ಅಪರಾಧ ಸುದ್ದಿಗಳು

ವಿಚಾರಣಾಧೀನ ಕೈದಿ ಸಾವು
ಕಲಬುರಗಿ.ನ.7: ನಗರದ ಸೆಂಟ್ರಲ್ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬರು ಮೃತಪಟ್ಟಿದ್ದಾರೆ. ಎಂಟು ದಿನಗಳ ಹಿಂದಷ್ಟೆ ಒಬ್ಬ ಕೈದಿ ಮೃತಪಟ್ಟಿದ್ದರು.
ಸಿದ್ದಪ್ಪ ವರಗಿ (24) ಮೃತಪಟ್ಟಿರುವ ಕೈದಿ. ದೇವಲಗಾಣಗಾಪುರದಲ್ಲಿ ಜನೇವರಿ ತಿಂಗಳಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ. ರಕ್ತಹೀತನೆ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಆತನನ್ನು ಐದು ದಿನಗಳ ಹಿಂದೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ನಸುಕಿನ ಜಾವ ಕೊನೆಯುಸಿರೆಳೆದರು.

ಎಸಿಪಿ ಜೆ.ಎಚ್.ಇನಾಮದಾರ, ಇನ್‍ಸ್ಪೆಕ್ಟರ್ ತಮ್ಮರಾಯ ಪಾಟೀಲ್ ಹಾಗೂ ಸಿಬ್ಬಂದಿ ಭೇಟಿ ನೀಡಿದರು. ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಿ ವಾರಸುದಾರರಿಗೆ ಶವ ಹಸ್ತಾಂತರಿಸಲಾಯಿತು. ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುವಿವಿ ಸಿಂಡಿಕೇಟ್ ಸದಸ್ಯೆಗೆ ಅತ್ತೆ,ನಾದಿನಿಯರಿಂದ ಕಿರುಕುಳ
ಕಲಬುರಗಿ : ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿರುವ ಡಾ.ಪಲ್ಲವಿ ಪಾಟೀಲ್ ಅವರಿಗೆ ಅತ್ತೆ,ಮಾವ, ಪತಿಯ ಸಹೋದರರಿ ಸೇರಿಕೊಂಡು ದೈಹಿಕ ಮಾನಸಿಕ ಕಿರುಕುಳ ನೀಡಿರುವುದು ವರದಿಯಾಗಿದೆ. ಅಲ್ಲದೆ ಅವರ ಪತಿ ವಿವೇಕಾ ಕರಂಜೆ ಅವರಿಗೆ ತಾಯಿ ಪ್ರತಿದಿನ ಮಬ್ಬು ಬರಿಸುವ ಮಾತ್ರೆ ನುಂಗಿಸುತ್ತಿದ್ದಾರೆ. ಅಲ್ಲದೆ ಮಗನಿಂದ ಡಿವೋರ್ಸ್ ಕೊಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.
ಡಾ.ಪಲ್ಲವಿ ಅವರನ್ನು ಕಲಬುರಗಿಯ ವಿಠ್ಠಲ್ ನಗರದ ನಿವಾಸಿಯಾಗಿರುವ ವಿವೇಕ ಕರಂಜೆ ಅವರೊಂದಿಗೆ ಫೆ.12, 2020 ರಂದು ಮದುವೆಯಾಗಿತ್ತು. ಆಗ 40 ತೊಲೆ ಚಿನ್ನ, ಐದು ಕೆಜಿ ಬೆಳ್ಳಿ ನೀಡಿ, ಮದುವೆ ಮಾಡಿಕೊಟ್ಟಿದ್ದಾರೆ. ಆದರೆ, ಅತ್ತೆ ಪುಷ್ಪಲತಾ, ಮಾವ ವೈಜನಾಥ ಕರಂಜೆ, ನಾದಿಯರಾದ ಡಾ.ನಿವೇದಿತಾ, ದಿವ್ಯದೀಪ, ಸ್ನೇಹಲತಾ ಸೇರಿಕೊಂಡು ನಿತ್ಯ ಹೊಡೆಬಡಿ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ತವರು ಮನೆಯಿಂದ 40 ಲಕ್ಷ ರೂ. ಅರ್ಧ ಕೆಜಿ ಚಿನ್ನ, 25 ಕೆಜಿ ಬೆಳ್ಳಿ ತರುವಂತೆ ಪೀಡಿಸುತ್ತಿದ್ದಾರೆ. ಹಲವು ಸಲ ಹೊಡೆದು ಮನೆಯ ಹೊರಗಡೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪತಿ ವಿವೇಕ ಒಳ್ಳೆಯವರಿದ್ದು, ಅವರ ಮುಗ್ಧತೆಯನ್ನು ಗಂಡನ ಮನೆಯವರೆಲ್ಲರು ದುರುಪಯೋಗ ಮಾಡಿಕೊಂಡು ಹಿಂಸೆ ನೀಡುತ್ತಿದ್ದಾರೆ. ಹಲವು ಸಲ ಬಳಿಯಿದ್ದ ಚಿನ್ನಾಭರಣ, ಹಣವನ್ನು ಕಿತ್ತುಕೊಂಡು ಹಿಂಸಿಸಿದ್ದಾರೆ. ಈ ಕುರಿತು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಡಿಕ್ಕಿ ಬೈಕ್ ಸವಾರ ಸಾವು
ಕಲಬುರಗಿ-ಜೇವರ್ಗಿ ರಸ್ತೆಯಲ್ಲಿರುವ ಶಹಾಬಾದ ಕ್ರಾಸ್ ಹತ್ತಿರದಲ್ಲಿ ಬೈಕ್‍ಗೆ ಲಾರಿ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾರೆ.

ಬೀರಪ್ಪ ಎಂಬುವರೇ ಮೃತಪಟ್ಟವರು. ಮಿಣಜಗಿಯವರು. ಕೆಲಸ ನಿಮಿತ್ತ ಬೈಕ್ ಮೇಲೆ ಮಲ್ಲಾ ಕಡೆಗೆ ಹೋಗುತ್ತಿದ್ದಾಗ ವಿಜಯಪುರ ಕಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಇನ್‍ಸ್ಪೆಕ್ಟರ್ ರಮೇಶ ಕಾಂಬಳೆ, ಪಿಎಸ್‍ಐ ಭಾರತಿಬಾಯಿ ಧನ್ನಿ ಮತ್ತು ಸಿಬ್ಬಂದಿ ಭೇಟಿ ನೀಡಿದರು. ಸಂಚಾರ ಠಾಣೆ-1ರಲ್ಲಿ ಪ್ಕಕರಣ ದಾಖಲಾಗಿದೆ.

ಕಿರಾಣಿ ಅಂಗಡಿಯಲ್ಲಿ ಮದ್ಯ ವಶ
ಕಲಬುರಗಿ ತಾಲ್ಲೂಕಿನ ವೆಂಕಟಬೇನೂರ ಗ್ರಾಮದ ಕಿರಾಣಿ ಅಂಗಡಿಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿದ್ದ 13.86 ಲೀಟರ್ ಮದ್ಯ ಮತ್ತು 15.28 ಲೀಟರ್ ಬಿಯರ್‍ನ್ನು ಅಬಕಾರಿ ಕಲಬುರಗಿ ವಲಯ 1 ಸಿಬ್ಭಂದಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಮದ್ಯ ಮಾರಾಟ ಮಾಡುತ್ತಿದ್ದ ದುರ್ಗೇಶ ರಾಜೇಂದ್ರ ಬೋವಿ ಪರಾರಿಯಾಗಿದ್ದಾನೆ.
ದಾಳಿಯ ಕಾಲಕ್ಕೆ ಜಪ್ತಿ ಮಾಡಿಕೊಂಡ ಮದ್ಯದ ಒಟ್ಟಾರೆ ಮೊತ್ತ 7,500 ರೂ.ಗಳಾಗಿದೆ. ಅಧಿಕಾರಿ ಇಸ್ಮಾಯಿಲ್ ಇನಾಮದಾರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀP್ಷÀಕ ಬಾಲಕೃಷ್ಣ ಮುದಗಣ್ಣ, ಉಪ ನಿರೀP್ಷÀಕ ದಾವಲಸಾಬï ಶಿಂದೋಗಿ, ಸಿಬ್ಬಂದಿ ರಾಜೇಂದ್ರ, ಮೋಹನ, ಶಿವಪ್ಪಗೌಡ, ಅರವಿಂದ ಹಾಗೂ ವಸಂತ ಕೂಡಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ. ಅಬಕಾರಿ ಠಾಣೆಯಲ್ಲಿ ಕೇಸ್ ದಾಖ ಲಾಗಿದೆ.