ಅಪರಿಚಿತ ವಾಹನ ಡಿಕ್ಕಿ:ಬೈಕ್ ಸವಾರ ಸಾವು

ವಿಜಯಪುರ,ನ.19-ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಕುಬಕಡ್ಡಿ ಕ್ರಾಸ್ ಬಳಿ ನಡೆದಿದೆ.
ಮೃತನನ್ನು ಕೊಲ್ಹಾರ ನಿವಾಸಿ ಮಾರುತಿ ಕಾಳೆ ಎಂದು ಗುರುತಿಸಲಾಗಿದೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.