ಅಪರಾಧ ತಡೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ

ಧಾರವಾಡ,ನ24: ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಅಪರಾಧ ಚಟುವಟಿಕೆ ನಿಯಂತ್ರಿಸಲು ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೆÇಲೀಸ್ ಆಯುಕ್ತ ಲಾಬುರಾಮ ಹೇಳಿದರು.
ನಗರದ ಜರ್ನಲಿಸ್ಟ್ ಗಿಲ್ಡ್ ವತಿಯಿಂದ ಆಯೋಜಿಸಿದ್ದ ಮೀಟ್ ದಿ ಪ್ರೇಸ್ ನಲ್ಲಿ ಮಾತನಾಡಿದ ಅವರು, ಭಯದ ವಾತಾವರಣ ಸೃಷ್ಟಿಸುವ ಪ್ರಕರಣ, ಅಪಘಾತ ಪ್ರಕರಣ, ಚಾಕು ಇರಿತ ಪ್ರಕರಣ ಹಾಗೂ ಸಾರ್ವಜನಿಕರಿಗೆ ಬೆದರಿಕೆ ಪ್ರಕರಣಗಳ ಕುರಿತು ಜನರು ಸಹ ಪೆÇಲೀಸ್ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.
ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆ ನಾವು ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಿದ್ದರಾಗಿರುತ್ತೇವೆ. ಸೈಬರ್ ಕ್ರೈಂ ಪ್ರಕರಣ ನಿಯಂತ್ರಣ ಹೆಚ್ಚಳ ಸಂಬಂಧಿಸಿದಂತೆ ಜನರು ಸಹ ಜಾಗೃತರಾಗಬೇಕು ಎಚ್ಚರಿಕೆ ವಹಿಸಬೇಕು ಈ ಕುರಿತು ಪೆÇಲೀಸ್ ಇಲಾಖೆ ಸದಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.