ಅಪರ ಜಿಲ್ಲಾಧಿಕಾರಿ ಸೇರಿ ಅಧಿಕಾರಿಗಳಿಂದ ಅಂಚೆ ಮತದಾನ

ಸಂಜೆವಾಣಿ ವಾರ್ತೆ
ದಾವಣಗೆರೆ ಮೇ. ೨; ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತ ಮೇ 7 ರಂದು ಮತದಾನ ನಡೆಯುತ್ತದೆ. ಅಗತ್ಯ ಸೇವೆಯಲ್ಲಿ ತೊಡಗಿರುವ ಜಿಲ್ಲೆಯ ಮತ್ತು ಇತರೆ ಜಿಲ್ಲೆಯಲ್ಲಿನ ಮತದಾರರು ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಮತದಾನ ದಿನ ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಹೊರ ಜಿಲ್ಲೆಯ ಅಧಿಕಾರಿ, ಸಿಬ್ಬಂದಿಗಳು ಜಿಲ್ಲಾಡಳಿತ ಭವನದ ಪಕ್ಕದಲ್ಲಿನ ಸ್ಮಾರ್ಟ್‍ಸಿಟಿ ಕಟ್ಟಡದಲ್ಲಿ ಸ್ಥಾಪಿಸಲಾದ ಮತದಾನ ಸೌಲಭ್ಯ ಕೇಂದ್ರದಲ್ಲಿ ಮೇ 1 ರಂದು 228 ಮತದಾರರು ಮತದಾನ ಮಾಡಿದರು.ಅಗತ್ಯ ಸೇವಾ ಇಲಾಖೆ ಮತದಾರರು ಮತ್ತು ಮತದಾನ ದಿನ ಚುನಾವಣಾ ಕರ್ತವ್ಯದಲ್ಲಿ ತೊಡಗಿದವರಿಗೆ ಮತದಾನ ಮಾಡಲು ಮೇ 1, 2 ಮತ್ತು 3 ರಂದು ಅಂಚೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಗತ್ಯ ಸೇವಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ದಾವಣಗೆರೆ ಲೋಕಸಸಭಾ ಕ್ಷೇತ್ರದ ಮತದಾರರಾಗಿ ದಾವಣಗೆರೆ ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಕರ್ತವ್ಯ ನಿರತ 901 ಮತದಾರರು ಅಂಚೆ ಮತದಾನಕ್ಕಾಗಿ 12ಡಿ ರಡಿ ಘೋಷಣೆ ಮಾಡಿಕೊಂಡಿದ್ದರು. ಇತರೆ ಜಿಲ್ಲೆಯಲ್ಲಿದ್ದರೂ ದಾವಣಗೆರೆಗೆ ಬಂದು ಮತದಾನ ಮಾಡಬೇಕು. ಇವರಿಗೆ ಬಂದು ಮತದಾನ ಮಾಡಲು ಅನ್ಯ ಕಾರ್ಯನಿಮಿತ್ತ ರಜಾ ಸೌಲಭ್ಯವಿತ್ತದೆ. ಮೇ.1 ರಂದು ಅಗತ್ಯ ಸೇವಾ ಇಲಾಖೆ 153 ಮತದಾರರು ಅಂಚೆ ಮತದಾನ ಮಾಡಿದರು.ಮತದಾನ ದಿನ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಇತರೆ ಜಿಲ್ಲೆ ಮೂರನೇ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರದ ಮತದಾರರಾಗಿದ್ದು ಮೇ 7 ರಂದು ದಾವಣಗೆರೆ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯದಲ್ಲಿ ನಿರತಾಗಿರುವ 1128 ಮತದಾರರಲ್ಲಿ 75 ಅಧಿಕಾರಿಗಳು, ಸಿಬ್ಬಂದಿಯವರು ಮೇ 1 ರಂದು ಮತದಾನ ಮಾಡಿದರು.