ಅಪರಿಚಿತ ವಾಹನ ಡಿಕ್ಕಿ : ವಿದ್ಯಾರ್ಥಿ ಸಾವು

ಕಲಬುರಗಿ,ಏ 10: ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ವಿದ್ಯಾರ್ಥಿ ಸಾವಿಗೀಡಾದ ಘಟನೆ ಕಲಬುರಗಿ-ಜೇವರಗಿ ಹೆದ್ದಾರಿ ನಡುವಿನ ಶಹಬಾದ್ ಕ್ರಾಸ್ ಹತ್ತಿರ ಸಂಭವಿಸಿದೆ.
ಜೇವರಗಿಯ ಪ್ರವೀಣಕುಮಾರ ರಾಜಶೇಖರಯ್ಯ ( 24) ಸಾವಿಗೀಡಾದ ವಿದ್ಯಾರ್ಥಿ. ಪ್ರವೀಣಕುಮಾರ ಬೆಂಗಳೂರಿನಲ್ಲಿ ಎಂಬಿಎ ಅಭ್ಯಾಸ ಮಾಡುತ್ತಿದ್ದರು.
ರವಿವಾರ ರಾತ್ರಿ ಅವರು ಕಲಬುರಗಿ ನಗರದಲ್ಲಿನ ತಮ್ಮ ಗೆಳೆಯರನ್ನು ಭೇಟಿ ಮಾಡಿ ಜೇವರಗಿಗೆ ವಾಪಸ್ಸು ಹೊರಟಾಗ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಪ್ರವೀಣಕುಮಾರರನ್ನು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ನಸುಕಿನ ಜಾವ ಮೃತರಾದರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಸಂಚಾರಿ ಠಾಣೆ 1 ರಲ್ಲಿ ಪ್ರಕರಣ ದಾಖಲಾಗಿದೆ.