ಅಪರಿಚಿತ ಮಹಿಳೆ ಶವ ಪತ್ತೆ

ಕೆ.ಆರ್.ಪೇಟೆ, ನ.19: ತಾಲೂಕಿನ ಹೇಮಗಿರಿ ಪಾಲ್ಸ್ ಬಳಿ ಸ್ಥಾಪಿತವಾಗಿರುವ ತ್ರಿಶೂಲ್ ಜಲ ವಿದ್ಯುತ್ ಉತ್ಪಾದನಾ ಕೇಂದ್ರದ ಮುಖ್ಯ ದ್ವಾರದ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಕೈಕಾಲುಗಳು ಹಾಗೂ ರುಂಡ ಮುಂಡವನ್ನು ಕತ್ತರಿಸಿ ಭಯಾನಕವಾಗಿ ಕೊಲೆ ಮಾಡಿ ಅಪರಿಚಿತ ದುಷ್ಕರ್ಮಿಗಳು ಇಲ್ಲಿಗೆ ತಂದು ಬಿಸಾಡಿ ಹೋಗಿರಬಹುದು ಎಂದು ಬಂಡಿಹೊಳೆ ಗ್ರಾಮಸ್ಥರು ಹಾಗೂ ಪೆÇೀಲಿಸರು ಶಂಕಿಸಿದ್ದಾರೆ.
ಸುಮಾರು 25 ರಿಂದ 30 ವಯಸ್ಸಿನ ಯುವತಿಯನ್ನು ಬರ್ಭರವಾಗಿ ತುಂಡು ತುಂಡಾಗಿ ಕತ್ತರಿಸಿ ಕೊಲೆಮಾಡಿರುವ ದುಷ್ಕರ್ಮಿಗಳು ಮೃತದೇಹವನ್ನು ಗೋಣಿಚೀಲದಲ್ಲಿ ಕಟ್ಟಿ ಕಾರಿನಲ್ಲಿಟ್ಟುಕೊಂಡು ಬಂದು ಇಲ್ಲಿನ ನಾಲೆಗೆ ಎಸೆದು ಹೋಗಿದ್ದಾರೆ. ಕೈಕಾಲುಗಳು, ರುಂಡ-ಮುಂಡ, ತಲೆ ಹಾಗೂ ದೇಹದ ಭಾಗವನ್ನು ಪೆÇೀಲೀಸರು ಪತ್ತೆಮಾಡಿದ್ದು ಮೃತ ದೇಹದ ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಮೃತ ಮಹಿಳೆಯ ಮೂಗಿನಲ್ಲಿ ಕೆಂಪು ಹರಳಿನ ಮೂಗುತಿ, ಬಲಗೈನ ಮುಂಗೈನ ಮೇಲೆ ಮೀನಿನ ಹಚ್ಚೆಯ ಗುರುತು ಇರುತ್ತದೆ. ಮೃತ ಮಹಿಳೆಯ ವಾರಸುದಾರರು ಯಾರಾದರೂ ಇದ್ದಲ್ಲಿ ಕೆ.ಆರ್.ಪೇಟೆ ಗ್ರಾಮಾಂತರ ಪೆÇೀಲಿಸರನ್ನು ಸಂಪರ್ಕಿಸಬೇಕು ಎಂದು ಪೆÇೀಲಿಸ್ ಪ್ರಕಟಣೆಯು ತಿಳಿಸಿದೆ.
ಹೊಸಕೋಟೆ ಕ್ಷೇತ್ರದ ಶಾಸಕರಾದ ಶರತ್ ಬಚ್ಚೇಗೌಡರ ಒಡೆತನದ ತಾಲೂಕಿನ ಹೇಮಗಿರಿಯ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತ್ರಿಶೂಲ್ ಜಲವಿದ್ಯುತ್ ಉತ್ಪಾದನಾ ಕೇಂದ್ರದ ಬಳಿ ಕತ್ತರಿಸಿ ತುಂಡು ತುಂಡಾಗಿರುವ ಮಹಿಳೆಯ ಮೃತ ದೇಹವು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಕೆ.ಎನ್.ಸುಧಾಕರ್, ನಾಗಮಂಗಲ ಡಿವೈಎಸ್‍ಪಿ ನವೀನ್‍ಕುಮಾರ್, ಗ್ರಾಮಾಂತರ ಪೆÇೀಲಿಸ್ ಠಾಣೆಯ ಸಬ್‍ಇನ್ಸ್ಪೆಕ್ಟರ್ ಸುರೇಶ್ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೆÇೀಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.