ಅಪರಿಚಿತ ವಾಹನ ಡಿಕ್ಕಿ:ಬೈಕ್ ಸವಾರ ಸಾವು

ವಿಜಯಪುರ, ಮೇ 16: ಬೈಕ್‍ಗೆ ಅಪರಿಚಿತ ವಾಹನ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಲಗುಣಕಿ ರಸ್ತೆಯಲ್ಲಿ ನಡೆದಿದೆ.
30 ವರ್ಷದ ಶ್ರೀಶೈಲ್ ರೇವಪ್ಪ ಭೂಯ್ಯಾರ ಮೃತಪಟ್ಟಿರುವ ದುರ್ದೈವಿ. ಅಪಘಾತದ ಬಳಿಕ ಅಪರಿಚಿತ ವಾಹನ ಸವಾರ ಸ್ಥಳದಿಂದ ವಾಹನದ ಸಮೇತ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊರ್ತಿ ಪೆÇಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ