ಅಪಹರಣಕ್ಕೊಳಗಾದ ಯುವತಿಯ ಪತ್ತೆಗೆ ಮನವಿ

ಕಲಬುರಗಿ:ಮಾ.31:ಜೇವರ್ಗಿ ತಾಲೂಕಿನ ಹರನೂರ ಗ್ರಾಮದ 16 ವರ್ಷದ ಯುವತಿಯಾದ ಕು. ಭೀಮಬಾಯಿ ತಂದೆ ಮಲ್ಲಪ್ಪ ಹನ್ನೂರ ಇವರು 2021ರ ಫೆಬ್ರವರಿ 25 ರಂದು ಬೆಳಿಗ್ಗೆ 5 ಗಂಟೆಗೆ ಮನೆಯಿಂದ ಬಹಿರ್ದೆಸೆಗೆ ಹೊರಗಡೆ ಹೋಗಿದ್ದಾಗ ದುಷ್ಕರ್ಮಿಗಳು ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತಾರೆ ಎಂದು ಯುವತಿಯ ತಂದೆಯಾದ ಮಲ್ಲಪ್ಪ ಹನ್ನೂರ ಅವರು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.

ಯುವತಿಯನ್ನು ಈವರೆಗೂ ಹುಡುಕಿದರೂ ಸಿಕ್ಕಿರುವುದಿಲ್ಲ. ಅಪಹರಣಕ್ಕೊಳಗಾದ ಯುವತಿಯ ಎತ್ತರ 4 ಅಡಿ ಇದ್ದು, ಗೋಧಿ ಮೈಬಣ್ಣ, ದುಂಡು ಮುಖ ಹಾಗೂ ಮೊನಚು ಮೂಗು, ದಪ್ಪನೆಯ ಮೈಕಟ್ಟು ಹೊಂದಿದ್ದು ಹಾಗೂ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ.

ಈ ಯುವತಿಯು ಕೆಂಪ್ಪು ಬಣ್ಣದ ಟಾಪ್, ಹಸಿರು ಹಣ್ಣದ ಚೂಡಿದಾರ ಪ್ಯಾಂಟ್ ಹಾಗೂ ಬಿಳಿ ಮತ್ತು ಹಳದಿ ಮಿಶ್ರಿತ ಓಡಣಿ ಧರಿಸಿರುತ್ತಾರೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಯುವತಿಯ ಕುರಿತು ಮಾಹಿತಿ ಸಿಕ್ಕಲ್ಲಿ ಕೂಡಲೇ ಜೇವರ್ಗಿ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರ ಕಚೇರಿಗೆ ತಿಳಿಸಬೇಕೆಂದು ಅವರು ತಿಳಿಸಿದ್ದಾರೆ.