ಅಪಹರಿಸಿದ್ದ ೩೮ ಮಹಿಳೆಯರ ರಕ್ಷಣೆ

ರಾಜಸ್ತಾನ, ಜ.೭- ಜಲ್ವಾರ್ ಸಮೀಪದ ಉನ್ಹೆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಹರಣಕ್ಕೊಳಗಾಗಿದ್ದ ೩೮ ಮಹಿಳೆಯರು ಸೇರಿದಂತೆ ಹಲವು ಮಕ್ಕಳನ್ನು ರಕ್ಷಿಸುವಲ್ಲಿ ಪೊಲೀಸರ ತಂಡವೊಂದು ಯಶಸ್ವಿಯಾಗಿದೆ.
ಇಲ್ಲಿನ ಬಾಮನ್ ದೇವರಿಯನ್ ಗ್ರಾಮದಲ್ಲಿ ಒಳನುಗ್ಗಿದ್ದ ೧೦೦ ಜನರ ನೇತೃತ್ವದ ಗುಂಪೊಂದು, ಮಾರಕಾಸ್ತ್ರಗಳಿಂದ ಬೆದರಿಸಿ ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿದ್ದರು ಎಂದು ಜಲ್ವಾರ್ ಎಸ್ಪಿ ಡಾ. ಕಿರಣ್ ಕಾಂಗ್ ಸಿಂಧು ತಿಳಿಸಿದ್ದಾರೆ.
ಬಂಧಿತರು ಮಧ್ಯಪ್ರದೇಶದ ರತ್ನಂ ಜಿಲ್ಲೆಯ ಅಲೋಟ್ ಪೊಲೀಸ್ ಠಾಣೆ ಪ್ರದೇಶದಿಂದ ಬಸ್ ಮತ್ತು ಇತರ ವಾಹನಗಳಲ್ಲಿ ಬಂದಿದ್ದು, ಅವರ ಬಳಿ ಚಾಕು, ಕತ್ತಿ ಸೇರಿದಂತೆ ಶಸ್ತ್ರಾಸ್ತ್ರಗಳಿದ್ದು, ದೇವರಿಯನ್ ಗ್ರಾಮದಲ್ಲಿ ಅಪಹರಿಸಿದ್ದಾರೆ ಎನ್ನುವ ಮಾಹಿತಿ ದೊರೆತ ಬೆನ್ನಲ್ಲೇ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸ್ ಅಧಿಕಾರಿಗಳು ಅಲ್ಲಿಗೆ ತಲುಪಿ ೩೮ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಿದ್ದಾರೆ. ಪೊಲೀಸರು ಆರು ಜನರನ್ನು ವಶಕ್ಕೆ ಪಡೆದು, ಅವರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಪೊಲೀಸರು ಈ ಪ್ರಕರಣದಲ್ಲಿ ಐಪಿಸಿಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಎಸ್ಪಿ ಡಾ. ಕಿರಣ್ ಕಾಂಗ್ ಸಿಂಧು ಹೇಳಿದ್ದಾರೆ.