ಅಪವಿತ್ರ ಮೈತ್ರಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ

ಹನೂರು, ನ.8: ಪ.ಪಂ.13 ವಾರ್ಡ್‍ಗಳ ಚುನಾವಣೆಯಲ್ಲಿ ಬಹು ದೊಡ್ಡ ಪಕ್ಷವಾಗಿಹೊರ ಹೊಮ್ಮಿದಜಾತ್ಯಾತೀತ ಜನತಾದಳವನ್ನು ಹೊರಗಿಡಲುಜನಾದೇಶವನ್ನು ದಿಕ್ಕರಿಸಿ ಅಪವಿತ್ರ ಮೈತ್ರಿ ಮಾಡಿಕೊಂಡಿರುವುದುಪ್ರಜಾಪ್ರಭುತ್ವದಕಗ್ಗೊಲೆಯಾಗಿದೆಎಂದುಜೆಡಿಎಸ್‍ರಾಜ್ಯಉಪಾಧ್ಯಕ್ಷಎಂ.ಆರ್.ಮಂಜುನಾಥ್‍ಆರೋಪಿಸಿದರು.
ಹನೂರು ಪ.ಪಂ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದಚುನಾವಣೆಯಲ್ಲಿಕಾಂಗ್ರೇಸ್ ಹಾಗೂ ಬಿಜೆಪಿ ಮೈತ್ರಿಯಾಗಿಜೆಡಿಎಸ್ ಪಕ್ಷವನ್ನು ಸೋಲಿಸಿದ ಹಿನ್ನಲೆಯಲ್ಲಿ ಪಟ್ಟಣದಜೆಡಿಎಸ್‍ಕಛೇರಿಯಲ್ಲಿಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿಅವರು ಮಾತನಾಡಿದರು.
ಪ.ಪಂ. ಅಧ್ಯಕ್ಷರು ಮತ್ತುಉಪಾಧ್ಯಕ್ಷರಚುನಾವಣೆಗೆಎರಡು ಪಕ್ಷದಿಂದ6 ಸದಸ್ಯರು ಮಾತ್ರಇದ್ದು, ಸಂಸದರು ಮತ್ತು ಶಾಸಕರುತಲಾಒಂದೊಂದು ಮತಗಳನ್ನು ಚಲಾಯಿಸುವ ಮೂಲಕ ಪಕ್ಷದತತ್ವ ಸಿದ್ಧಾಂತವನ್ನು ಗಾಳಿಗೆ ತೂರಿದ್ದಾರೆ.ಅಲ್ಪ ಸಂಖ್ಯಾತರ ಪಕ್ಷಎಂದು ಬಿಂಬಿಸಿಕೊಳ್ಳುವ ಕಾಂಗ್ರೇಸ್ ಹಾಗೂ ಶಾಸಕ ಆರ್.ನರೇಂದ್ರಅಲ್ಪಸಂಖ್ಯಾತ ಮಹಿಳೆಯನ್ನು ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದಿಂದ ಅವಕಾಶ ಕಲ್ಪಿಸಿದರೇ ಅವರ ವಿರುದ್ಧ ಮತ ಚಲಾಯಿಸಿರುವುದುಅಲ್ಪಸಂಖ್ಯಾತರಿಗೆ ಮಾಡಿದದ್ರೋಹ. ದಿ.ಹೆಚ್.ನಾಗಪ್ಪ ಹಾಗೂ ದಿ.ಜಿ.ರಾಜೂಗೌಡರು ಬದ್ಧ ವೈರಿಗಳಾಗಿ ಕ್ಷೇತ್ರದಲ್ಲಿರಾಜಕಾರಣ ಮಾಡಿಕೊಂಡು ಬಂದವರು. ಅವರತರುವಾಯ ಬಂದಮಾಜಿ ಶಾಸಕಿ ಪರಿಮಳನಾಗಪ್ಪ, ಶಾಸಕ ಆರ್.ನರೇಂದ್ರ ಹೊಂದಾಣಿಕೆಯರಾಜಕಾರಣ ಮಾಡಿಕೊಂಡು ಬಂದುಇದುವರೆಗೆತೆರೆಮರೆಯಲ್ಲಿಕ್ಷೇತ್ರದಜನತೆಯನ್ನುಯಾಮಾರಿಸುತ್ತಿದ್ದರು. ಆದರೆ ಪ.ಪಂ.ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದಚುನಾವಣೆಯಲ್ಲಿತಮ್ಮ ಹೊಂದಾಣಿಕೆರಾಜಕಾರಣವನ್ನುಜಗಜ್ಜಾಹಿರು ಮಾಡಿದ್ದಾರೆ.ಕ್ಷೇತ್ರದಿಂದಜೆಡಿಎಸ್ ಮತ್ತು ನನ್ನನ್ನುಓಡಿಸಬೇಕೆಂದು ಈ ರೀತಿ ಮಾಡುತ್ತಿದ್ದಾರೆ.ಆದರೆ ನಾನು ಕ್ಷೇತ್ರದಜನತೆಯ ಸೇವೆ ಮಾಡುತ್ತಲೇಇರುತ್ತೇನೆ. ಪ.ಪಂ.ಅಧ್ಯಕ್ಷರು ಮತ್ತುಉಪಾಧ್ಯಕ್ಷರ ಸ್ಥಾನಕ್ಕೆ ವಾಮ ಮಾರ್ಗದ ಮೂಲಕ ಜಯಗಳಿಸಿರಬಹುದು. ಇದುತಾತ್ಕಾಲಿಕ. ಮುಂದೆ ಬರುವ 2ನೇ ವಾರ್ಡ್‍ಚುನಾವಣೆಯಲ್ಲಿ ನಮ್ಮಅಭ್ಯರ್ಥಿಗೆಲ್ಲುವಮೂಲಕ ಜನತೆಯ ವಿಶ್ವಾಸವನ್ನು ಗಳಿಸುತ್ತೇವೆ. ಮುಂದಿನ ದಿನಗಳಲ್ಲಿ ಪ.ಪಂ.ಅಧಿಕಾರ ಹಿಡಿಯುವುದರಜೊತೆಗೆ ವಿಧಾನಸಭಾಚುನಾವಣೆಯಲ್ಲಿಜನತೆ ಆರ್ಶಿವದಿಸಲಿದ್ದಾರೆ. ಅಕ್ಕ ತಮ್ಮನ ಒಳ ಒಪ್ಪಂದವನ್ನುಕ್ಷೇತ್ರದಜನತೆ ನೋಡುತ್ತಿದ್ದಾರೆ.ಮುಂಬರುವ ಚುನಾವಣೆಗಳಲ್ಲಿ ಇವರಿಗೆತಕ್ಕ ಪಾಠ ಕಲಿಸಲಿದ್ದಾರೆಎಂದು ಹರಿಹಾಯ್ದರು.
ಮಾಜಿ ಜಿ.ಪಂ.ಉಪಾಧ್ಯಕ್ಷ ಶಿವಮೂರ್ತಿ ಮಾತನಾಡಿ, ಮಂಜುನಾಥ್‍ಇದ್ದರೆ ನಮಗೆ ಉಳಿಗಾಲವಿಲ್ಲ ಎಂದು ತಿಳಿದು ಜೆಡಿಎಸ್ ಮಂಜುನಾಥ್‍ರವರನ್ನು ಹೊರಗಿಟ್ಟರೆ ನಾವು ರಾಜಕೀಯವಾಗಿಜೀವನ ಸಾಗಿಸಬಹುದುಎಂಬುದು ಶಾಸಕ ನರೇಂದ್ರ ಮತ್ತು ಮಾಜಿ ಶಾಸಕಿ ಪರಿಮಳನಾಗಪ್ಪನವರ ಲೆಕ್ಕಾಚಾರವಾಗಿದೆ.ರಾಷ್ಟ್ರರಾಜ್ಯದಲ್ಲಿ ಬಿಜೆಪಿ ಕಾಂಗ್ರೇಸ್‍ಕಡು ವೈರಿಗಳು ಆದರೆಕ್ಷೇತ್ರದಕಾಂಗ್ರೇಸ್ ಬಿಜೆಪಿ ನಾಯಕರುಅಧಿಕಾರದದಾಹಕ್ಕಾಗಿ ಮೈತ್ರಿರಾಜಕಾರಣ ಮಾಡುತ್ತಾ ಬಂದಿದ್ದಾರೆ. ಜನತೆಇದ್ದನ್ನು ಸಹಿಸುವುದಿಲ್ಲ ಎಂದರು.
ಶಾಗ್ಯ ನಾಗೇಂದ್ರ ಬಾಬು ಮಾತನಾಡಿ, ಶಾಸಕ ನರೇಂದ್ರ, ಮಾಜಿ ಶಾಸಕಿ ಪರಿಮಳನಾಗಪ್ಪ ಕುಟುಂಬವನ್ನು ನಂಬಿ ಕ್ಷೇತ್ರ ಎಷ್ಟೋ ಮನೆತನ ಆಳಾಗಿದೆ.ಇವರಋಣಯಾರ ಮೇಲೂ ಇಲ್ಲಆದರೆಕ್ಷೇತ್ರದಜನತೆಯಋಣಇವರ ಮೇಲಿದೆ.ಅದರಲ್ಲೂರಾಜಕಾರಣಕ್ಕೆ ದಿ.ಹೆಚ್.ನಾಗಪ್ಪ ಹಾಗೂ ಜಿ.ರಾಜೂಗೌಡರ ನಂತರ ಬಂದಇವರುಆಗಿನಿಂದಲೂಅಪವಿತ್ರರಾಜಕಾರಣ ಮಾಡುತ್ತಾ ಬಂದಿದ್ದಾರೆ. 3ನೇ ವ್ಯಕ್ತಿಯಾಕೆ ಬರಬಾರದು. ಮುಂಬರುವಗ್ರಾ.ಪಂ, ತಾ.ಪಂ, ಜಿ.ಪಂ. ಮೈತ್ರಿ ಮಾಡಿಕೊಳ್ಳುತ್ತಾರಾ ಎಂದುತೀಕ್ಷ್ಣವಾಗಿ ಟೀಕಿಸಿದರು.
ಮಾಜಿಗ್ರಾ.ಪಂ.ಅಧ್ಯಕ್ಷ ಜೆಸ್ಸಿಂ ಮಾತನಾಡಿ, ನಾನು ಮತ್ತು ಮುಸ್ಲಿಂ ಮಹಿಳೆ ಮುಮತಾಜ್ ಬಾನು ಕಳೆದ 40 ವರ್ಷಗಳಿಂದಲೂ ದಿ.ಹೆಚ್.ನಾಗಪ್ಪನವರಕುಟುಂಬಕ್ಕೆ ಬೆಂಬಲ ನೀಡುತ್ತಾ ಬಂದವರುಅವರುಒಮ್ಮೆಯಾದರುಪ.ಪಂ.ಸದಸ್ಯರನ್ನಾಗಿ ಮಾಡಿದ್ದಾರಾ, ಇನ್ನೂಅಲ್ಪಸಂಖ್ಯಾತರ ಪಕ್ಷಎಂದುಹೇಳಿಕೊಳ್ಳುವ ಕಾಂಗ್ರೇಸ್‍ನ ನರೇಂದ್ರ ಸದಸ್ಯ ಸ್ಥಾನ ನೀಡಿದ್ದಾರಾಇವರನ್ನಗೆಲ್ಲಿಸಲಿ ಅಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಲುಜೆಡಿಎಸ್‍ಆರ್.ಮಂಜುನಾಥ್ ಬರಬೇಕಾಯಿತೇಕಾಂಗ್ರೇಸ್ ಬಿಜೆಪಿಯನ್ನು ಕೋಮುವಾದಿ ಪಕ್ಷಎನ್ನುತ್ತದೆ. ಆಗಾದರೆ ಹೇಗೆ ಕೋಮುವಾದಿ ಪಕ್ಷಕ್ಕೆ ಬೆಂಬಲ ಸೂಚಿಸಿದಿರಿ ಉತ್ತರಿಸಲಿ ಎಂದು ಸವಾಲು ಹಾಕಿದರು.
ಜಿ.ಕೆ.ಹೊಸೂರು ಬಸವರಾಜು ಮಾತನಾಡಿ, ಜೆಡಿಎಸ್ ಮಂಜುನಾಥ್‍ರವರನ್ನುಒಬ್ಬಂಟಿಯಾಗಿಎದುರಿಸಲುಅಸಾಧ್ಯಎಂದುಜಂಟಿಯಾಗಿ ಸೋಲಿಸಲು ಮುಂದಾಗಿದ್ದಾರೆ. ಜಂಟಿಯಾಗಿ ಬಂದರು ಮಂಜುನಾಥ್‍ಅವರನ್ನು ಮುಂಬರುವ ಚುನಾವಣೆಗಳಲ್ಲಿ ಸೋಲಿಸಲು ಸಾಧ್ಯವಿಲ್ಲ. ಮಂಜುನಾಥ್‍ಅವರನ್ನುಕ್ಷೇತ್ರ ಬಿಟ್ಟು ಕಳುಹಿಸಿದರೆ ಮನೆಯಲ್ಲೇ ಕುಳಿತು ನೆಮ್ಮದಿಯಾಗಿರಾಜಕಾರಣ ಮಾಡಬಹುದುಎಂದು ತೀರ್ಮಾನಿಸಿದ್ದಾರೆ. ರಸ್ತೆಗಳಡಾಂಬರೀಕರಣಕ್ಕೆಕೆಮಿಕಲ್ಸ್ ಮಿಕ್ಸ್ ಮಾಡಿಮಾಡುತ್ತಿದ್ದಾರೆ. ಕಮಿಷನ್‍ರಾಜಕಾರಣ ಮಾಡುತ್ತಿದ್ದಾರೆಎಂದು ಆರೋಪಿಸಿದರು.
ಬಮೈನಾರಟಿಎಂದು ಹೇಳುವ ಕಾಂಗ್ರೇಸ್ ಹತ್ತಾರು ವರ್ಷಗಳಿಂದ ಹನೂರು ಪ.ಪಂ.ಗೆ ಸ್ಥಾನ ಪಡೆಯಲು 40 ವರ್ಷದರಾಜಕಾರಣದಲ್ಲಿ ಪ.ಪಂ. ಅಲ್ಪಸಂಮೈನಾರಿಟಿ ಸಮುದಾಯದ ಪರವಾಗಿದ್ದೇವೆ
ಈ ಸಂದರ್ಭದಲ್ಲಿಪ.ಪಂ.ಸದಸ್ಯರುಗಳಾದ ಆನಂದ್‍ಕುಮಾರ್, ಮಹೇಶ್‍ನಾಯಕ, ಮಹೇಶ್, ಮಂಜುಳ, ಪವಿತ್ರ, ಮುಮತಾಜ್‍ಬಾನು, ಮುಖಂಡರುಗಳು ಉಪಸ್ಥಿತರಿದ್ದರು.