ಅಪರೂಪದ ಪಶು ಸೇವಕ ಡಾ.ಅಣ್ಣಾರಾವ ಪಾಟೀಲ

ಕಾಳಗಿ :ಎ.29:ತಾಲೂಕಿನ ಹಿರಿಯ ಪಶುವೈದ್ಯರಾದ ಡಾ. ಅಣ್ಣಾರಾವ ಪಾಟೀಲ್ ರವರು ಎಲೆಮರೆ ಕಾಯಿಯಂತೆ ಸದ್ದಿಲ್ಲದೇ ಸಾಧನೆಯ ಪಥದಲ್ಲಿದ್ದಾರೆ. ಕಾಳಗಿ ಭಾಗದ ರೈತರ ಮನೆಯ ಮಗನಾಗಿದ್ದಾರೆ, ರೈತರು ಕರೆ ಮಾಡಿದ ತಕ್ಷಣ ಸ್ಪಂದಿಸುತ್ತಾರೆ, ರೈತರ ಅಚ್ಚುವ್ಮೆಚ್ಚಿನ ಪಶುವೈದ್ಯರಾಗಿದ್ದಾರೆ.

ಪ್ರತಿ ವರ್ಷ ಎಪ್ರಿಲ್ ತಿಂಗಳ ಕೊನೆಯ ಶನಿವಾರದಂದು ವಿಶ್ವ ಪಶು ವೈದ್ಯಕೀಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನದಂದು ಪಶು ಪ್ರಾಣಿಗಳಿಗೆ ಸೇವೆ ನೀಡುವ ಪಶುವೈದ್ಯರನ್ನು ಸ್ಮರಿಸುವುದು ಹಾಗೂ ಸಮಾಜಕ್ಕೆ ಅವರ ಕೊಡುಗೆಗಳ ಕುರಿತು ಅವಲೋಕನ ಮಡುವ ದಿನವಾಗಿದೆ. ಪ್ರಾಚೀನ ಕಾಲದಿಂದಲೂ ಕೃಷಿಯೊಂದಿಗೆ ಪಶಪಾಲನೆ ನಡೆದುಕೊಂಡು ಬಂದಿದೆ. ಪಶುಪಾಲನೆ ರೈತರ ಜೀವನಾಡಿಯಾಗಿದೆ. ಪಶುಪಾಲನಗೆ ಪಶುವೈದ್ಯ ಸೇವೆಯೇ ಜೀವಾಳವಾಗಿದೆ.

ಜಾನುವಾರು ಚಿಕಿತ್ಸೆಯೆ ಇವರ ಮೊದಲ ಗುರಿ: ಅನಾರೋಗ್ಯ ಪೀಡಿತ ಜಾನುವಾರುಗಳಿಗೆ ತುರ್ತು ಚಿಕಿತ್ಸೆ, ಅಗತ್ಯ ಬಿದ್ದರೆ ಶಸ್ತ್ರ ಚಿಕಿತ್ಸೆ ನೀಡಿ ಮಾರಣಾಂತಿಕ ಕಾಯಿಲೆಗಳಿಂದ ಜಾನುವಾರುಗಳನ್ನು ಉಳಿಸಿದ್ದಾರೆ. ಪ್ರತಿನಿತ್ಯ ರೈತರ ಕರೆಗಳಿಗೆ ಸ್ಪಂದಿಸಿ ಮಾತ್ರೆಗಳ ಮುಖಾಂತರ ನೂರಾರು ಜಾನುವಾರುಗಳ ಕಾಯಿಲೆಗಳನ್ನು ಗುಣಪಡಿಸಿದ್ದಾರೆ.

ಸಮಯ ಪರಿಪಾಲಕ: ಇವರು ಪ್ರತಿದಿನ 12 ಕ್ಕೂ ಹೆಚ್ಚು ಗಂಟೆಗಳ ಕಾಲ ಜಾನುವಾರು ಚಿಕಿತ್ಸೆ, ರೈತರ ಮನೆ ಬಾಗಿಲಿಗೆ ತುರ್ತು ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ಫಲಾನುಭವಿ ಆಧಾರರಿತ ಕಾರ್ಯಕ್ರಮಗಳು ಜಾನುವಾರು ಲಸಿಕೆ, ವಿಮೆ, ಕಛೇರಿ ಕೆಲಸ ಸೇರಿದಂತೆ ದಿನಪೂರ್ತಿ ಜಾನುವರು ಸೇವೆಯಲ್ಲಿಯೇ ಇರುವ ಇವರು ಕಾಳಗಿ ಡಾಕ್ಟರ್ ಎಂದೇ ಈ ಭಾಗದ ಹಳ್ಳಿಗಳಲ್ಲಿ ಚಿರಪರಿಚತರಾಗಿದ್ದಾರೆ.

ಚರ್ಮ ಗಂಟು ರೋಗದ ನಿಯಂತ್ರಣಕ್ಕೆ ಕ್ರಮ: ಚರ್ಮ ಗಂಟು ರೋಗೋದ್ರೆಕ ಕಾಣಿಸಿಕೊಂಡ ಜಾನುವಾರುಗಳ ರೈತರ ಮನೆಬಾಗಿಲಿಗೆ ಹೋಗಿ ನಿರಂತರವಗಿ ಚಿಕಿತ್ಸೆ ನೀಡಿದ್ದಾರೆ. ತಾಲೂಕಿನಾದ್ಯಂತ ಸಮರೋಪಾದಿಯಲ್ಲಿ ಲಸಿಕಾ ಶಿಬಿರ ಎರ್ಪಡಿಸಿ ಚರ್ಮ ಗಂಟು ರೋಗದ ನಿಯಂತ್ರಣಕ್ಕೆ ಅಪಾರವಾಗಿ ಶ್ರಮಿಸಿದ್ದಾರೆ, ಇವರ ಈ ಕಾರ್ಯದಿಂದಾಗಿ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಪಶುವೈದ್ಯರೊಳಗೊಬ್ಬ ಪಶುಪಾಲನಾ ಲೇಖಕ: ಸುಧಾರಿತ ಪಶುಪಾಲನ ಪದ್ದತಿಗಳನ್ನೊಳಗೊಂಡಂತೆ ತಮ್ಮ ಹಲವಾರು ಲೇಖನಗಳ ಮೂಲಕ ರೈತರಿಗೆ ಸಿಡಿಲಿನ ಅವಘಡ ಕುರಿತು ಜಾಗೃತೆ, ಋತುಗಳಿಗನುಸಾರವಾಗಿ ಜಾನುವಾರು ಪಾಲನೆ, ಕುರಿ, ಹಾಗೂ ಆಡು ಪಾಲನೆ, ಕುಕ್ಕುಟ ಪಾಲನೆ, ಹಾಗೂ ಹೈನುಗಾರಿಕೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಇವರು ಬರೆದ ದೇವಣಿ ಜಾನುವಾರು ತಳಿ ಹಾಗೂ ಅದರೊಂದಿಗಿನ ಯಶೋಗಾಥೆಗಳು ಎಂಬ ಲೇಖನಕ್ಕೆ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನದ ಪ್ರಶಸ್ತಿ ದೊರೆತಿದೆ. ದೂರದರ್ಶನ ಹಾಗೂ ರೇಡಿಯೋಗಳಲ್ಲಿಯೂ ಸಹ ರೈತರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಪಶುಪಾಲನಾ ಇಲಾಖೆಯ ತರಬೇತಿ ಕೇಂದ್ರ, ಪಿಟಸರ್ಡ ತರಬೆತಿ ಕೇಂದ್ರ ಹಗೂ ಕೆವಿಕೆ ರೈತರ ತರಬೇತಿ ಕೇಂದ್ರಗಳ ಸಹಕಾರದೊಂದಿಗೆ ಕಾಳಗಿ ಭಾಗದ 500 ಕ್ಕೂ ಹೆಚ್ಚು ರೈತರಿಗೆ ಸುಧಾರಿತ ಪಶು ಪಲನಾ ತರಬೇತಿಯನ್ನು ಕೊಡಿಸುವ ಮೂಲಕ ಪ್ರೇರಣಾ ಶಕ್ತಿಯಾಗಿದ್ದಾರೆ. ಈ ಭಾಗದ ಹೆವ್ಮ್ಮೆಯ ಪಶುವೈದ್ಯರಾದ ಡಾ. ಅಣ್ಣಾರಾವ ಪಾಟೀಲರ ಸೇವೆಯನ್ನು ಜಿಲ್ಲಾಡಳಿತ ಹಾಗೂ ಪಶುಪಾಲನಾ ಇಲಾಖೆ ಗುರುತಿಸಲಿ ಎಂಬುವುದು ಈ ಭಾಗದ ರೈತರ ಆಶಯವಾಗಿದೆ.