ಅಪಾರ್ಟ್ ಮೆಂಟ್ ಸೀಲ್ ಡೌನ್ ಇಲ್ಲ

ಬೆಂಗಳೂರು, ಡಿ.31- ರೂಪಾಂತರ ಕೊರೋನಾ ಸೋಂಕು ಸಂಬಂಧ ಅಪಾರ್ಟ್ ಮೆಂಟ್ ಗಳನ್ನು ಸೀಲ್ ಡೌನ್ ಮಾಡುವುದಿಲ್ಲ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಕೆಯಿಂದ ಬ್ರಿಟನ್ ಆಗಮಿಸಿದವರ ಪೈಕಿ ಕೊರೋನಾ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಸಂಪರ್ಕದಲ್ಲಿದ್ದ 33 ಮಂದಿ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಅಪಾರ್ಟ್ ಮೆಂಟ್ ಅನ್ನು ಸೀಲ್ ಡೌನ್ ಮಾಡಲಾಗಿತ್ತು. ಇದರಂತೆ ಇನ್ನುಳಿದ ಯಾವುದೇ ಅಪಾರ್ಟ್ ಮೆಂಟ್’ಗಳನ್ನು ಸೀಲ್ ಡೌನ್ ಮಾಡುವುದಿಲ್ಲ ಎಂದರು‌.

ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ 33 ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.ಆದರೆ, ಸಾಕಷ್ಟು ಜನರಿದ್ದರಿಂದ ಹಾಗೂ ಅವರಲ್ಲಿ ಬಹುತೇಕ ಜನರು ಹೋಟೆಲ್ ಗಳಲ್ಲಿ ಕ್ವಾರಂಟೈನ್ ಗೊಳಗಾಗಲು ನಿರಾಕರಿಸಿದ್ದರು.

ನಮಗೆ ಬೇರೆ ದಾರಿ ಇಲ್ಲದೆ ಅಪಾರ್ಟ್ ಮೆಂಟ್ ಗಳನ್ನು ಸೀಲ್ ಡೌನ್ ಮಾಡಬೇಕಾಯಿತು. ಇತರೆ ಯಾರಿಗೆ ಕೊರೋನಾ ಪಾಸಿಟಿವ್ ಬಂದರೂ ಕೂಡ ಅಪಾರ್ಟ್ ಮೆಂಟ್ ಗಳನ್ನು ಸೀಲ್ ಡೌನ್ ಮಾಡುವುದಿಲ್ಲ ಎಂದು ವಿವರಿಸಿದರು.

ಈಗಾಗಲೇ ಎಲ್ಲಾ ವಿಭಾಗದಲ್ಲೂ ಮತ್ತೆ ಹೋಟೆಲ್ ಹಾಗೂ ಇತರೆ ಪ್ರದೇಶಗಳಲ್ಲಿ ಕೊರೋನಾ ಆರೈಕೆ ಕೇಂದ್ರಗಳನ್ನು ಆರಂಭಿಸಲು ಬಿಬಿಎಂಪಿ ಕಾರ್ಯ ಆರಂಭಿಸಿದೆ. ಸೀಲ್ ಡೌನ್ ಮಾಡಿರುವ ಅಪಾರ್ಟ್ ಮೆಂಟ್ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಅಲ್ಲಿನ ಚಲನವಲನಗಳ ಮೇಲೆ ತಂಡವೊಂದು ಗಮನ ಇಡಲಿದೆ ಎಂದರು.