ಅಪರ ಜಿಲ್ಲಾಧಿಕಾರಿಯಿಂದ ಮತದಾರರ ಮಿಂಚಿನ ನೊಂದಣಿ ಕಾರ್ಯಕ್ರಮ ಪರಿಶೀಲನೆ

ಚಿತ್ರದುರ್ಗ ನ. 13:ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ  ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯವನ್ನು ಜಿಲ್ಲಾಧಿಕಾರಿ ಇ ಬಾಲಕೃಷ್ಣ ಅವರು  ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮಿಂಚಿನ ನೊಂದಣಿ ಹಾಗೂ ಮನೆ ಮನೆ ಭೇಟಿ ಕಾರ್ಯವನ್ನು ಪರಿಶೀಲಿಸಿದರು.  ಘಟ್ಟಿಹೊಸಹಳ್ಳಿ, ಸೇವಾನಗರ, ಜಾನಕಲ್, ಕಂಠಾಪುರ ನರಸೀಪುರ, ಅಕ್ಕಿತಿಮ್ಮನಹಟ್ಟಿ ಹೊನ್ನೇನಹಳ್ಳಿ, ಯಾಲಕ್ಕಪ್ಪನಹಟ್ಟಿ, ಮದುರೆ, ದೇವಿಗೆರೆ, ಬೀಸನಹಳ್ಳಿ, ಮಾವಿನಕಟ್ಟೆ ಮುಂತಾದ ಗ್ರಾಮಗಳ ಮತಗಟ್ಟೆಗಳಿಗೆ ಭೇಟಿ ನೀಡಿದ ಅವರು ಬಿಎಲ್‍ಒಗಳು ಮತ್ತು ಬಿಎಲ್‍ಒ ಮೇಲ್ವಿಚಾರಕರಿಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಹಾಗೂ ಮನೆ ಮನೆ ಭೇಟಿ ನೀಡುವ ಕಾರ್ಯಕ್ರಮ ಯಶಸ್ವಿಗೊಳಿಸಿ, ಅರ್ಹ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಸೂಚನೆ ನೀಡಿದರು.ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಮತ್ತು ಕರಡು ಪಟ್ಟಿಯನ್ನು ಮನೆಯ ಉಪಸ್ಥಿತಿಯಲ್ಲಿ ಓದಲು ಮತ್ತು ಯಾವುದೇ ತಪ್ಪುಗಳನ್ನು ಸರಿಪಡಿಸಲು ಮತ್ತು ನಿಧನರಾದ ಮತದಾರರ ಹೆಸರನ್ನು ತೆಗೆದುಹಾಕಲು ಸಂಬಂಧಪಟ್ಟವರಿಂದ ಅರ್ಜಿಯನ್ನು ಪಡೆಯಲು ತಿಳಿಸಿದರು.  ಮುಂದಿನ ವರ್ಷ ಆರಂಭಿಕ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಗಳು ಇರುವುದರಿಂದ ಮತದಾರರ ಪಟ್ಟಿಯಲ್ಲಿ ಯಾವುದೇ ತಪ್ಪುಗಳಿಗೆ ಅವಕಾಶವಿಲ್ಲ ಮತ್ತು ಯಾವುದೇ ಅರ್ಹ ಮತದಾರರು ಹೊರಗುಳಿದಿಲ್ಲ ಎಂಬುದನ್ನು ಖಚಿತಪಡಿಸುವ ನಿಟ್ಟಿನಲ್ಲಿ ಬಿಎಲ್‍ಒ ಗಳು ಸೂಕ್ತ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.ಹೊಸದುರ್ಗ ತಹಸಿಲ್ದಾರ್ ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಅಧಿಕಾರಿಗಳು, ಬೂತ್ ಮಟ್ಟದ ಅಧಿಕಾರಿಗಳೂ ಉಪಸ್ಥಿತರಿದ್ದರು