆಯ ಕೊರತೆ ಆಗಬಹುದು. ಉತ್ತಮ ಆರೋಗ್ಯ ಮತ್ತು ಜೀವನಶೈಲಿಯನ್ನು ಅಳವಡಿಸಿಕೊಂಡರೆ ರೋಗಗಳಿಂದ ದೂರ ಇರಬಹುದು ದಿನನಿತ್ಯ ಆಹಾರಪದ್ಧತಿಯಲ್ಲಿ ಪೋಷಕಾಂಶವಿರುವ ಆಹಾರವನ್ನು ಸೇವಿಸಬೇಕು. ಆಹಾರ ಸೇವಿಸಲು ಯಾವುದೇ ಹೊರೆಯಾಗುವುದಿಲ್ಲ ಸಾಮಾನ್ಯವಾಗಿ ಪ್ರತಿದಿನ ಬಳಕೆಮಾಡುವ ಸೊಪ್ಪು-ತರಕಾರಿ ಕಾಳುಗಳಲ್ಲಿ ಪೋಷಕಾಂಶ ಇರುತ್ತವೆ ಗ್ರಾಮೀಣ ಪ್ರದೇಶದಲ್ಲಿ ರಾಗಿ ಹೆಚ್ಚು ಬಳಸುತ್ತಾರೆ, ರಾಗಿಯಲ್ಲಿ ಪೋಷಕಾಂಶವಿರುತ್ತದೆ ಪೋಷಣೆಯ ಬಗ್ಗೆ ಈಗಾಗಲೇ ಎಲ್ಲಾ ಗ್ರಾಮಗಳಲ್ಲಿ ಶಿಶು ಅಭಿವೃದ್ಧಿ ಯೋಜನೆ ಮೂಲಕ ಮಾಹಿತಿಯನ್ನು ನೀಡಲಾಗುತ್ತಿದೆ ಕಾನೂನಿಗೆ ಸಂಬAಧಿಸಿದAತೆಉಚಿತ ಮಾಹಿತಿಗಳಿಗೆ ಕಾನೂನು ಸೇವಾ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದೆ ತಾವು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಎನ್ ಸುಧಾ ರವರು ಮಾತನಾಡುತ್ತಾ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಮಕ್ಕಳು ಆರೋಗ್ಯದಲ್ಲಿ ಸದೃಢರಾಗಿರುತ್ತಾರೆ ನೈಸರ್ಗಿಕವಾಗಿ ಸಿಗುವಸಂಪನ್ಮೂಲವನ್ನು ಕ್ರೋಡೀಕರಿಸಿ ಆಹಾರ ಪದ್ಧತಿಯಲ್ಲಿ ದಿನನಿತ್ಯ ಬಳಸಿಕೊಳ್ಳಬೇಕು ಅದರಿಂದ ಮನುಷ್ಯ ಸದೃಢ ನಾಗಿರುತ್ತಾನೆ ಗ್ರಾಮೀಣ ಪ್ರದೇಶದ ಆರೋಗ್ಯ ಮತ್ತು ಜೀವನ ಶೈಲಿ ನಗರಕ್ಕೆ ಹೋಲಿಸಿದರೆ ಸ್ವಲ್ಪ ಭಿನ್ನವಾಗಿರುತ್ತದೆ ಆದ್ದರಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಸೊಪ್ಪು ಹಸಿತರಕಾರಿ ಯಥೇಚ್ಛವಾಗಿ ಸೇವಿಸುವುದರಿಂದ ಸದೃಢ ಆರೋಗ್ಯವನ್ನು ಪಡೆಯುತ್ತಿದ್ದಾರೆ. ನಾವು ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ದೈಹಿಕ ಕಸರತ್ತು ಸಹ ಸಹಕಾರಿಯಾಗುತ್ತವೆ ಎಂದರು ವೇದಿಕೆಯಲ್ಲಿ ಸದಸ್ಯರಾದ ತಿಮ್ಮಣ್ಣ , ಎಲ್ಲಮ್ಮ ಮಹಿಳಾ ಮೇಲ್ವಿಚಾರಕರಾದ ಶ್ರೀಮತಿ ಶೋಭಾ ನಾವಳ್ಳಿ, ಶ್ರೀಮತಿ ಪಾವನ ಮುಖ್ಯ ಶಿಕ್ಷಕರಾದ ನಾಗರಾಜ .ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಫಲಾನುಭವಿಗಳು ಉಪಸ್ಥಿತರಿದ್ದರು.