ಅಪಾರ ಬೆಂಬಲಿಗರೊಂದಿಗೆ ಜನಾರ್ಧನ ರೆಡ್ಡಿ ನಾಮಪತ್ರ ಸಲ್ಲಿಕೆ


ಸಂಜೆವಾಣಿ ವಾರ್ತೆ
ಗಂಗಾವತಿ:ಎ,18- ಕಲ್ಯಾಣ ರಾಜ್ಯ ಪಗತಿ ಪಕ್ಷದ ಸಂಸ್ಥಾಪಕ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗಾಲಿ ಜನಾರ್ಧನ ರೆಡ್ಡಿ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಆಗಮಿಸಿ ಇಂದು ನಾಮಪತ್ರ ಸಲ್ಲಿಸಿದರು.
ಬೆಳಿಗ್ಗೆ ಗಾಲಿ ಜನಾರ್ದನ ರೆಡ್ಡಿ,  ಪತ್ನಿ ಲಕ್ಷ್ಮೀ ಅರುಣಾ, ಮಗಳು ಬೃಹ್ಮಿಣಿ, ಅಳಿಯ ರಾಜೀವ್ ರೆಡ್ಡಿ ಸೇರಿದಂತೆ ಕುಟುಂಬಸ್ಥರು ನಗರದ ಚೆನ್ನಬಸವ ತಾತನ ಮಠ, ದುರ್ಗಮ್ಮ ದೇವಿ ದೇವಸ್ಥಾನ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಕರ್ನೂಲು ಬಾಬ ದರ್ಗಾಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ನಗರದ ಕನಕಗಿರಿ ರಸ್ತೆಯಲ್ಲಿರುವ ಚನ್ನಬಸವ ಸ್ವಾಮಿ ಕ್ರೀಡಾಂಗಣದಿಂದ ತೆರಳಿದ ರಡ್ಡಿ ಸಿಬಿಎಸ್ ವೃತ್ತ, ಮಹಾವೀರ ವೃತ್ತ, ಗಾಂಧಿ ವೃತ್ತ, ಬಸವಣ್ಣ ವೃತ್ತ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಶ್ರೀಕೃಷ್ಣದೇವರಾಯ ವೃತ್ತದ ಮೂಲಕ ತಹಶೀಲ್ ಕಛೇರಿಯವರೆಗೆ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ತರೆಳಿ ಚುನಾವಣಾಧಿಕಾರಿ ಬಸವಣೆಪ್ಪ ಕಲಶೇಟ್ಟಿಯವರಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಮನೋಹರಗೌಡ ಹೇರೂರು, ನಗರಸಭೆ ಸದಸ್ಯರಾದ ಯಮನೂರ ಚೌಡ್ಕಿ, ಅಜೆಯ್ ಬಿಚ್ಚಾಲಿ, ಉಸ್ಮಾನ್ ಬಿ, ನಗರ ಘಟಕ ಅಧ್ಯಕ್ಷ ವಿರೇಶ ಬಲ್ಕುಂದಿ, ಗ್ರಾಮೀಣ ಘಟಕ ಅಧ್ಯಕ್ಷ ದುರುಗಪ್ಪ ಆಗೋಲಿ, ಮುಖಂಡರಾದ ದುರುಗಪ್ಪ, ಸೈಯದ್ ಅಲಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.