ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಪಚ್ಚೇರ ಹಳ್ಳ

ದೇವದುರ್ಗ.ನ.೨೦- ಕಳೆದೊಂದು ವರ್ಷದಿಂದ ಪಚ್ಚೇರ ಹಳ್ಳ ಕುಸಿದು ಪ್ರಾಣ ಬಲಿಗಾಗಿ ಬಾಯಿ ತೆರೆದಿದ್ದರೂ ಸಂಬಂಧಿಸಿದವರ ನಿರ್ಲಕ್ಷ್ಯ ಮುಂದುವರೆದಿದೆ.
ದೇವದುರ್ಗ ಪಟ್ಟಣದಿಂದ ಐತಿಹಾಸಿಕ ಆಣೆಮಲ್ಲೇಶ್ವರ ದೇವಸ್ಥಾನಕ್ಕೆ ಸಾರಿಗೆ ಸಂಪರ್ಕ ಕಲ್ಪಸಿಕೊಡುವ ಏಕೈಕ ರಸ್ತೆ ಮಧ್ಯೆದಲ್ಲಿ ಇರುವ ಪಚ್ಚೇರ ಹಳ್ಳ ನಗರಗುಂಡ ಹಾಗೂ ಕೊಣಚಪ್ಪಳಿ ಗ್ರಾಮ ಮಧ್ಯೆ ಕುಸಿದು ಬಿದ್ದಿದೆ. ಹೊದ ತಿಂಗಳು ಸುರಿದ ಮಳೆಗೆ ಮುಕ್ಕಾಲು ಭಾಗ ಸೇತುವೆ ಕುಸಿದಿದ್ದು ಗ್ರಾಮಸ್ಥರೇ ಮರಂ ಹಾಕಿ ತಾತ್ಕಾಲಿಕ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ದೇವದುರ್ಗ ಪಟ್ಟಣ ಸೇರಿ ಇದರ ಸುತ್ತಮುತ್ತಲಿನ ಹತ್ತಾರೂ ಹಳ್ಳಿಗಳ ಹಾಗೂ ಹೊಲಗಳ ರಾಜ ಕಾಲುವೆಗಳ ನೀರು ಈ ಹಳ್ಳದ ಮೂಲಕವೇ ಕೃಷ್ಣ ನದಿ ಸೇರುತ್ತದೆ. ಹಳ್ಳ ವರ್ಷದ ಹನ್ನೆರಡು ತಿಂಗಳು ತುಂಬಿ ಹರಿಯುತ್ತಿರುವದರಿಂದ ಇಲ್ಲಿ ತೇವಾಂಶ ಹೆಚ್ಚಿದ್ದು ದಿನ ಕಳೆದಂತೆ ಸೇತುವೆ ಕಿರಿದಾಗುತ್ತಿದೆ.
ಸಂಚಾರ ಸಂಕಟ:ಪಚ್ಚೇರ ಹಳ್ಳದ ಸೇತುವೆ ಕುಸಿತ ನಿರಂತರವಾಗಿದ್ದು ದಿನ ಕಳೆದಂತೆ ಕಿರಿದಾಗುತ್ತಿದೆ. ದೇವಸ್ಥಾನಕ್ಕೆ ಹೋಗುವ ಭಕ್ತರು ಸೇರಿ ಕೊಣಚಪ್ಪಳಿ ಗ್ರಾಮಸ್ಥರಿಗೆ ಸಂಚಾರ ಸಂಕಟ ಎದುರಾಗುವ ಕಾಲ ಸನ್ನಿತವಾಗಿದೆ. ಸೇತುವೆ ಮೇಲ್ದರ್ಜೆಗೆ ಏರಿಸುವಂತೆ ಹಲವಾರು ಬಾರಿ ಗ್ರಾಮಸ್ಥರು ಚುನಾಹಿತ ಪ್ರತಿ ನಿಧಿಗಳನ್ನು ಒಳಗೊಂಡು, ದೊಂಡಂಬಳ್ಳಿ ಗ್ರಾಮ ಪಂಚಾಯತಿ ಸೇರಿ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದರು ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿರುವದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕೋಟ್
ಪಚ್ಚೇರ ಹಳ್ಳ ವರ್ಷದಿಂದ ಕುಸಿದ್ದು ಬಿದ್ದಿದೆ. ಹಿಂದೆ ಗ್ರಾಮಸ್ಥರೆ ಮಣ್ಣು ಹಾಕಿ ತಾತ್ಕಾಲಿಕ ಸಂಚಾರಕ್ಕೆ ಅನುಕೂಲ ಮಾಡಿಕೊಂಡಿದ್ದಾರೆ. ಆದರೆ ಹಳ್ಳ ನಿರಂತರ ಹರಿಯುತ್ತಿರುವದರಿಂದ ತೇವಾಂಶ ಹೆಚ್ಚಾಗಿ ದಿನ ಕಳೆದಂತೆ ಸೇತುವೆ ಕಿರಿದಾಗುತ್ತಿದೆ. ದೊಂಡಂಬಳಿ ಗ್ರಾ.ಪ. ಆಡಳಿತ ಅಧಿಕಾರಿ ಹಾಗೂ ಲೋಕೋಪಯೋಗಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನೆ ಆಗಿಲ್ಲ ಶಾಸಕ ಕೆ.ಶಿವನಗೌಡ ನಾಯಕರು ಇತ್ತ ಗಮನ ಹರಿಸಿ ಆಣೆಮಲ್ಲೇಶ್ವರ ದೇವಸ್ಥಾನ ಭಕ್ತರಿಗೆ ಸುಗಮ ಸಂಚಾರ ಕಲ್ಪಿಸಿಕೊಡಬೇಕು.
ಉಮಾಪತಿ ಪಾಟೀಲ್
ನಗರಗುಂಡ