ಅಪಾಯದ ಅಂಚಿನಲ್ಲಿ ಆಚೇನಹಳ್ಳಿ ಸೇತುವೆ

ಮಧುಗಿರಿ, ನ. ೧೨- ತಾಲ್ಲೂಕಿನ ಕಸಬಾ ಹೋಬಳಿ ಆಚೇನಹಳ್ಳಿಯ ಮುಖ್ಯ ಸೇತುವೆಯು ಅಪಾಯದ ಅಂಚಿನಲ್ಲಿದೆ.
ಆಚೇನಹಳ್ಳಿ ಮುಖ್ಯ ಸೇತುವೆ ಮೇಲೆ ಪ್ರತಿನಿತ್ಯ ಜನ ಹಾದು ಹೋಗಬೇಕಾಗಿದೆ. ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳು ಚಲಿಸುತ್ತವೆ. ಆದ್ದರಿಂದ ಕೂಡಲೇ ಶಾಸಕ ಎಂ.ವಿ. ವೀರಭದ್ರಯ್ಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಅಪಾಯದ ಅಂಚಿಗೆ ತಲುಪಿರುವ ಸೇತುವೆಯನ್ನು ದುರಸ್ಥಿಗೊಳಿಸಬೇಕು ಎಂದು ವಕೀಲರಾದ ಜಿ. ರಂಗನಾಥ್ ಒತ್ತಾಯಿಸಿದ್ದಾರೆ.
ಸಾಧ್ಯವಾದಷ್ಟು ಬೇಗ ಈ ಸೇತುವೆ ದುರಸ್ಥಿಗೆ ಮುಂದಾಗಬೇಕು. ಸೇತುವೆ ದುರಸ್ಥಿಗೆ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರದೆ ಆದಷ್ಟು ಶೀಘ್ರ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.