ಅಪಾರ್ಟ್‌ಮೆಂಟ್ ಕುಸಿದು 8 ಮಂದಿ ಸಾವು!

ಬ್ರೆಜಿಲ್,ಜು,೮- ಬ್ರೆಜಿಲ್‌ನ ಪೆರ್ನಾಂಬುಕೊ ರಾಜ್ಯದ ರೆಸಿಪ್‌ನಲ್ಲಿ ಕಟ್ಟಡ ಕುಸಿತದಿಂದ ೮ ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈಶಾನ್ಯ ಬ್ರೆಜಿಲ್‌ನ ಪೆರ್ನಾಂಬುಕಾ ರಾಜ್ಯದ ರೆಸಿಫೆ ಪ್ರದೇಶದಲ್ಲಿ ಈ ದುರ್ಘಟನೆ ಘಟನೆ ಸಂಭವಿಸಿದೆ .
ಈ ಘಟನೆಯಲ್ಲಿ ೮ ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಐವರು ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದೆ.
ಕಟ್ಟಡ ಕುಸಿತದ ಮಾಹಿತಿ ಪಡೆದ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಕ್ಷೀಪ್ರ ಗತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಅವಶೇಷಗಳಡಿಯಿಂದ ನಾಲ್ವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಘಟನೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ, ಬೆಳಗಿನ ಜಾವ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೆಸೆಫ್ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಜಾಗೃತರಾಗಬೇಕು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅದಕ್ಕೂ ಮುನ್ನ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಪೆರ್ನಾಂಬುಕೊ ಗವರ್ನರ್ ರಾಕೆಲ್ ಲೈರಾ ಘೋಷಿಸಿದ್ದಾರೆ.