
ಇಂಫಾಲ್/ ನವದೆಹಲಿ,ನ.೨೦- ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿರುವ ಬಿರ್ ಟಿಕೇಂದ್ರಜಿತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿಯಂತ್ರಿತ ವಾಯುಪ್ರದೇಶದಲ್ಲಿ ಅಪರಿಚಿತ ಹಾರುವ ವಸ್ತು ಕಂಡು ಬಂದ ನಂತರ ಸುಮಾರು ಮೂರು ಗಂಟೆಗಳ ಕಾಲ ವಾಣಿಜ್ಯ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಘಟನೆ ನಡೆದಿದೆ.
ಇಂಫಾಲ್ ಏರ್ ಟ್ರಾಫಿಕ್ ಕಂಟ್ರೋಲ್ ,ಕೇಂದ್ರ ಕೈಗಾರಿಕಾ ಭದ್ರತಾ ಪಡೆ ನಿಯಂತ್ರಣ ಕೊಠಡಿಯಿಂದ ಎಟಿಸಿ ಟವರ್ ಮೇಲೆ ಅಪರಿಚಿತ ಹಾರುವ ವಸ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಸ್ಥಗಿತಗೊಳಿಸಿ ಪರಿಶೀಲನೆ ನಡೆಸಲಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ಎಟಿಸಿ ಟವರ್‌ನ ಟೆರೇಸ್‌ನಿಂದ ಅಪರಿಚಿತ ವಸ್ತು ಗೋಚರಿಸಿದ ಹಿನ್ನೆಲೆಯಲ್ಲಿ ತಕ್ಷಣ ಜಾಗೃತರಾದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಸ್ತುವಿನ ಬೆನ್ನತ್ತಿ ಪರಿಶೀಲನೆ ನಡೆಸಿದೆ ಎಂದು ಹೇಳಿದೆ.
ಅಪರಿಚಿತ ವಸ್ತು ಟರ್ಮಿನಲ್ ಕಟ್ಟಡದ ಮೇಲೆ ಹಾರಿತು, ಎಟಿಸಿ ಗೋಪುರದ ಮೇಲೆ ದಕ್ಷಿಣಕ್ಕೆ ಚಲಿಸಿತು ಮತ್ತು ಸ್ವಲ್ಪ ಸಮಯದವರೆಗೆ ಅಲ್ಲಿಯೇ ಇತ್ತು. ನಂತರ ಅದು ರನ್‌ವೇಯ ನೈಋತ್ಯದ ಕಡೆಗೆ ಹಾರಿತು. ಕಣ್ಮರೆಯಾಗುವ ಮೊದಲು ಸೂರ್ಯಾಸ್ತವಾಗಿತ್ತು.
ಈ ಮಧ್ಯೆ, ೧೭೩ ಪ್ರಯಾಣಿಕರೊಂದಿಗೆ ಕೋಲ್ಕತ್ತಾದಿಂದ ಇಂಫಾಲ್‌ಗೆ ಹಾರುತ್ತಿರುವ ಇಂಡಿಗೋ ವಿಮಾನವನ್ನು ಭದ್ರತಾ ಕಾರಣದಿಂದ ಹಾರಾಡ ಸ್ಥಗಿತ ಮಾಡಲಾಗಿತ್ತು. ಹಲವು ಗಂಟೆಯ ವಿಳಂಬದ ನಂತರ ಮತ್ತೆ ವಿಮಾನ ಹಾರಾಟಕ್ಕೆ ಅವಕಾಶ ಮಾಡಿಕೊಡಲಾಯಿತು ಎಂದು ಮೂಲಗಳು ತಿಳಿಸಿವೆ.
೧೮೩ ಪ್ರಯಾಣಿಕರೊಂದಿಗೆ ದೆಹಲಿಯಿಂದ ಇಂಫಾಲ್‌ಗೆ ಹಾರುತ್ತಿದ್ದ ಮತ್ತೊಂದು ಇಂಡಿಗೋ ೩೨೦ ಅನ್ನು ಸಂಜೆ ೪.೦೫ ಕ್ಕೆ ಕೋಲ್ಕತ್ತಾಗೆ ಮಾರ್ಗ ಬದಲಾಯಿಸಲಾಗಿದೆ ಎಂದು ಹೇಳಲಾಗಿದೆ.
ಎರಡು ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನಗಳನ್ನು ವಾಯುಪ್ರದೇಶವನ್ನು ಮುಚ್ಚಿದಾಗ ಇನ್ನೂ ಏಪ್ರನ್‌ನಲ್ಲಿ ನಿಲ್ಲಿಸಲಾಗಿತ್ತು ಎಂದು ಹೇಳಲಾಗಿದೆ.