ಅಪಾಯ ಒಡ್ದುತ್ತಿರುವ ವಿದ್ಯುತ್ ಕಂಬ ಬದಲಿಸಲು ಆಗ್ರಹ.


ಸಂಜೆವಾಣಿ ವಾರ್ತೆ
ಸಿರಿಗೇರಿ ಏ.30. ಗ್ರಾಮದ ಆಚಾರಿ ಕಾಲೋನಿ ಹತ್ತಿರ ಇರುವ ವಿದ್ಯುತ್ ಕಂಬ ಒಂದು ಶಿಥಲಾವಸ್ಥೆಯಲ್ಲಿ ಇದ್ದು, ಕಂಬದ ಮಧ್ಯದಲ್ಲಿ ಬಿರುಕು ಬಿಟ್ಟು ಕಬ್ಬಿಣದ ರಾಡು ಹೊರಗೆ ಕಾಣುತ್ತಿದೆ. ಯಾವಾಗ ಮುರಿದು ಬೀಳುವುದು ಎನ್ನುವ ಸ್ಥಿತಿಯಲ್ಲಿರುವ ಈ ಕಂಬವು ಜೋರಾಗಿ ಗಾಳಿ ಬೀಸಿದಾಗ ಬೀಳುವ ಭಯದ ಆತಂಕವನ್ನು ಇಲ್ಲಿನ ನಿವಾಸಿಗಳು ಎದುರಿಸುತ್ತಿದ್ದಾರೆ. ಕಂಬ ಮುರಿದು ಬಿದ್ದರೆ ಅದರ ಲೈನ್ ಪಕ್ಕದ ಮನೆಗಳ ಮೇಲೆ ಬಿದ್ದು ಅವಘಡ ಸಂಭವಿಸುವ ಮೊದಲೇ ಎಚ್ಚೆತ್ತುಕೊಂಡು ಸಂಬಂಧಿಸಿದ ಇಲಾಖೆಯವರು ಕೂಡಲೇ ಈ ಕಂಬವನ್ನು ಬದಲಿಸಬೇಕೆಂದು ಇಲ್ಲಿನ ನಿವಾಸಿಗಳು ಆಗ್ರಹಿಸುತ್ತಿದ್ದಾರೆ. ಇಲ್ಲಿನ ನಿವಾಸಿಗಳು ಮಾಹಿತಿ ನೀಡಿದ ನಂತರ ಈ ಪ್ರದೇಶದ ಗ್ರಾಮ ಪಂಚಾಯತಿ ಸದಸ್ಯರ ಮಗ ಲಕ್ಷ್ಮಣ ಭಂಡಾರಿ ಇವರು ವಿದ್ಯುತ್ ಇಲಾಖೆಯ ಲೈನ್ ಮ್ಯಾನ್ ಗಳನ್ನು ಕರೆತಂದು ಕಂಬದ ಸ್ಥಿತಿಯನ್ನು ತೋರಿಸಿ ಅದರ ಫೋಟೋವನ್ನು ತೆಗೆದು ಮೇಲಾಧಿಕಾರಿಗಳ ವಾಟ್ಸಾಪ್ ಗೆ ಮೆಸೇಜ್ ಕಳಿಸಿ ಕೂಡಲೇ ಕಂಬವನ್ನು ಬದಲಿಸುವ ಕೆಲಸ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ. ಕಂಬ ಮುರಿದು ಬಿದ್ದು  ಅವಘಡ ನಡೆಯುವ ಮೊದಲೇ ಕಾರ್ಯ ಪ್ರವೃತ್ತರಾಗಬೇಕೆಂದು ಇಲ್ಲಿನ ಆಚಾರಿ ಕಾಲೋನಿ ನಿವಾಸಿಗಳು ಆಗ್ರಹಪಡಿಸಿದ್ದಾರೆ.