ಅಪಾಯದ ಸುಳಿಯಲ್ಲಿ ರಾಜ್ಯ


ಬೆಂಗಳೂರು,ಜ.೧೫- ರಾಜ್ಯದ ವಿವಿಧ ಜಿಲ್ಲೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ದಿನೇದಿನೇ ಹೆಚ್ಚಾಗುತ್ತಿರುವುದು ಸೋಂಕಿನ ಅಪಾಯದ ಸುಳಿಗೆ ರಾಜ್ಯ ಸಿಲುಕುವಂತಾಗಿದೆ.
ಸೋಂಕು ಹೆಚ್ಚುತ್ತಿರುವ ವೇಗವನ್ನು ಗಮನಿಸಿದರೆ ಸಮುದಾಯಕ್ಕೆ ಹರಡಿದೆಯೇ ಎನ್ನುವ ಅನುಮಾನ ಕಾಡತೊಡಗಿದೆ. ಜನವರಿ ಅಂತ್ಯದ ವೇಳೆಗೆ ರಾಜ್ಯದಲ್ಲಿ ಸೋಂಕು ದುಪ್ಪಟ್ಟು ಆಗುವ ಸಾಧ್ಯತೆಗಳಿವೆ. ಹೀಗಾಗಿ ಮುಂದಿನ ೩೦ ದಿನಗಳ ಕಾಲ ನಿರ್ಣಾಯಕವಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.೧೩ ರಷ್ಟು ಇದೆ. ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.೨೧ ರಷ್ಟುರ ದಾಟಿದೆ ಇದರಿಂದಾಗಿ ಕರ್ನಾಟಕ ಅಪಾಯಕ್ಕೆ ಸಿಲುಕುವಂತಾಗಿದೆ.

ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಬೆಂಗಳೂರಿನಲ್ಲೇ ಅತ್ಯಧಿಕವಾಗಿದೆ . ಸಕ್ರಿಯ ಪ್ರಕರಣಗಳ ಸಂಖ್ಯೆ ೧,೦೯ ಲಕ್ಷ ಇದ್ದು ಇಂದು ಮತ್ತಷ್ಟು ಹೆಚ್ಚಲಿದೆ. ಇನ್ನು ರಾಜ್ಯದಲ್ಲಿ ೧.೪೧ ಲಕ್ಷ ಮಂದಿಯಲ್ಲಿ ಸಕ್ರಿಯ ಪ್ರಕರಣ ಇದೆ.

ರಾಜ್ಯದಲ್ಲಿ ಒಂದೂವರೆ ಲಕ್ಷದಷ್ಟು ಸಕ್ರಿಯ ಪ್ರಕರಣಗಳು ಇದ್ದು ಜನವರಿ ಅಂತ್ಯದೊಳಗೆ ಮೂರರಿಂದ ಐದು ಲಕ್ಷಕ್ಕೆ ಈ ಪ್ರಮಾಣ ಏರಿಕೆಯಾಗಲಿದೆ ಎಂದು ತಜ್ಞರು ಹೇಳಿರುವುದು ರಾಜ್ಯವನ್ನು ಮತ್ತಷ್ಟು ಆತಂಕಕ್ಕೆ ಸಿಗುವಂತೆ ಮಾಡಿದೆ.

ಸದ್ಯ ಬೆಂಗಳೂರಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಸಕ್ರಿಯ ಪ್ರಕರಣಗಳು ಇವೆ ಅದನ್ನು ಹೊರತುಪಡಿಸಿದರೆ ಬಳ್ಳಾರಿ ,ಬೆಳಗಾವಿ, ದಕ್ಷಿಣ ಕನ್ನಡ, ಹಾಸನ, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ೧೦೦೦ ಸಾವಿರದಿಂದ ೪ ಸಾವಿರದವರೆಗೆ ಸಕ್ರಿಯ ಪ್ರಕರಣಗಳು ಇವೆ ಇದು ತಿಂಗಳ ಅಂತ್ಯದ ವೇಳೆಗೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ

ವೈದ್ಯಕೀಯ ವ್ಯವಸ್ಥೆ ಮೇಲೆ ಪರಿಣಾಮ:

ಸೋಂಕು ಹೆಚ್ಚುತ್ತಿರುವ ಬೇಗ ಇದೇ ರೀತಿ ಮುಂದುವರಿದರೆ ಜನವರಿ ಅಂತ್ಯದ ವೇಳೆಗೆ ಗರಿಷ್ಠ ಪ್ರಮಾಣ ತಲುಪಿ ವೈದ್ಯಕೀಯ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಕೂಡ ಅವರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಸೋಂಕು ಸಂಖ್ಯೆ ನಿತ್ಯ ಹೆಚ್ಚಳವಾಗುತ್ತಿದ್ದು ಶೇಕಡ ೯೦ರಷ್ಟು ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಆದರೂ ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾದಷ್ಟು ಸಮಸ್ಯೆಗೆ ಸಿಲುಕಿ ಬೇಕಾಗಬಹುದಾಗಿದೆ.

ಎರಡನೇ ವಾರಾಂತ್ಯದ ಕರ್ಫ್ಯೂ

ಸೋಂಕು ತಡೆಗೆ ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದ್ದರೂ ಕೂಡ ಸೋಂಕು ರಾಕೆಟ್ ವೇಗದಲ್ಲಿ ಹೆಚ್ಚುತ್ತಿದೆ ಎರಡನೇ ವಾರಾಂತ್ಯದ ಕರ್ಫ್ಯೂ ನಿನ್ನೆ ರಾತ್ರಿಯಿಂದ ಜಾರಿದ್ದು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಮಾಡಲಾಗಿದೆ.

ಹಾಲು ಹಣ್ಣು ತರಕಾರಿ ಸೇವೆಗೆ ಯಾವುದೇ ತೊಂದರೆ ಇಲ್ಲ ರೈಲು,ಬಸ್ಸು ಸೇವೆ ನಿರಾತಂಕವಾಗಿ ಮುಂದುವರೆದಿದೆ. ಅಗತ್ಯ ಸೇವೆಗಳಿಗೆ ತೆರಳುವ ಮಂದಿಗೆ ಬಿಎಂಟಿಸಿ ಬಸ್ ಕೂಡ ಲಭ್ಯವಿದೆ

ವಾರಂತ್ಯದ ಕರ್ಫ್ಯೂ ಯಾವುದೇ ಉಪಯೋಗಕ್ಕೆ ಬರುತ್ತಿಲ್ಲ ಬದಲಾಗಿ ಸೋಂಕು ಸಂಖ್ಯೆ ಮತ್ತಷ್ಟು ಹೆಚ್ಚುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಕಾರ ಕೈಗೊಳ್ಳುವ ನಿರ್ಧಾರ ತೀವ್ರ ಕುತೂಹಲ ಕೆರಳಿಸಿದೆ.

೩೦ ಸಾವಿರಕ್ಕೂ ಅಧಿಕ ಸೋಂಕು

ಈ ನಡುವೆ ರಾಜ್ಯದಲ್ಲಿಂದು ೩೦ ಸಾವಿರಕ್ಕೂ ಹೆಚ್ಚು ಮಂದಿ ಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಅದರಲ್ಲಿ ಬೆಂಗಳೂರು ಒಂದರಲ್ಲೇ ೨೨ ಸಾವಿರಕ್ಕೂ ಹೆಚ್ಚು ಮಂದಿ ಎಲ್ಲಿರುವುದು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.