ಅಪೂರ್ವ ಕಲಾವಿದ ಪುನೀತ ಹೆಸರಲ್ಲಿ ಶಾಲೆ ಆಸ್ಪತ್ರೆ ಆರಂಭ : ಜನಾರ್ಧನರೆಡ್ಡಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ನ 08 : ಪುನೀತ್ ಅವರ ನಟನೆ ಅಪೂರ್ವವಾದುದು, ಅವರ ಜೀವನದಲ್ಲಿ ವೃದ್ದರಿಗೆ ನೀಡಿದ ಮಹತ್ವವನ್ನು ಅರಿತು ನಾವು ಇಂದು ನಮ್ಮ ವೃದ್ದಾಶ್ರಮದಲ್ಲಿ ಪುಣ್ಯತಿಥಿ ಹಮ್ಮಿಕೊಂಡಿದೆ. ಅವರ ಹೆಸರಲ್ಲಿ ನಗರದಲ್ಲಿ ಬಡ ಮಕ್ಕಳ ವಸತಿ ಶಾಲೆಯನ್ನು ಮತ್ತು ಆಸ್ಪತ್ರೆ ಆರಂಭಿಸುವ ಚಿಂತನೆ ಇದೆ ಎಂದು ಮಾಜಿ ಸಚಿವ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಅವರು ಇಂದು ನಗರದ ಬೆಳಗಲ್ಲು ರಸ್ತೆಯಲ್ಲಿನ ವಿಶ್ವಭಾರತಿ‌ ಕಲಾನಿಕೇತನದ ರುಕ್ಮಿಣಮ್ಮ
ಚಂಗಾರೆಡ್ಡಿ ಬುದ್ದಿಮಾಂದ್ಯ ಮಕ್ಕಳ ಶಾಲೆಯ ಆವರಣದಲ್ಲಿ ನಟ ಪುನೀತ್ ರಾಜ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು‌ ಮಾತನಾಡುತ್ತಿದ್ದರು.
ನಮಗಿಂತಲೂ ಚಿಕ್ಕವರಾದ ಪುನೀತ್ ಅವರ ಪುಣ್ಯತಿಥಿ ಮಾಡುವ ದಿನ‌ ಬರುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದರು.

ಅಪೂರ್ವ ಕಲಾವಿದ, ಅವರ ಸಾಮಜಿಕ ಸೇವೆ ಅದ್ವಿತೀಯವಾದುದು. ಪುನೀತ್ ಸಮಾಜ ಸೇವೆಯನ್ನು ಸ್ಮರಿಸಿ ಪಾಕಿಸ್ತಾನದಲ್ಲಿನ ಓರ್ವ ಇಂಜಿನೀಯರ್ ಸಹ ಪುನೀತ್ ಅಭಿಮಾನಿಯಾಗಿದ್ದ.
ರಾಜಕುಮಾರ್ ಚಿತ್ರಗಳಿಂದ ಸಂಸ್ಕಾರ ಪಡೆದಂತೆ ಪುನೀತ್ ಚಿತ್ರಗಳಿಂದಲೂ ಸಾಮಾಜಿಕ ಕಳಕಳಿ, ಸಂಸ್ಕಾರದಿಂದ ಕೂಡಿದ್ದವಾಗಿವೆ.
ಪುನಿತ್ ಅವರೊಂದಿಗಿನ‌ ತಮ್ಮ ಒಡನಾಟ ಸ್ಮರಿಸುತ್ತ. ಹಂಪಿಯಲ್ಲಿ‌ ನಡೆದ ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಪುನಿತ್ ಅವರ ನಡೆ ಮೆಲುಕು ಹಾಕಿದರು.

ರಾಜ್ಯದಲ್ಲಿ 16 ವೃದ್ದಾಶ್ರಮ ಎರೆಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೆರವು ನೀಡಿದ್ದಾರೆ. ಅವರ ಉತ್ತಮ ಜೀವನವನ್ನು ವಿಧಿ ಸಹಿಸದೇ
ಕರೆದುಕೊಂಡಿದೆಂದರು.
ನಮ್ಮ‌ಮಗ ಕಿರೀಟಿಗೆ ಚನಲ ಚಿತ್ರದ ನಟನೆ ಬಗ್ಗೆ ತಿಳಿಸಿದ್ದಾರೆ.
ಪುನೀತ್ ಅವರ ಹೆಸರಲ್ಲಿ ಮುಂದಿನ‌ ದಿನದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆಂದರು.
ಪುನೀತ್ ಗೆ ಪದ್ಮಶ್ರೀ ಪ್ರಶಸ್ತಿ ಕೊಡಿಸಲು ಸರ್ಕಾರ ತನ್ನ ಪ್ರಯತ್ನ‌ ಮಾಡಲಿ ಎಂದರು.
ಪುನೀತ್ ಹೆಸರಿನ ಶಾಲೆಯನ್ನು ಆದಷ್ಟು ಬೇಗ ಇದೇ ವರ್ಷ ಆರಂಭಿಸುವ ಚಿಂತನೆ ಇದೆ ಎಂದರು.

ಬಾಕ್ಸ್
ಬಳ್ಳಾರಿಗೆ ಸೇರಿಸು:
ನನ್ನ ಸಂಕಷ್ಟದ ದಿನಗಳಲ್ಲಿ ನಾನು ದೇವರಲ್ಲಿ ಪ್ರಾರ್ಥಿಸಿದ್ದು ಎಂದರೆ. ನನಗೆ ರಾಜಕೀಯವಾಗಲಿ, ಪದವಿಯಾಗಲ ಅಲ್ಲ. ನಾನು
ಹುಟ್ಟಿ ಬೆಳೆದ ಬಳ್ಳಾರಿಗೆ ಸೇರಿಸಿಬಿಡು ಎಂದು ಅದು ಈಗ ಆಗಿದೆ.
ಜನಾರ್ಧನ ರೆಡ್ಡಿ ಮಾಜಿ ಸಚಿವರು.

ಬಾಕ್ಸ್
ನಗರದ ಬಸ್ ನಿಲ್ದಾಣಕ್ಕೆ ಪುನತ್ ಹೆಸರು:

ಸರ್ಕಾರದ ಜಾಹಿರಾತುಗಳಿಗೆ ಉಚಿತವಾಗಿ ನೀಡಿದೆ ಅವರ ಉತ್ತಮ‌ ಜೀವನ‌ ಎಲ್ಲಾ ಯುವ ಜನತೆಗೆ ಮಾರ್ಗದರ್ಶನವಾಗಿದೆ. ಅದಕ್ಕಾಗಿ‌ ಅವರ ಹೆಸರನ್ನು
ನಗರದ ಬಸ್ ನಿಲ್ದಾಣಕ್ಕೆ ಇಡಲು ಸರ್ಕಾರದ ಜೊತೆ ಸಮಾಲೋಚನೆ ಮಾಡಲಿದೆಂದರು.
ಗಾಲಿ ಸೋಮಶೇಖರ ರೆಡ್ಡಿ ನಗರ ಶಾಸಕರು‌ ಬಳ್ಳಾರಿ.


ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಮಾತನಾಡಿ, ಪುನೀತ್ ಅವರ ಸಮಾಜ ಸೇವೆ ಮತ್ತು ಸಹೋದರ ಜನಾರ್ಧನ ರೆಡ್ಡಿ ಅವರ ಸಮಾಜ ಸೇವೆ ಒಂದೇ ಆಗಿದೆ.‌ಕಳೆದ 27 ವರ್ಷದ ಹಿಂದೆಯೇ ಜನಾರ್ಧನ ರೆಡ್ಡಿ ಅವರು ವೃದ್ದಾಶ್ರಮ ಆರಂಭಿಸಿದರು ಎಂದರು. ಅಲ್ಲದೆ ಇಲ್ಲಿ‌ಬುದ್ದಿ ಮಾಂದ್ಯ ಮಕ್ಕಳ ಶಾಲೆ ಆರಂಭಿಸಿದೆ ಎಂದರು.
ನಾವು ನಗರದಲ್ಲಿ ರಾಜಕುಮಾರ್ ರಸ್ತೆ, ಪಾರ್ಕ್ ಮಾಡಿದ್ದರ ಬಗ್ಗೆ ಪುನೀತ್ ಸದಾ ನಮ್ಮೊಡನೆ ನೆನೆಯುತ್ತಿದ್ದರು ಎಂದರು.

ಸಭೆಯಲ್ಲಿ ಜನಾರ್ಧನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ
ಬುಡಾ ಅಧ್ಯಕ್ಷ ಪಿ.ಪಾಲಣ್ಣ, ವಿಮ್ಸ್ ಮಾಜಿ ನಿರ್ದೇಶಕ ಡಾ.ದೇವಾನಂದ್, ಪಾಲಿಕೆ ಸದಸ್ಯ ಗೋವಿಂದರಾಜುಲು, ಬಿಜೆಪಿ ಮುಖಂಡರಾದ ಉಜ್ವಲ ಮೊದಲಾದವರು ಇದ್ದರು.
ಶಾಲೆಯ ಶಿಕ್ಷಕ ಸೋಮನಾಥ ಪ್ರಾರ್ಥನೆ, ಸಂಜಯ ಬೆಟಗೇರಿ ಅವರಿಂದ ಕಾರ್ಯಕ್ರಮ ನಿರೂಪಣೆ ನಡೆಯಿತು.
ಇದೇ ಸಂದರ್ಭದಲ್ಲಿ ವೃದ್ದರಿಗೆ ಉಚಿತವಾಗಿ ಬಟ್ಟಗಳ ದಾನ‌ ಮಾಡಲಾಯಿತು.