ಅಪರೂಪದ ಅನನ್ಯ ವ್ಯಕ್ತಿತ್ವದ ಸೃಜನಶೀಲ ಚಿಂತಕ ದಿ.ಎಂ.ಪಿ‌ ಪ್ರಕಾಶ್ 

ಹರಪನಹಳ್ಳಿ.ಜು.೧೨ : ಅಪರೂಪದ ಅನನ್ಯ ವ್ಯಕ್ತಿತ್ವದ ಸೃಜನಶೀಲ ಚಿಂತಕ, ಸಾಂಸ್ಕೃತಿಕ ರಾಯಬಾರಿ, ರಂಗಕರ್ಮಿ, ನಟ, ಹಂಪಿ ಉತ್ಸವದ ರೂವಾರಿ, ನಾಡಿನ ಮಾಜಿ ಉಪಮುಖ್ಯಮಂತ್ರಿಯಾಗಿ ವಿಚಾರಗಳ ಮೂಲಕ ನಾಡನ್ನು ಕಟ್ಟಿದ ಧೀಮಂತ ವ್ಯಕ್ತಿ ದಿ.ಎಂ.ಪಿ.ಪ್ರಕಾಶ್ ಆಗಿದ್ದರು ಎಂದು ತೆಗ್ಗಿನಮಠ ಶ್ರೀ ವರಸದ್ಯೋಜಾತ ಶಿವಾಚಾರ್ಯ ಹೇಳಿದರು.ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಎಂ.ಪಿ.ರವೀಂದ್ರ ಪ್ರತಿಷ್ಠಾನ ಸಹಯೋಗದೊಂದಿಗೆ ಎಂ.ಪಿ.ಪ್ರಕಾಶ್ 82 ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.ಎಂ.ಪಿ.ಪ್ರಕಾಶ್‌ರವರ ವಿಚಾರಗಳನ್ನು ಅವರ ಮಗನಾದ ದಿ.ಎಂ.ಪಿ.ರವೀಂದ್ರರವರು ಮುಂದುವರೆಸಿಕೊಂಡು ಹೋಗಿದ್ದಾರೆ, ತಾಲೂಕಿನ 371ಜೆ ಕಲಂ, 60ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್‌ಗೆ ಸಾಕಷ್ಟು ಶ್ರಮವಹಿಸಿದ್ದಾರೆ ಅವುಗಳನ್ನು ಪೂರ್ಣಗೊಳಿಸಲಿ ಎಂದು ಹೇಳಿದರು.ಕಲ್ಯಾಣ ಕರ್ನಾಟಕದ 371ಜೆ ಹೋರಾಟ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಜಾಕ್ ಉಸ್ತಾದ ಮಾತನಾಡಿ ಜೀವನದ ದಿಕ್ಕನ್ನು ಬದಲಾವಣೆ ಮಾಡಲು ಶಿಕ್ಷಣದಿಂದ ಮಾತ್ರ ಸಾದ್ಯ, ಕಠಿಣ ಶ್ರಮದಿಂದ ಮಾತ್ರ ಉನ್ನತ ಶಿಕ್ಷಣ ದಲ್ಲಿಯಶಸ್ಸು ಕಾಣಲು ಸಾದ್ಯವಾಗಿದೆ ಎಂದ ಅವರು ಇಂದು ದೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಒಟ್ಟಾರೆಯಾಗಿ ಹಿಂದೆ ಇರುವ ಕೊರಗು ಇದೆ, ಜಿಲ್ಲಾ ರಾಜ್ಯಮಟ್ಟದಲ್ಲಿ ಸಮೀಕ್ಷೆಯ ಹ ಪ್ರಕಾರ ಉನ್ನತ ವ್ಯಾಸಂಗ ಮಾಡುವವರ ಸಂಖ್ಯೆ ಶೇ 26% ಇದ್ದಾರೆ. ರಾಜ್ಯದಲ್ಲಿ 28%ಶೇ ಪದವಿ ಮಾಡುತ್ತಿದ್ದಾರೆ, ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಸರಾ ಸರಿ 7%ರಷ್ಟು ಇದ್ದು ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು ಬಡತನ, ಶೈಕ್ಷಣಿಕ ಮೂಲಭೂತ ಕೊರತೆಗಳು ಅಂಕೆ, ಸಂಖ್ಯೆ ಕಡಿಮೆಯಾಗಿದ್ದು ಕನಿಷ್ಠ ರಾಜ್ಯ ಮಟ್ಟದ ಸರಾಸರಿ ತುಂಬಲು ತಾವೆಲ್ಲರು ಉನ್ನತ ಶಿಕ್ಷಣ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.371ಜೆ ಕಲಂ ಸೌಲಭ್ಯಕ್ಕಾಗಿ ಗದಗ ಹಾಗೂ ಬಳ್ಳಾರಿಗೆ ಮೊಳಕಾಲ್ಮೂರು ಸೇರ್ಪಡೆಗೆ ಮುಂದಾಗಿರುವುದನ್ನು ಈ ಭಾಗದ ಜನ ವಿರೋಧಿಸಿದ್ದಾರೆ ಆದರೆ ಹರಪನಹಳ್ಳಿ ಸೇರ್ಪಡೆಗೆ ಸ್ವಾಗತಿಸಿದ್ದು, ಎಷ್ಟೇ ವಿರೋದ್ದವಿದ್ದರು ಹರಪನಹಳ್ಳಿ 371 ಜೆ ಕಲಂ ಅಡಿಯಲ್ಲಿ ಸೇರ್ಪಡೆಗೆ ಪ್ರಯತ್ನಪಟ್ಟವರು ದಿ.ಎಂ.ಪಿ.ರವೀAದ್ರರವರು, ಸಮಪರ್ಕವಾಗಿ ಬಳಕೆ ಮಾಡಿಕೊಳ್ಳಬೇಕು ಇದನು ಇದರ ಸಾರ್ಥಕತೆ ಅವರಿಗೆ ಸಲ್ಲುತ್ತದೆ ಎಂದರು.

 ಪ್ರಗತಿಪರ ಚಿಂತಕ ಎ.ಎಂ ವಿಶ್ವನಾಥ್ ಮಾತನಾಡಿ ಸಮಾಜವಾದಿ ಚಿಂತನೆಯಲ್ಲಿ ಎಂ.ಪಿ.ಪ್ರಕಾಶ್ ಬೆಳೆದು ಬಂದ ಹಾದಿನೆ ಹಾಗೆ ಇದೆ ರಾಜಕೀಯ ಚರ್ತುರನ್ನ ಹರಪನಹಳ್ಳಿ ತಾಲ್ಲೂಕಿನ ಜನರು ಅದು ಅವರನ್ನು ನಾವು ಸೋಲಿಸಿರುವ ನೋವು ನಮ್ಮ ತಾಲ್ಲೂಕಿನ ಜನತೆ ಇತ್ತು ಅದರ ಪ್ರತಿ ಫಲವಾಗಿ ಅವರ ಮಗ ಮಾಜಿ ಶಾಸಕ ಎಂ.ಪಿ.ರವೀAದ್ರರನ್ನು 2013ರಲ್ಲಿ ನಾವು ಗೆಲ್ಲಿಸಿದ್ದೇವೆ ಅಂದಿನ ಶಾಸಕ ರವೀಂದ್ರ ರವರು ಸತತ ಹೊರಾಟದಿಂದ ಪರಿಶ್ರಮದಿಂದ ಹಾಗೂ ಸ್ಥಳೀಯ ಪ್ರಗತಿಪರ ಚಿಂತಕ ಹೊರಾಟಗಾರರು ಮೂಲಕ ಪತ್ರ ಚಳುವಳಿ ಮಾಡಿ ಹರಪನಹಳ್ಳಿಯನ್ನೆ ಬಂದ್ ಮಾಡಿ ರವೀಂದ್ರರವರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಲು ಮುಂದಾಗಿದ್ದಾರ ಫಲವೇ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಯಾಬಿನೆಟ್ ಕರೆದು ಕ್ಯಾಬಿನೆಟ್ ಹರಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಿ ವಿಷಯ ಕ್ಯಾಬಿನೆಟ್ ನಲ್ಲಿ ಪಾಸ್ ಮಾಡಿ ನಮ್ಮನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಿ ಹೈದರಾಬಾದ್ ಕರ್ನಾಟಕ 371 ಜೆ ಪಡೆಯಲು ಕಾರಣಿಭೂತರಾದರು ಹಾಗೆಯೇ ಎಂ.ಪಿ.ರವೀAದ್ರ ರವರ ಕನಸಿನ ಕೂಸು ಆಗಿರುವ 371ಜೆ, ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್,60 ಕೆರಗಳಿಗೆ ನಿರು ಉಣಿಸೂ ಯೋಜನೆ ಗಳಲ್ಲಿ ಇನ್ನೂ ಎರಡು ಯೋಜನೆಗಳು ನೆನೆಗುದಿಗೆ ಬಿದ್ದಿದೆ ಅದರಲ್ಲಿ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ 60 ಕೆರಗಳಿಗೆ ನಿರು ಉಣಿಸೂ ಯೋಜನೆ ಆಮೆ ಗತಿಯಲ್ಲಿ ಸಾಗುತ್ತಿದೆ ಕಾಮಗಾರಿ ಚಾಲನೆಗೆ ಪ್ರಗತಿ ಪರ ಚಿಂತಕರು ಹೊರಾಟಗಾರನ್ನು ಜೊತೆಗೊಡಿ ಹೊರಟ ಮಾಡುವ ಅಗತ್ಯತೆ ಇದೆ ಅದನ್ನು ಎಂ.ಪಿ ಲತಾಮಲ್ಲಿಕಾರ್ಜುನ್ ರವರು ಮಾಡಲಿ ಎಂದು ಅವರು ಹೇಳಿದರು

ಕೆಪಿಸಿಸಿ ಪ್ರಾಧನ ಕಾರ್ಯದರ್ಶಿ ಎಂ.ಪಿ.ಲತಾಮಲ್ಲಿಕಾರ್ಜುನ್ ಮಾತನಾಡಿ ನಮ್ಮ ತಂದೆ ಹಾಗೂ ಸಹೋದರರವರ ಅನೇಕ ಜನಪರ ಕೇಸುಗಳನ್ನು ಮಾಡಿದ್ದು ಅವರನ್ನು ಈ ಕ್ಷೇತ್ರದ ಜನರು ಸ್ಮರಿಸುತ್ತಾರೆ ಅವರ ಹಾದಿಯಲ್ಲಿಯೇ ನಾವು ಕೆಲಸ ಮಾಡಲು ಮುಂದಾಗುತ್ತೇವೆ. ತಾವೆಲ್ಲರೂ ಸಹಕಾರ ನೀಡಿ ಎಂದು ಹೇಳಿದರು

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದ 220 ವಿದ್ಯಾರ್ಥಿಗಳಿಗೆ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಹೆಚ್ಚು ನೊಂದಣಿ ಮಾಡಿದ 180 ಕಾರ್ಯಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಇಓ ಕೊಟ್ರಯ್ಯ, ಎಚ್ .ಎಂ.ಗೌತಮ್, ಕೆ.ಎಂ.ಬಸವರಾಜಯ್ಯ, ಜಯಲಕ್ಷ್ಮಿ, ಕವಿತಾ, ನೇತ್ರಾವತಿ, ರತ್ನಮ್ಮ, ಮೈದೂರು ರಾಮಣ್ಣ, ಉದಯಕುಮಾರ, ಮತ್ತೂರು ಬಸವರಾಜ, ಸಾಸ್ವಿಹಳ್ಳಿ ನಾಗರಾಜ, ಶಿವರಾಜ, ನಿಟ್ಟೂರು ಹನುಮಂತ, ಪ್ರಸಾದ , ಸೇರಿದಂತೆ ಇತರರು ಇದ್ದರು.

Attachments area