ಅಪಾಯಕಾರಿ ರಸ್ತೆ ಭಾರತಕ್ಕೆ ೪ನೇ ಸ್ಥಾನ


ಜೊಹಾನ್ಸ್‌ಬರ್ಗ್, ಮಾ.೧೯- ಜಾಗತಿಕ ಮಟ್ಟದಲ್ಲಿ ಅಪಾಯಕಾರಿ ರಸ್ತೆಗಳಿರುವ ಪಟ್ಟಿಯಲ್ಲಿ ಭಾರತ ೪ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಕುರಿತು ಅಂತಾರಾಷ್ಟ್ರೀಯ ಚಾಲನಾ ಶಿಕ್ಷಣ ಕಂಪನಿ ಝಟೋಬಿ ನಡೆಸಿದ ಅಧ್ಯಯನದಿಂದ ಬಹಿರಂಗವಾಗಿದೆ.
ಈ ಚಾಲನಾ ಕಂಪನಿ ೫೬ ದೇಶಗಳ ಪಟ್ಟಿಂiiಲ್ಲಿ ಅಧ್ಯಯನ ನಡೆಸಿದೆ. ಅಪಾಯಕಾರಿ ರಸ್ತೆಗಳ ಪಟ್ಟಿಯಲ್ಲಿ ಥೈಲ್ಯಾಂಡ್‌ಗೆ ೨ನೇ ಸ್ಥಾನ ಹಾಗೂ ಅಮೆರಿಕ ೩ನೇಙ ಸ್ಥಾನ ಆಕ್ರಮಿಸಿಕೊಂಡಿದೆ.
ವಿಶ್ವದಲ್ಲೇ ಸುರಕ್ಷಿತ ರಸ್ತೆಗಳನ್ನು ಹೊಂದಿರುವ ರಾಷ್ಟ್ರಮಟ್ಟದಲ್ಲಿ ನಾರ್ವೆ ಪ್ರಮುಖ ಸ್ಥಾನದಲ್ಲಿದ್ದರೆ, ಸ್ವೀಡನ್ ೩ನೇ ಸ್ಥಾನದಲ್ಲಿದೆ.
ಉದಯರವಿ ನಾಡು ಜಪಾನ್ ಅತ್ಯಂತ ಸುರಕ್ಷಿತ ರಸ್ತೆಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ೨ನೇ ಸ್ಥಾನ ಪಡೆದುಕೊಂಡಿದೆ ಎಂದು ಝಟೊಬಿ ತಿಳಿಸಿದೆ.
ಪ್ರತಿದೇಶವನ್ನು ೫ ಅಂಶಗಳ ಆಧಾರದ ಮೇಲೆ ವಿಶ್ಲೇಷಣೆ ನಡೆಸಿ ಅಂಕಗಳ ಸರಾಸರಿ ಮೊತ್ತವನ್ನು ತೆಗೆದುಕೊಂಡು ಪಟ್ಟಿಯನ್ನು ಪ್ರಕಟಿಸಲಾಗಿದೆ. ಒಂದು ಲಕ್ಷ ಮಂದಿ ಪ್ರಯಾಣಿಸುವ ರಸ್ತೆಯಲ್ಲಿ ಮರಣ ಪ್ರಮಾಣ, ಕಾರಿನಲ್ಲಿ ಮುಂದೆ ಕುಳಿತುಕೊಂಡು ಪ್ರಯಾಣ ಮಾಡುವ ಎಷ್ಟು ಮಂದಿ ಸೀಟ್ ಬೆಲ್ಟ್ ಧರಿಸಿದ್ದಾರೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತ ಸಂಭವಿಸಿ ಮೃತಪಟ್ಟವರ ಅಂಕಿ-ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ಅಧ್ಯಯನ ನಡೆಸಲಾಗಿದೆ.