
ಶಹಾಪುರ:ಜು.25:ಆಧುನಿಕ ತಂತ್ರಜ್ಞಾನದ ಕೃತಕ ವ್ಯಾಮೋಹಕ್ಕೆ ಅಂಟಿಕೊಂಡ ಜನ, ಇಂದು ದುಸ್ತರ ಸ್ಥಿತಿಯಲ್ಲಿದ್ದಾರೆ. ಮೋಬೈಲ್ ಟಿವಿಯಂತಹ ನೂತನ ಸಾಧನಗಳ ಬಳಕೆಯಿಂದ ಇಂದು ಭಾಷಾಭಿಮಾನ ವಿನಾಶವಾಗುತ್ತಿದೆ.ಎಂದು ಸಾಹಿತಿ ಕುಂ, ವೀರಭದ್ರಪ್ಪನವರು ಕಳವಳ ವ್ಯಕ್ತಪಡಿಸಿದರು.
ಅವರು ತಾಲುಕಿನ ಸಗರ ಕಸಾಪ ವಲಯದಲ್ಲಿ ಹಮ್ಮಿಕೊಂಡ ತಾಲುಕಾ ಮಟ್ಟದ 3 ನೆಯ ಸಾಹಿತ್ಯ ಸಮ್ಮೆಳನ ಕಾರ್ಯಕ್ರಮದ ಸ್ವತಂತ್ರ್ಯ ಹೋರಾಟಗಾರ ದಿವಂಗತ ಅಚ್ಚಪ್ಪಗೌಡ ಸುಬೆದಾರವರ ವೇದಿಕೆಯಲ್ಲಿ, ರೈತ ಹೋರಾಟಗಾರ ಕಲಾವಿದರಾದ ದಿವಂಗತ ಮೈಲಾರಪ್ಪ ಸಗರವರ ಮಾಹಾದ್ವಾರದಲ್ಲಿ ನಡೆದ ಕಸಾಪ ಸಮ್ಮೇಳನಾ ಉಧ್ಘಾಟಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು,ಕನ್ನಡ ನಾಡು ನುಡಿಗಳು ನಮ್ಮ ಉಸಿರಾಗಿವೆ, ಇಂದು ನಮ್ಮ ಭಾಷೆಯನ್ನು ಮರೆತುಕೊಂಡು ಇಂಗ್ಲಿಷ ಮೋಹದಲ್ಲಿ ಜನರು ತೇಲಾಡುತ್ತಿದ್ದಾರೆ. ಇದರಿಂದ ನಮ್ಮ ನಾಡು ನುಡಿಗೆ ದಕ್ಕೆ ಬರುತ್ತದೆ. ಭಾಷಾಭಿಮಾನ ಬೇಳಸಿಕೊಂಡು, ಇಂಗ್ಲಿಷನ್ನು ತೈಜಿಸಿ, ನಿಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲೆ ಅಭ್ಯಾಸ ಮಾಡಿಸಿ ಎಂದು ಅವರು ಕರೆ ನಿಡಿದರು.ಸಗರದ 1ನೇಯ ಸತಮಾನದ ಬೊಮ್ಮಯ್ಯ ,ಏತಯ್ಯಮತ್ತು ಸ್ವತಂತ್ರ್ಯ ಹೋರಾಟಗಾರ ದಿ,ಅಚ್ಚಪ್ಪಗೌಡರ ಸ್ಮಾರಕ ನಿರ್ಮಿಸಿ ಸಗರನಾಡಿ ಹಿರಿಮೆಯನ್ನು ಶಾಶ್ವತವಾಗಿ ಉಳಿಸಿ. ಎಂದರಲ್ಲದೆ.ಕನ್ನಡ ಭಾಷಾ ನಿರಾಕರಿಸಿÀದವರು ರಾಜ್ಯದಿಂದ ಹೋರಗಡೆಗೆ ಹೋಗಿ ಎಂದು ತಿಳಿಸಿದರು,ಇಂದು ಆಂಗ್ಲ ಮಾಧ್ಯದಲ್ಲಿ ಅಭ್ಯಾಸ ಮಾಡಿದ ಮಾಹಾಶಾಯರು ತಮ್ಮ ಹೆತ್ತವರನ್ನು ವೃದ್ದಾಶ್ರಮಗಳಲ್ಲಿ ಬಿಟ್ಟು ಐಶಾರಾಮಿ ಜೀವನ ಸಾಗಿಸುತ್ತಿದ್ದಾರೆ, ಅಂದು ಕೇವಲ 8 ಸಾವಿರ ಇದ್ದ ವೃದ್ದಾಶ್ರಮಗಳು ಇಂದು ಇಪ್ಪತ್ತು ಸಾವಿರಕ್ಕೇರಿವೆ ಎಂದರು.ಕನ್ನಡ ಭಾಷಾ ಹಳ್ಳಿಯಲ್ಲಿ ಉಳಿದಿದೆ, ಇಂದು ನಗರ ಪಟ್ಟಣಗಳಲ್ಲಿ ಕನ್ನಡ ಭಾಷಾಭಿಮಾನ ಮರೆಯಾಗುತ್ತಿವೆ. ಕನ್ನಡಪರ ಸಂಘಟನೆಗಳು ಕನ್ನಸ ಭಾಷಾ ಕುರಿತು ಜಾಗ್ರತಿಗೆ ಮುಂದಾಗಬೇಕು ಎಂದು ತಿಳಿಸಿದರು,ಪೂಜ್ಯ ಷ,ಬ್ರ, ಮರುಳಮಾಹಾಂತ ಶಿವಾಚಾರ್ಯರು ಒಕ್ಕಲಿಗೇರ ಮಠ ಮತ್ತು ಷ,ಬ್ರ, ಸೋಮೇಶ್ವರ ಶಿವಾಚಾರ್ಯರು ನಾಗಠಾಣಾ ಮಠ ಸಗರ ಮತ್ತು ಹಜರತ್, ಸೈಯದ್ ಮೊಹಮ್ಮದ ಮುಜುಬುದ್ದಿನ ಸರ್ಮಸ್ಥ್ ಸಜ್ಜಾದೆ ನಸೀನ್ ರವರ ದಿವ್ಯ ಸಾನಿಧ್ಯದಲ್ಲಿ. ಸಣ್ಣ ಕೈಗಾರಿಕಾಸಾರ್ವಜನಿಕ ಉಧ್ಯಮಿಗಳ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರವರು ಅಧ್ಯಕ್ಷತೆ ವಹಿಸಿದ್ದರು. ಸಹ್ಯಾದ್ರಿ ಸ್ಮರಣ ಸಂಚಿಕೆಯನ್ನು ಸಚಿವ ದರ್ಶನಾಪುರವರು ಲೋಕಾರ್ಪಣೆ ಮಾಡಿದರು.ಡಾ,ದೇವಿಂದ್ರಪ್ಪ ಹಡಪದವರ ಕೃತಿ, ಕನ್ನಡ ನುಡಿಮುತ್ತುಗಳು. ಹಾಗೂ. ಡಾ,ನಾಗರಾಜ ದೊರೆ ರಚಿಸಿದ, ವಚನ ಭಾಷಾ ಕುರಿತು ಕೃತಿಗಳನ್ನು ಮತ್ತು ಹಸ್ತಪ್ತಿಗಳನ್ನು ದರ್ಶನಾಪುರವರು ಬಿಡುಗಡೆಗೊಳಿಸಿದರು. ಚಿತ್ರಕಲಾ ಪ್ರದರ್ಶನವನ್ನು ಖ್ಯಾತ ವೈಧ್ಯರಾದ ಡಾ, ಚಂದ್ರಶೇಖರ ಸುಭೇದಾರವರು ಉಧ್ಘಾಟಿಸಿದರು. ಕಸಾಪ ತಾಲುಕಾ ಸಮ್ಮೇಳನಾ ಸರ್ವಾಧ್ಯಕ್ಷರಾದ ಲಿಂಗಣ್ಣ ಪಡಶೇಟ್ಟಿಯವರು ಉಪಸ್ಥಿತರಿದ್ದರು. ಹಿರಿಯ ಮುಖಂಡರಾದ ಬಸನಗೌಡ ಸುಬೇದಾರ, ಜಿಲ್ಲಾ ಕಸಾಪ ಅಧ್ಯಕ್ಷರಾದ ಸಿದ್ದಪ್ಪ ಹೊಟ್ಟಿ, ಸಾಹಿತಿ ಸಿದ್ರಾಮ ಹೊನಕಲ್ ಮಾತನಾಡಿದರು.ಜಿ,ಪಂ, ಮಾಜಿ ಉಪಾಧ್ಯಕ್ಷರಾದ ನಾಗಣ್ಣಗೌಡ ಸುಬೇದಾರ ರಾಷ್ಟ್ರ ದ್ವಜಾರೋಹಣ ನೇರವೇರಿಸಿದರು,ತಿರುಪತಿ ಹತ್ತಿಕಟಗಿ ನಾಡ ದ್ವಜಾರೋಹಣ ಮಾಡಿದರು,ಕಸಾಪ ತಾಲುಕಾ ಅಧ್ಯಕ್ಷರಾದ ಡಾ,ರವಿಂದ್ರನಾಥ ಹೊಸಮನಿಯವರು ಕಸಾಪ ದ್ವಜಾರೋಹಣ ನೇರವೇರಿಸಿದರು.ನಿಕಟಪೂರ್ವ ಕಸಾಪ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೆಗುಂದಿ, ಶರಣಪ್ಪ ಸಲಾದಪುರ. ಚಂದಪ್ಪ ಸೇರಿ. ಮಾನಸಿಂಗ ಚೌವಾಣ್, ದೇವಿಂದ್ರ ಹೆಗಡೆ, ಅಯ್ಯಣ್ಣ ಕನ್ಯಾಕೊಳೂರ, ಬಿಇಓ ಶ್ರೀಮತಿ ಶಖಾ ಬಿಲಿಯನ್. ಡಾ,ಶರಣು ಗದ್ದುಗೆ, ಸಗರ ವಲಯ ಕಸಾಪ ಅಧ್ಯಕ್ಷರಾದ ಡಾ,ದೆವಿಂದ್ರಪ್ಪ ಹಡಪದ.ಸೇನಾನಿ ಯೋದ ದುರ್ಗಪ್ಪ ನಾಯಕ. ಸೇರಿದಂತೆ ಅನೇಕ ಗಣ್ಯರು ಹಿರಿಯರು ಸಾಹಿತಿಗಳು ಶಿಕ್ಷಕರು ಮಕ್ಕಳು ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು,ಉಪನ್ಯಾಷಕರಾದ ಶ್ರೀಮತಿ ಚಂದ್ರಕಲಾ ಗೂಗಲ್ ಶ್ರೀಮತಿ ಹಣಮಂತಿ ಗುತ್ತೆದಾರರು ಕಾರ್ಯಕ್ರಮ ನೀರೂಪಿಸಿದರು. ಅನೇಕ ಕಲಾ ತಂಡಗಳಿಂದ ನೃತ್ಯ ಗಾಯನಗಳು ಜರುಗಿದವು.ಸಗರ ಪ್ರಮುಖ ಬೀದಿಗಳಲ್ಲಿ ಸಮ್ಮೇಳನಾ ಸರ್ವಾಧ್ಯಕ್ಚರ ಭವ್ಯ ಮೇರವಣಿಗೆ ನಡೆಯಿತು.
ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿ ಇಂದು ಮನೆಯಲ್ಲೆ ಸಿಮೀತವಾಗಿದ್ದ ಮಹಿಳೆಯರಿಗೆ ವರದಾನ ನೀಡಿದೆ, ಇಂದು ಮಹಿಳೆ ಹೊರಗಿನ ಅನೇಕ ಪ್ರವಾಸ ತಾನಗಳನ್ನು ದೇಶದ ಸಂಸ್ಕøತಿಯನ್ನು ಕಾಣುವಂತಾಗಿದೆ, ನಾಡು ನುಡಿ ಕುರಿತು ಮಹಿಳೆಯರಿಗೆ ಜಾಗ್ರತಿ ಮೂಡಿ ಬರುತ್ತಿದೆ, ದೇಶದಲ್ಲಿ ಗ್ಯಾಂರಂಟಿ ಯೋಜನೆಗಳಿಂದ ವಿಧ್ಯುತ್ ಮತ್ತು ಸಂಚಾರವನ್ನು ಮಹಿಳೆಯರಿಗೆ ಉಚಿತವನ್ನಾಗಿಸಿದ್ದು ಶ್ಲಾಘನೀಯ ಸಂಗತಿಯಾಗಿದೆ, ಮಹಿಳೆಯರ ಕುರಿತು ಕಾಳಜಿ ಹೊತ್ತ ಸಿದ್ರಾಮಯ್ಯನವರ ಸರ್ಕಾರ ಅತ್ಯಂತ ಸರ್ವಶ್ರೇಷ್ಟವಾಗಿದೆ. ಪ್ರೀ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತಿದೆಎಂದು ಪ್ರತಿಪಕ್ಷಗಳ ಟೀಕೆಗೆ ಇಂದು ತೆರೆ ಎಳೆದಿದ್ದಾರೆ. ಇದೊಂದು ಮಾದರಿ ಆಡಳಿತ ಸರ್ಕಾರವಾಗಿದೆ.
ಸಾಹಿತಿ ಕುಂ, ವೀರಭದ್ರಪ್ಪ