
ಸೇಡಂ, ಎ,17: ಸೇಡಂ ವಿಧಾನಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಮಾಜಿ ಸಚಿವ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಡಾ. ಶರಣಪ್ರಕಾಶ್ ಪಾಟೀಲ್ ಊಡಗಿ ಅವರು ಅಪಾರ ಬೆಂಬಲಿಗರೊಂದಿಗೆ ಇಂದು ಮಧ್ಯಾಹ್ನ ಚುನಾವಣೆ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಸವಣ್ಣನವರಿಗೆ ವಿಶೇಷ ಪೂಜೆ ಸಲ್ಲಿಸಿ ಸುಮಾರು ಕಾರ್ಯಕರ್ತರೊಂದಿಗೆ ವಾದ್ಯ ಮೇಳ ಜೊತೆಗೆ ಬ್ರಹತ್ ಮೆರವಣಿಗೆ ಮುಖಾಂತರ ಚುನಾವಣೆ ಕಛೇರಿವರಿಗೆ ತೆರಳಿದರು. ಈ ವೇಳೆಯಲ್ಲಿ ಮಾಜಿ ಸಚಿವರ ಸಹೋದರ ಬಸವರಾಜ್ ಪಾಟೀಲ್ ಊಡಗಿ, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶಿವಶರಣ ರೆಡ್ಡಿ ಪಾಟೀಲ್, ರವೀಂದ್ರ ನಂದೀಗಾಮ್ ಮಾಜಿ ಅಧ್ಯಕ್ಷ ನಾಗೇಶ್ವರರಾವ್ ಮಾಲಿ ಪಾಟೀಲ್, ಕಾಂಗ್ರೆಸ್ ಪ್ರಚಾರ ಸಮಿತಿ ತಾಲೂಕ ಅಧ್ಯಕ್ಷ ಸತೀಶ್ ರೆಡ್ಡಿ ಪಾಟೀಲ್ ರಂಜೋಳಿ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಮಹಾಂತಪ್ಪ ಸಂಗಾವಿ, ಜಗನ್ನಾಥ್ ಚಿಂತಪಳ್ಳಿ, ರಾಜಶೇಖರ್ ಪುರಾಣಿ ಮಳಖೇಡ, ದುಳಪ್ಪಾ ದೊಡ್ಮನಿ, ಗಪುರಾ ದಪೇದಾರ್, ಜೈ ಭೀಮ್ ಊಡಗಿ,ಯೂತ್ ಘಟಕದ ಅಧ್ಯಕ್ಷ ಭೀಮಶಂಕರ್ ಕೊಳ್ಳಿ, ಸುರೇಶ್ ಪಾಟೀಲ್ ಊಡಗಿ, ಸತ್ತರ್ ನಾಡೆಪಲ್ಲಿ, ವಿಲಾಸ್ ಗೌತಮ್, ಅಂಬರೀಶ್ ಎಂ ಗುಡಿ, ಸಂತೋಷ್ ಪಾಟೀಲ್ ದುದನಿ, ರವಿ ಸಾವು ತುಂಬಾಕೆ, ಶಂಭುಲಿಂಗ ರೆಡ್ಡಿ ಕೊಡ್ಲಾ, ಬಸವಂತರಾವ್ ಮಾಲಿ ಪಾಟೀಲ್ ಊಡಗಿ, ವಿನೋದ್ ಊಡಗಿ, ನಾಗೇಂದ್ರಪ್ಪ ಲಿಂಗಪಲ್ಲಿ, ಸಂತೋಷ್ ಕುಲಕರ್ಣಿ, ಹಾಜಿ ನಾಡೇಪಲ್ಲಿ, ನಾಗಕುಮಾರ ಎಳ್ಳಿ , ರುದ್ರಪ್ಪ ಪಿಲ್ಲಿ, ನೀಲಕಂಠ ಹಂಗನಳ್ಳಿ, ದೇವು ದೊರೆ, ಸೇರಿದಂತೆ ಸಾವಿರಾರು ಕಾರ್ಯಕರ್ತ ನಾಮಪತ್ರ ಸಲ್ಲಿಕೆಗೆ ಸಾಕ್ಷಿಯಾದರು.
ಸೇಡಂ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ 30ರಿಂದ 40 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ನಾಮಪತ್ರ ಸಲ್ಲಿಕೆಯಲ್ಲಿ ತಾಲೂಕಿನಾದ್ಯಂತ ಕಾರ್ಯಕರ್ತರು ಪಾಲ್ಗೊಂಡಿರುವುದು. ಸಂತೋಷ ತಂದಿದೆ.
ನಾಗೇಶ್ವರರಾವ್ ಮಾಲಿ ಪಾಟೀಲ್
ಮಾಜಿ ಅಧ್ಯಕ್ಷರು
ಬ್ಲಾಕ್ ಕಾಂಗ್ರೆಸ್ ಸಮಿತಿ ಸೇಡಂ
ಸೇಡಂನ ಈ ಚುನಾವಣೆ ಮಹತ್ವದ್ದಾಗಿದೆ, ಸೇಡಂನ ಸ್ವಾಭಿಮಾನ, ಅಭಿವೃದ್ಧಿಗೆ ಪಣತೊಟ್ಟು ಡಾ. ಶರಣಪ್ರಕಾಶ್ ಪಾಟೀಲರೇ ಸೇಡಂ ತಾಲ್ಲೂಕಿನ ಕಾಂಗ್ರೆಸ್ ಅಭ್ಯರ್ಥಿ ಅಲ್ಲಾ ಪ್ರತಿಯೊಬ್ಬರು ಡಾ. ಶರಣಪ್ರಕಾಶ್ ಪಾಟೀಲರೇ ಅಭ್ಯರ್ಥಿಯೆಂದು ತಿಳಿದು ಮತ ಚಲಾಯಿಸಿ ಬೃಹತ್ ಅಂತರದಿಂದ ಗೆಲುವು ಸಾಧಿಸಬೇಕಿದೆ.
ಡಾ.ಶರಣಪ್ರಕಾಶ್ ಪಾಟೀಲ್ ಊಡಗಿ
ಮಾಜಿ ಸಚಿವ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರು