ಅಪಹೃತ ಯೋಧರ ಫೋಟೋ : ನಕ್ಸಲರು ಬಿಡುಗಡೆ


ರಾಯ್ ಪುರ,ಛತ್ತೀಸ್ಗಢ, ಏ. ೭- ಛತ್ತೀಸ್ ಗಡದಲ್ಲಿ ಮಾವೋವಾದಿ ನಕ್ಸಲರ ಅಟ್ಟಹಾಸ ಮುಂದುವರೆದಿರುವ ನಡುವೆ, ತಮ್ಮ ವಶದಲ್ಲಿರುವ ಕೋಬ್ರಾ ಪಡೆಯ ಬದ್ರತಾ ಸಿಬ್ಬಂದಿ ಭಾವಚಿತ್ರವನ್ನು ನಕ್ಸಲರು ಇಂದು ಬಿಡುಗಡೆ ಮಾಡಿದ್ದಾರೆ.
ನಕ್ಸಲರ ವಶದಲ್ಲಿರುವ ಕೋಬ್ರಾ ಪಡೆಯ ಭದ್ರತಾ ಸಿಬ್ಬಂದಿಯನ್ನು ರಾಕೇಶ್ವರ್ ಸಿಂಗ್ ಮನ್ಹಾನ್ಸ್ ಎಂದು ತಿಳಿದುಬಂದಿದೆ
ಮಾವೋವಾದಿ ನಕ್ಸಲ್ ಮತ್ತು ಭದ್ರತಾ ಪಡೆಗಳ ನಡುವೆ ಕಳೆದ ವಾರ ನಡೆದ ಗುಂಡಿನ ಚಕಮಕಿಯಲ್ಲಿ ೨೨ ಯೋಧರು ಹುತಾತ್ಮರಾಗಿದ್ದರು. ಈ ನಡುವೆ ಹಲವು ಭದ್ರತಾಸಿಬ್ಬಂದಿ ಕಾಣೆಯಾಗಿದ್ದರು ಅವರ ಪೈಕಿ ಓರ್ವ ಭದ್ರತಾ ಸಿಬ್ಬಂದಿಯ ಭಾವಚಿತ್ರವನ್ನು ನಕ್ಸಲಿಯರು ಬಿಡುಗಡೆ ಮಾಡಿದ್ದಾರೆ.
ಯೋಧ ರಾಕೇಶ್ವರ್ ಸಿಂಗ್ ಅವರು ಚಾಪೆಯ ಮೇಲೆ ಕುಳಿತಿರುವ ಚಿತ್ರವನ್ನು ನಕ್ಸಲರು ಬಿಡುಗಡೆ ಮಾಡಿದ್ದು ಇದು ನಕ್ಸಲೀಯರ ಅಡಗುತಾಣ ಎಂದು ಭದ್ರತಾ ಪಡೆಯ ಮೂಲಗಳು ತಿಳಿಸಿವೆ.
ನಿಷೇಧಕ್ಕೆ ಒಳಗಾಗಿರುವ ದಂಡಕಾರಣ್ಯ ವಿಶೇಷ ವಲಯ ಸಮಿತಿಯ ನಕ್ಸಲ್ ಪಡೆ ಯೋಧನ ಭಾವ ಚಿತ್ರವನ್ನು ಬಿಡುಗಡೆ ಮಾಡಿದ್ದು ನಮ್ಮ ತಂಟೆಗೆ ಬಂದರೆ ಸರಿ ಇರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ರವಾನಿಸಿದೆ.
ಏಪ್ರಿಲ್ ೩ ರಂದು ಬಿಜಾಪುರ ಮತ್ತು ಸೂಕ್ಷ್ಮ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಡೆದ ಭದ್ರತಾಪಡೆ ಮತ್ತು ಮಾವೋವಾದಿ ನಕ್ಸಲರ ಗುಂಡಿನ ಚಕಮಕಿಯಲ್ಲಿ ೨೨ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು.
ನಮ್ಮ ವಶದಲ್ಲಿರುವ ಭದ್ರತಾಸಿಬ್ಬಂದಿ ಸುರಕ್ಷಿತವಾಗಿದ್ದಾರೆ ನಮ್ಮ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ದಂಡಕಾರಣ್ಯ ವಿಶೇಷ ವಲಯ ಸಮಿತಿ ವಕ್ತಾರ ತಿಳಿಸಿದ್ದಾರೆ.
ಮೊನ್ನೆ ನಡೆದ ನಕ್ಸಲರು ಮತ್ತು ಭದ್ರತಾಪಡೆಗಳ ಗುಂಡಿನ ಚಕಮಕಿಯಲ್ಲಿಹಲವು ಯೋಧರು ಕಾಣೆಯಾಗಿದ್ದಾರೆ ಅದರಲ್ಲಿ ರಾಕೇಶ್ವರ್ ಸಿಂಗ್ ಕೂಡ ಒಬ್ಬರು