ಅಪಾಯಕಾರಿ ವಿದ್ಯುತ್ ತಂತಿಗೆ ಜೋತುಬಿದ್ದ ಮರದ ಕೊಂಬೆಗಳು: ತೆರವಿಗೆ ಆಗ್ರಹ

ಕಲಬುರಗಿ,ಏ.28- ಅಪಾಯಕಾರಿ ವಿದ್ಯುತ ಕಂಬದ ತಂತಿಗೆ ಮರದ ಕೊಂಬೆಗಳು ಜೋತು ಬಿದ್ದಿದ್ದು, ಇವುಗಳನ್ನು ತೆರವು ಗೊಳಿಸಿ ಅಪಾಯವನ್ನು ತಡೆಯುವಂತೆ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘ ಒತ್ತಾಯಿಸಿದೆ.
ನಗರದ ಗಾಜಿಪೂರ ಅತ್ತರ್ ಕಂಪೌಂಡ್ ವೃತ್ತದ ಡಾ.ರಾಮಕಾಂತ ಕುಲಕರ್ಣಿ ಅವರ ನಿವಾಸದ ಬಳಿ ಈ ಅಪಾಯಕಾರಿ ಬೃಹತ ಮರದ ಕೊಂಬೆಗಳು ವಿದ್ಯುತ ಕಂಬಗಳ ತಂತಿಯ ಮೇಲೆ ಜೋತು ಬಿದ್ದಿದ್ದರೂ, ಇದನ್ನು ತೆರವುಗೊಳಿಸಲು ಜೇಸ್ಕಾಂ ಹಾಗೂ ಅರಣ್ಯ ಇಲಾಖೆ ಮುಂದಾಗದಿರುವುದಕ್ಕೆ ಸಂಘಟನೆಯ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಮತ್ತು ದತ್ತು ಎಚ್.ಭಾಸಗಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ವೃತ್ತದ ರಸ್ತೆ ಮಾರ್ಗವಾಗಿ ದಿನನಿತ್ಯ ಸಂಚರಿಸುವ ವಾಹನಗಳ ಸವಾರರಿಗೆ ಮತ್ತು ಪಾದಚಾರಿಗಳಿಗೆ ಆತಂಕ ಸೃಷ್ಠಿಸಿರುವ. ಈ ಅಪಾಯಕಾರಿ ಗಿಡ ಮತ್ತು ಕೊಂಬೆಗಳು ಯಾವುದೇ ಸಮಯದಲ್ಲಿ ಮಳೆ ಮತ್ತು ಗಾಳಿಗೆ ಬಿಳುವ ಸಂಭವವಿದೆ ಎಂದು ಅವರು ಹೇಳಿದ್ದಾರೆ.
ಇದೇ ಮಾರ್ಗದಲ್ಲಿನ ಹಳೆಯ ವಿದ್ಯುತ ಕಂಬವೋಂದನ್ನು ಬದಲಾಯಿಸಿ ಹೊಸ ಕಂಬವನ್ನು ಹಾಕುವಾಗ ಕಾಂಕ್ರಿಟ್ ಮತ್ತು ಸಿಮೆಂಟ್ ಬಳಸದೇ ಕೇವಲ ಮಣ್ಣು ಮತ್ತು ಕಲ್ಲುಗಳನ್ನು ಹಾಕಿ ಕಂಬನೆಟ್ಟು ಹೋಗಿದ್ದಾರೆ ಹೀಗಾಗಿ ಈ ಕಂಬವೂ ಮಳೆ ಮತ್ತು ಗಾಳಿಗೆ ಬೀಳುವ ಸಾಧ್ಯತೆ ಇದೆ ಎಂದು ಅವರು ಆರೋಪಿಸಿದ್ದಾರೆ.
ಜೆಸ್ಕಾಂ ಮತ್ತು ಅರಣ್ಯ ಇಲಾಖೆ ಇಲ್ಲಿನ ಅಪಾಯವನ್ನು ತಡೆಯಲು ಮುಂದಾಗದಿದ್ದಲ್ಲಿ ಏನಾದರೂ ಘಟನೆಗಳು ಸಂಭವಿಸಿದ್ದಲ್ಲಿ ಈ ಇಲಾಖೆಗಳೇ ನೇರ ಹೋಣೆಯಾಗಬೇಕಾಗುತ್ತವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.